ಹೊಸ ಅವತಾರ ಪಡೆಯಲಿರುವ ನಿಸ್ಸಾನ್ ಇವಾಲಿಯಾ

By Nagaraja

ನಿಮ್ಮಗೆಲ್ಲರಿಗೂ ತಿಳಿದಿರುವಂತೆಯೇ ಭಾರತ ಮಾರುಕಟ್ಟೆಯಲ್ಲಿ ನಿಸ್ಸಾನ್ ಇವಾಲಿಯಾ ಮಲ್ಟಿ ಪರ್ಪಸ್ ವೆಹಿಕಲ್ ನಿರೀಕ್ಷೆಯಷ್ಟು ಯಶ ಸಾಧಿಸುವಲ್ಲಿ ವಿಫಲವಾಗಿತ್ತು. ಆದರೆ ಇಲ್ಲಿಗೆ ಸೋಲೋಪ್ಪಿಕೊಳ್ಳಲು ಜಪಾನ್ ಮೂಲದ ಈ ವಾಹನ ತಯಾರಕ ಸಂಸ್ಥೆ ತಯಾರಾಗಿಲ್ಲ.

2013ರಲ್ಲಿ ಲಾಂಚ್ ಆಗಿದ್ದ ನಿಸ್ಸಾನ್ ಇವಾಲಿಯಾ ಜಾಗತಿಕವಾಗಿ ಎನ್‌ವಿ200 ಎಂಬ ಹೆಸರಿನಿಂದ ಗುರುತಿಸಿಕೊಂಡಿತ್ತು. ವಾಣಿಜ್ಯ ವಾಹನದಂತಿರುವ ಇದರ ವಿನ್ಯಾಸ, ಚಿಟ್ಟೆಯ ಶೈಲಿಯ ಹಿಂಭಾಗದ ವಿಂಡೋ, ಮಧ್ಯ ಸಾಲಿನಲ್ಲಿ ಎಸಿಯ ಕೊರತೆ, ಓಪನ್ ಗ್ಲೋವ್ ಬಾಕ್ಸ್ ಹಾಗೂ ಡ್ಯುಯಲ್ ಇಂಟಿರಿಯರ್‌ ಸಮಸ್ಯೆಗಳು ಹಿನ್ನಡೆಗೆ ಕಾರಣವಾಗಿತ್ತು.

Nissan Evalia

ಇದೀಗ ಸಂಪೂರ್ಣ ಪರಿಷ್ಕೃತಗೊಳಿಸಲು ಹೊರಟಿರುವ ನಿಸ್ಸಾನ್, ಪ್ರಸಕ್ತ ಸಾಲಿನಲ್ಲೇ 2014 ಇವಾಲಿಯಾ ಬಿಡುಗಡೆ ಮಾಡುವ ಯೋಜನೆ ಹೊಂದಿದೆ. ಹಿಂದಿನ ಆವೃತ್ತಿಯಲ್ಲಿನ ಕೊರತೆಗಳೆನ್ನಲ್ಲ ನೀಗಿಸುವುದು ಹೊಸ ಇವಾಲಿಯಾದ ಉದ್ದೇಶವಾಗಿರಲಿದೆ. ಇದರ ಜೊತೆಗೆ ಹೆಚ್ಚುವರಿ ವೈಶಿಷ್ಟ್ಯಗಳನ್ನು ಗ್ರಾಹಕರು ನಿರೀಕ್ಷೆ ಮಾಡಬಹುದಾಗಿದೆ. ಆದರೆ ಈ ಎಲ್ಲದರ ಬಗ್ಗೆ ಮಾಹಿತಿಗಳು ಸದ್ಯಕ್ಕೆ ಲಭ್ಯವಾಗಿಲ್ಲ. ನೂತನ ಇವಾಲಿಯಾ ವರ್ಷಾಂತ್ಯದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

ಹಾಗಿದ್ದರೂ ಎಂಜಿನ್ ಮಾನದಂಡಗಳಲ್ಲಿ ಯಾವುದೇ ಬದಲಾವಣೆ ಕಂಡುಬರುವುದಿಲ್ಲ. ಇದು 1.5 ಲೀಟರ್ ಡೀಸೆಲ್ ಎಂಜಿನ್ ಜತೆಗೆ 5 ಸ್ಪೀಡ್ ಟ್ರಾನ್ಸ್‌ಮಿಷನ್ ಪಡೆದುಕೊಳ್ಳಲಿದೆ.

ಬಲ್ಲ ಮೂಲಗಳ ಪ್ರಕಾರ ಪರಿಷ್ಕೃತ ಇವಾಲಿಯಾ ಜೊತೆಗೆ ಫೇಸ್‌ಲಿಫ್ಟ್ ಸನ್ನಿ ಸೆಡಾನ್ (ದ್ವಿತಿಯಾರ್ಧದಲ್ಲಿ) ಹಾಗೂ ಎರಡನೇ ದಟ್ಸನ್ ಮಾದರಿಯನ್ನು (ಗೊ ಪ್ಲಸ್ ಎಂಪಿವಿ) ಬಿಡುಗಡೆ ಮಾಡುವ ಯೋಜನೆಯನ್ನು ನಿಸ್ಸಾನ್ ಹೊಂದಿದೆ.

More from DriveSpark

Article Published On: Wednesday, April 30, 2014, 14:51 [IST]
English summary
Launched in September 2012, Nissan Evalia MPV, known internationally as the NV200, was expected to be just as popular in India as it is outside. Unfortunately for Nissan, Indian buyers have never managed to cosy up to the unconventional design of the Evalia.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+