ಮಗದೊಂದು ಆಲ್ಟೊ ಬರಮಾಡಿಕೊಳ್ಳಲು ಸಜ್ಜಾಗಿರಿ

By Nagaraja

ದೇಶದ ಅತ್ಯಂತ ಜನಪ್ರಿಯ ಕಾರುಗಳಲ್ಲಿ ಒಂದಾಗಿರುವ ಆಲ್ಟೊ, ದೇಶದ ಮಧ್ಯಮ ವರ್ಗದ ಗ್ರಾಹಕರ ಅಚ್ಚುಮೆಚ್ಚಿನ ವಾಹನ. ಪ್ರಸ್ತುತ ದೇಶದ ಮಾರುಕಟ್ಟೆಯಲ್ಲಿ ಅತಿ ಹೆಚ್ಚಿನ ಮಾರಾಟ ಗಿಟ್ಟಿಸಿಕೊಂಡಿರುವ ಆಲ್ಟೊ ಸಾಲಿಗೆ ಮಗದೊಂದು ಮಾದರಿ ಸೇರ್ಪಡೆಯಾಗಲಿದೆ.

ಸ್ಥಾನ ಯಾವುದು?
ಈ ಸಂಬಂಧ ದೇಶದ ಅತಿದೊಡ್ಡ ಪ್ರಯಾಣಿಕ ಕಾರು ತಯಾರಿಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ ಸಿದ್ಧತೆ ನಡೆಸುತ್ತಿದೆ. ವರದಿಗಳ ಪ್ರಕಾರ ಆಲ್ಟೊ ಹೊಸ ಮಾದರಿಯು, ನೈಜ ಆಲ್ಟೊ ಹಾಗೂ ಅಲ್ಟೊ ಕೆ10 ನಡುವೆ ಗುರುತಿಸಿಕೊಳ್ಳಲಿದೆ.

Maruti Alto

ಯಾವ ಎಂಜಿನ್?
ನೂತನ ಆಲ್ಟೊ ಮಾದರಿಯು ಕೆ10 ಆವೃತ್ತಿಯಲ್ಲಿರುವುದಕ್ಕೆ ಸಮಾನವಾದ 1.0 ಲೀಟರ್ ಎಂಜಿನ್‌ನಿಂದ ನಿಯಂತ್ರಿಸ್ಪಡಲಿದೆ. ಆದರೆ ಸ್ಮರ್ಧಾತ್ಮಕ ದರದಲ್ಲಿ ಬಿಡುಗಡೆ ಮಾಡುವ ನಿಟ್ಟಿನಲ್ಲಿ ಕೆಲವೊಂದು ಸೌಲಭ್ಯಗಳಿಗೆ ಕತ್ತರಿ ಪ್ರಯೋಗವಾಗುವ ಸಾಧ್ಯತೆಯಿದೆ.

ಬದಲಾವಣೆಗಳೇನು?
ನೂತನ ಮಾದರಿಯು ಕೆಲವೊಂದು ಕಾಸ್ಮೆಟಿಕ್ ಬದಲಾವಣೆಗಳ ಜತೆಗೆ ಪರಿಷ್ಕೃತ ಹೆಡ್‌ಲ್ಯಾಂಪ್, ಟೈಲ್ ಲ್ಯಾಂಪ್, ಬಾಡಿ ಗ್ರಾಫಿಕ್ಸ್ ಹಾಗೂ ಪರಿಷ್ಕೃತ ಇಂಟಿರಿಯರ್ ಪಡೆದುಕೊಳ್ಳಲಿದೆ.

ದರ ಮಾಹಿತಿ
ನಿಸ್ಸಂಶಯವಾಗಿಯೂ ನೂತನ ಮಾದರಿಯು ಆಲ್ಟೊ ಕೆ10 ಮಾದರಿಯ ಕೆಳಸ್ತರದಲ್ಲಿ ಗುರುತಿಸಿಕೊಳ್ಳಲಿದೆ. ಆದರೆ ಸಮಕಾಲೀನ ಆಲ್ಟೊ 800 ಮಾದರಿಗಿಂತಲೂ ಕಡಿಮೆ ದರ ಅಥವಾ ದುಬಾರಿಯಾಗಲಿದೆಯೇ ಎಂಬುದು ಇನ್ನಷ್ಟೇ ತಿಳಿದು ಬರಬೇಕಾಗಿದೆ.

ಪವರ್...
ಕೆ10 ಆವೃತ್ತಿಯಲ್ಲಿರುವ 4 ಸಿಲಿಂಡರ್, 16 ವಾಲ್ವ್ ಯುನಿಟ್‌‌ನಿಂದ ನಿಯಂತ್ರಿಸ್ಪಡಲಿದ್ದು, ಪ್ರತಿ ನಿಮಿಷಕ್ಕೆ 6200 ಆವರ್ತನಕ್ಕೆ 68 ಅಶ್ವಶಕ್ತಿ ಉತ್ಪಾದಿಸಲಿದೆ. ಹಾಗೆಯೇ ಪ್ರತಿ ನಿಮಿಷದಲ್ಲಿ 3500 ಆವರ್ತನಕ್ಕೆ 90 ಎನ್‌ಎಂ ಟಾರ್ಕ್ ಉತ್ಪಾದಿಸಲಿದೆ. ಅಂತೆಯೇ ಸ್ಟಾಂಡರ್ಡ್ 5 ಸ್ಪೀಡ್ ಟ್ರಾನ್ಸ್‌ಮಿಷನ್ ಹೊಂದಿದೆ.

More from DriveSpark

Article Published On: Thursday, May 29, 2014, 11:51 [IST]
English summary
Rumour has it that Maruti Suzuki will introduce a new Alto model that will be placed between the original Alto and the Alto K10.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+