2014 ಫೋಕ್ಸ್‌ವ್ಯಾಗನ್ ಪೊಲೊ ಜುಲೈನಲ್ಲಿ ಲಾಂಚ್
ಅಂದ ಹಾಗೆ ನೀವು ಕೂಡಾ 2014 ಫೋಕ್ಸ್‌ವ್ಯಾಗನ್ ಪೊಲೆ ಆಗಮನಕ್ಕಾಗಿ ಕಾಯುತ್ತಿದ್ದೀರಾ? ಇದೇ ವರ್ಷಾರಂಭದಲ್ಲಿ ಯುರೋಪ್ ಪ್ರವೇಶಿಸಿದ್ದ ಈ ಬಹುನಿರೀಕ್ಷಿತ ಕಾರು ಸದ್ಯದಲ್ಲೇ ಭಾರತ ಮಾರುಕಟ್ಟೆಯನ್ನು ಪ್ರವೇಶಿಸಲಿದೆಯೆಂತೆ!
ವರದಿಗಳ ಪ್ರಕಾರ 2014 ಫೋಕ್ಸ್‌ವ್ಯಾಗನ್ ಪೊಲೊ ಪ್ರಸಕ್ತ ಸಾಲಿನ ದ್ವಿತಿಯಾರ್ಧದಲ್ಲಿ ಅಂದರೆ ಜುಲೈ ವೇಳೆಯಾಗುವಾಗ ಬಿಡುಗಡೆಯಾಗಲಿದೆ. ಇದು ಹಿಂದಿನ ಆವೃತ್ತಿಗಿಂತಲೂ ಆಕರ್ಷಕವಾಗಿ ಕಾಣಿಸಲಿದೆ ಎಂಬುದು ತಯಾರಕರ ವಾದ.

ಹೊಸ ನೋಟ ಹಾಗೂ ವೈಶಿಷ್ಟ್ಯದ ಜತೆಗೆ ಈಗ ಚಾಲ್ತಿಯಲ್ಲಿರುವ ಪೊಲೊ ಎಂಜಿನ್ ಬಳಕೆ ಮಾಡಲಾಗಿರುತ್ತದೆ. ಆದರೆ ಪ್ರೀಮಿಯಂ ವರ್ಷನ್ ಎಂಜಿನ್ ಮಾನದಂಡಗಳಲ್ಲಿ ವ್ಯತ್ಯಾಸ ಕಂಡುಬರುವ ಸಾಧ್ಯತೆಯಿದೆ.
ಅಂದರೆ 1.6 ಯುನಿಟ್ ಜಾಗದಲ್ಲಿ 1.5 ಲೀಟರ್, 4 ಸಿಲಿಂಡರ್ ಡೀಸೆಲ್ ಎಂಜಿನ್ ಬಳಕೆ ಮಾಡುವ ಸಾಧ್ಯತೆಯಿದೆ. ಇದು 105 ಅಶ್ವಶಕ್ತಿ (250 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ತೆರೆಗೆ ಕಡಿತದ ನಿಟ್ಟಿನಲ್ಲಿ 1.5 ಎಂಜಿನ್ ಆಳವಡಿಸಲಾಗುತ್ತದೆ. ಜತೆಗೆ ಡಿಎಸ್‌ಜಿ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಸಹ ಲಭ್ಯವಿರಲಿದೆ. ಇನ್ನೊಂದೆಡೆ 1.2 ಟರ್ಬೊ ಪೆಟ್ರೋಲ್ ಎಂಜಿನ್ 105 ಅಶ್ವಶಕ್ತಿ ಉತ್ಪಾದಿಸಲಿದೆ.


Click it and Unblock the Notifications








