ಬಜೆಟ್ ಎಫೆಕ್ಟ್; ನಿಸ್ಸಾನ್ ದರ ಕಡಿತ ಘೋಷಣೆ
ಕೇಂದ್ರ ಸರಕಾರ ಮಧ್ಯಂತರ ಬಜೆಟ್ ಮಂಡನೆಯಲ್ಲಿ ಸಣ್ಣ ಕಾರುಗಳ ಮೇಲಿನ ಅಬಕಾರಿ ಸುಂಕ ಕಡಿತಗೊಂಡಿರುವ ಬೆನ್ನಲ್ಲೇ ಬಹುತೇಕ ಎಲ್ಲ ವಾಹನ ತಯಾರಕ ಸಂಸ್ಥೆಗಳು ತನ್ನ ರೇಂಜ್ ಕಾರುಗಳ ದರಗಳಲ್ಲೂ ಕಡಿತಗೊಳಿಸುತ್ತಿದೆ.
ಇದರಂತೆ ಜಪಾನ್ ಮೂಲದ ನಿಸ್ಸಾನ್ ಸಂಸ್ಥೆಯು ಶೇಕಡಾ 4ರಿಂದ 6ರಷ್ಟು ದರ ಕಡಿತಗೊಳಿಸಿದೆ. ಇದು 2014 ಫೆಬ್ರವರಿ 18ರಂದು ಜಾರಿಗೆ ಬರಲಿದೆ.

ದೇಶದಲ್ಲಿ ನಿಸ್ಸಾನ್ ಲಭ್ಯವಾಗುತ್ತಿರುವ ಸನ್ನಿ, ಟೆರನೊ, ಇವಾಲಿಯೊ, ಟಿಯನಾ, ಮೈಕ್ರಾ ಮತ್ತು ಮೈಕ್ರಾ ಆಕ್ಟಿವ್ ಆವೃತ್ತಿಗಳಿಗೆ ಇದು ಅನ್ವಯವಾಗಲಿದೆ. ಅಂದರೆ ಈ ಎಲ್ಲ ಕಾರುಗಳ ದರಗಳಲ್ಲಿ ಇಳಿಕೆ ಕಂಡುಬರಲಿದೆ.
ಈ ಎಲ್ಲದರ ಮೂಲಕ ದೇಶಿಯ ಕಾರು ಮಾರುಕಟ್ಟೆ ಪುನರುಜ್ಜೀವನ ಪಡೆಯುವ ನಿರೀಕ್ಷೆಯನ್ನು ನಿಸ್ಸಾನ್ ಇಂಡಿಯಾ ವ್ಯಕ್ತಪಡಿಸಿದೆ. ವಿತ್ತ ಸಚಿವ ಪಿ. ಚಿದಂಬರಂ ಮಂಡಿಸಿರುವ 2014-15ನೇ ಸಾಲಿನ ಮಧ್ಯಂತರ ಬಜೆಟ್‌ನಲ್ಲಿ ಸಣ್ಣ ಕಾರು ಹಾಗೂ ಬೈಕ್ ಮೇಲಿನ ಅಬಕಾರಿ ಸುಂಕವನ್ನು ಇಳಿಕೆಗೊಳಿಸಲಾಗಿತ್ತು.


Click it and Unblock the Notifications