ಬೆಝ್ ಎಎಂಜಿ ಜಿಟಿ ಸ್ಪೋರ್ಟ್ಸ್ ಕಾರು ಅನಾವರಣ
ಜರ್ಮನಿಯ ಐಷಾರಾಮಿ ವಾಹನ ತಯಾರಕ ಸಂಸ್ಥೆಯಾಗಿರುವ ಮರ್ಡಿಡಿಸ್ ಬೆಂಝ್‌ನ ನಿರ್ವಹಣಾ ವಿಭಾಗವಾಗಿರುವ ಎಎಂಜಿ, ಅತಿ ನೂತನ ಜಿಟಿ ಕ್ರೀಡಾ ಕಾರನ್ನು ಅನಾವರಣಗೊಳಿಸಿದೆ.
ಕಳೆದ ಕೆಲವು ಸಮಯಗಳಿದ ಪದೇ ಪದೇ ಮಾಹಿತಿ ನೀಡುತ್ತಿದ್ದ ಬೆಂಝ್, ಕೊನೆಗೂ ತನ್ನ ದುಬಾರಿ ಕಾರನ್ನು ಅನಾವರಣಗೊಳಿಸಿದೆ. ಇದು ಟ್ವಿನ್ ಟರ್ಬೊ ಚಾರ್ಜ್ಡ್ 4.0 ಲೀಟರ್ ವಿ8 ಎಂಜಿನ್ ಪಡೆದುಕೊಳ್ಳಲಿದೆ.

ಪ್ರಮುಖವಾಗಿಯೂ ಎಸ್‌ಎಲ್‌ಎಸ್ ಬದಲಿ ಕಾರಾಗಿ ಇದು ಗುರುತಿಸಿಕೊಳ್ಳಲಿದೆ. ಅಲ್ಲದೆ ಪೋರ್ಷೆಯ ಐಕಾನಿಕ್ 911 ಸವಾಲನ್ನು ಎದುರಿಸಲಿದೆ.
ಹೊಸ ಕಾರು ರಿಯರ್ ವೀಲ್ ಡ್ರೈವ್ ಕೂಪೆ ಕಾರಾಗಿರಲಿದ್ದು, ಪ್ರಸಕ್ತ ಸಾಲಿನಲ್ಲೇ ನಡೆಯಲಿರುವ ಲಾಸ್ ಏಜಂಲೀಸ್ ಮೋಟಾರು ಶೋದಲ್ಲಿ ಪ್ರದರ್ಶನ ಕಾಣಲಿದೆ. ಬಳಿಕ 2015 ಮೊದಲ ತ್ರೈಮಾಸಿಕ ಅವಧಿಯಲ್ಲಿ ಆಸ್ಟ್ರೇಲಿಯಾ ಮಾರುಕಟ್ಟೆ ತಲುಪಲಿದೆ. ಹಾಗಿದ್ದರೂ ದರಗಳ ಬಗ್ಗೆ ಯಾವುದೇ ಮಾಹಿತಿ ಹೊರಬಂದಿಲ್ಲ.


Click it and Unblock the Notifications