ಅಮೇಜ್ ಪ್ರತಿಸ್ಪರ್ಧಿಯಾಗಿ ಹ್ಯುಂಡೈ ಕಾಂಪಾಕ್ಟ್ ಸೆಡಾನ್ ಕಾರು

By Nagaraja

ದೇಶದ ಎರಡನೇ ಅತಿದೊಡ್ಡ ಪ್ರಯಾಣಿಕ ಕಾರು ತಯಾರಿಕ ಸಂಸ್ಥೆಯಾಗಿರುವ ಹ್ಯುಂಡೈ ನೂತನ ಕಾಂಪಾಕ್ಟ್ ಸೆಡಾನ್ ಕಾರನ್ನು ಮುಂಬರುವ 2014 ಇಂಡಿಯಾ ಆಟೋ ಎಕ್ಸ್ ಪೋ ಮುಂಚಿತವಾಗಿ ಅನಾವರಣ ಮಾಡಲಿದೆ.

ಈ ಬಗ್ಗೆ ಸಂಸ್ಥೆಯು ಸ್ಪಷ್ಟನೆ ನೀಡಿದ್ದು, ಫೆಬ್ರವರಿ 4ರಂದು ನೂತನ ಕಾರು ಪ್ರದರ್ಶನಗೊಳಿಸುವುದಾಗಿ ತಿಳಿಸಿದೆ. ಇದು ದೆಹಲಿ ಆಟೋ ಎಕ್ಸ್ ಪೋ ಅಧಿಕೃತ ದಿನಾಂಕಕ್ಕಿಂತಲೂ ಒಂದು ದಿನ ಮುಂಚಿತವಾಗಿರಲಿದೆ.

Hyundai Compact sedan

ಇದೇ ಸಂದರ್ಭದಲ್ಲಿ ಲಾಂಚ್ ದಿನಾಂಕ ಯಾವಾಗ ಎಂಬುದು ಸರಿಯಾಗಿ ತಿಳಿದು ಬಂದಿಲ್ಲ. ಎಲ್ಲವೂ ಅಂತಿಮ ಘಟ್ಟದಲ್ಲಿರುವುದರಿಂದ ನಿಕಟ ಭವಿಷ್ಯದಲ್ಲೇ ಹ್ಯುಂಡೈ ಕಾಂಪಾಕ್ಟ್ ಸೆಡಾನ್ ಕಾರನ್ನು ದೇಶದ ಗ್ರಾಹಕರು ಬರ ಮಾಡಿಕೊಳ್ಳಬಹುದಾಗಿದೆ.

ಗ್ರಾಂಡ್ ಐ10 ಹ್ಯಾಚ್‌ಬ್ಯಾಕ್ ಕಾರಿಗೆ ಬಳಕೆ ಮಾಡಲಾದ ಬಿಎ ತಲಹದಿಯನ್ನು ನೂತನ ಸೆಡಾನ್ ಕಾರು ಸಹ ಹಂಚಿಕೊಳ್ಳಲಿದೆ. ಈಗಾಗಲೇ ಯಶಸ್ವಿ ರಸ್ತೆ ಪರೀಕ್ಷೆ ನಡೆಸಿರುವ ಹ್ಯುಂಡೈ ಹೊಸ ಸೆಡಾನ್ ಕಾರು ಉತ್ತಮ ಕ್ಯಾಬಿನ್ ಸ್ಪೇಸ್ ಕೂಡಾ ಹೊಂದಿದೆ.

ಪೆಟ್ರೋಲ್ ಹಾಗೂ ಡೀಸೆಲ್ ವೆರಿಯಂಟ್‌ಗಳಲ್ಲಿ ಹ್ಯುಂಡೈ ಹೊಸ ಸೆಡಾನ್ ಕಾರು ಆಗಮನವಾಗಲಿದೆ. ಇದು ಫೋರ್ ಸಿಲಿಂಡರ್, 1.2 ಲೀಟರ್ ಡ್ಯುಯಲ್ ವಿಟಿವಿಟಿ ಪೆಟ್ರೋಲ್ ಮತ್ತು ತ್ರಿ ಸಿಲಿಂಡರ್ 1.1 ಲೀಟರ್ ಯು2 ಡೀಸೆಲ್ ಎಂಜಿನ್ ಪಡೆದುಕೊಳ್ಳಲಿದೆ. ಹ್ಯುಂಡೈನ ಈ ಕಾರು ಹೋಂಡಾ ಅಮೇಜ್ ಹಾಗೂ ಮಾರುತಿ ಸುಜುಕಿ ಡಿಜೈರ್ ಆವೃತ್ತಿಗಳಿಗೆ ಸೆಡ್ಡು ನೀಡಲಿದೆ.

More from DriveSpark

Article Published On: Saturday, January 25, 2014, 14:48 [IST]
English summary
Hyundai Motor India Ltd. is all set to unveil its first Compact Sedan on Tuesday, February 4th 2014 at the Hotel Taj Palace at 1pm in New Delhi. Stay tuned to drivespark.com for latest updates.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+