ಹಬ್ಬದ ಆವೃತ್ತಿಗೆ ನಿಸ್ಸಾನ್ ಅತ್ಯಾಕರ್ಷಕ ಕೊಡುಗೆ
ನಿಧಾನವಾಗಿ ದೇಶದ ಪ್ರಯಾಣಿಕ ಕಾರು ಮಾರುಕಟ್ಟೆಯಲ್ಲಿ ತನ್ನ ಸಾನಿಧ್ಯ ಗಟ್ಟಿ ಪಡಿಸುತ್ತಿರುವ ಜಪಾನ್ ಮೂಲದ ದೈತ್ಯ ವಾಹನ ತಯಾರಕ ಸಂಸ್ಥೆಯಾಗಿರುವ ನಿಸ್ಸಾನ್, ಮುಂಬರುವ ಹಬ್ಬದ ಆವೃತ್ತಿಯನ್ನು ಗಮನದಲ್ಲಿಟ್ಟುಕೊಂಡು ತನ್ನ ನಿರ್ದಿಷ್ಟ ಮಾದರಿಗಳಿಗೆ ವಿಶೇಷ ಆಫರುಗಳನ್ನು ಘೋಷಿಸಿದ್ದು, ಇದರ ಗರಿಷ್ಠ ಪ್ರಯೋಜನವನ್ನು ಗ್ರಾಹಕರು ಗಿಟ್ಟಿಸಿಕೊಳ್ಳುವಂತೆ ವಿನಂತಿಸಿಕೊಳ್ಳಲಾಗಿದೆ.
ನಿಸ್ಸಾನ್ ಮೈಕ್ರಾ ಹ್ಯಾಚ್‌ಬ್ಯಾಕ್, ಸನ್ನಿ ಸೆಡಾನ್, ಇವಾಲಿಯಾ ಎಂಯುವಿ ಮತ್ತು ಟೆರೆನೊ ಕಾಂಪಾಕ್ಟ್ ಎಸ್‌ಯುವಿ ಆಯ್ದ ಮಾದರಿಗಳಿಗೆ ಈ ಅತ್ಯಾಕರ್ಷಕ ಆಫರುಗಳು ಅನ್ವಯವಾಗಲಿದೆ.

ಪ್ರಯೋಜನಗಳು:
ನಿಸ್ಸಾನ್ ಮೈಕ್ರಾಗೆ 40,000 ರು. ವರೆಗೆ ಎಕ್ಸ್‌ಚೇಂಜ್ ಬೋನಸ್,
ಹೊಸ ಸನ್ನಿಗೆ ಅಪ್‌ಗ್ರೇಡ್ ಮಾಡುವ ಅವಕಾಶ (60,000 ರು. ವರೆಗೆ ಎಕ್ಸ್‌ಚೇಂಜ್ ಬೋನಸ್),
ಆಯ್ದ ಸನ್ನಿ ಮಾದರಿಗಳಿಗೆ ರು. 1,45,000 ವರೆಗೆ ಕ್ಲಿಯರನ್ಸ್ ಪ್ರಯೋಜನ,
ಆಯ್ದ ಟೆರನೊ ಮಾದರಿಗಳಿಗೆ ರು. 50,000 ವರೆಗೆ ಫೇಸ್ಟಿವ್ ಬೋನಸ್,
ನಿಸ್ಸಾನ್ ಇವಾಲಿಯಾಗೆ ಉಚಿತ ವಿಮಾ ಸೌಲಭ್ಯ

ಸಂಸ್ಥೆಯು ನಿಸ್ಸಾನ್ ಮೈಕ್ರಾಗೆ ರು. 40,000 ವರೆಗೆ ಎಕ್ಸ್‌ಚೇಂಜ್ ಬೋನಸ್ ಒದಗಿಸುತ್ತಿದೆ. ಅದೇ ರೀತಿ ಆಯ್ದ ಸನ್ನಿ ಮಾದರಿಗೆ ವಿಶೇಷ ಡಿಸ್ಕೌಂಟ್, ಗಿಫ್ಟ್ ಚೆಕ್ ಸೇರಿದಂತೆ ರು. 1,45,000 ವರೆಗೂ ಆಫರ್ ಲಭ್ಯವಾಗಲಿದೆ. ಅದೇ ರೀತಿ ಹೊಸ ಸನ್ನಿಗೆ ರು. 60,000 ವರೆಗೆ ಎಕ್ಸ್‌ಚೇಂಜ್ ಬೋನಸ್ ನೀಡಲಾಗುತ್ತದೆ.
ಇನ್ನು ನಿಸ್ಸಾನ್ ಟೆರನೊ ಆಯ್ದ ಮಾದರಿಗೆ ಗಿಫ್ಟ್ ಚೆಕ್, ಎಕ್ಸ್‌ಚೇಂಜ್ ಪ್ರಯೋಜನ ಸೇರಿದಂತೆ ರು. 50,000 ವರೆಗೆ ಫೇಸ್ಟಿವ್ ಬೋನಸ್ ನೀಡಲಾಗುತ್ತದೆ. ಅಂತೆಯೇ ನಿಸ್ಸಾನ್ ಇವಾಲಿಯಾಗೆ ಒಂದು ವರ್ಷದ ವಿಮಾನ ಲಭ್ಯವಿರಲಿದೆ.
ಇವೆಲ್ಲವೂ ತಮ್ಮ ನಿಸ್ಸಾನ್ ಕಾರನ್ನು ಅಪ್‌ಗ್ರೇಡ್ ಮಾಡಲು ಬಯಸುವ ಗ್ರಾಹಕರಿಗೆ ಸುವರ್ಣಾವಕಾಶವನ್ನು ಒದಗಿಸಲಿದೆ. ಪ್ರಸ್ತುತ ಆಫರ್ 2014 ಅಕ್ಟೋಬರ್ 31ರ ವರೆಗೆ ಮುಂದುವರಿಯಲಿದೆ.


Click it and Unblock the Notifications