ಮಗದೊಂದು ಅಗ್ನಿ ಪರೀಕ್ಷೆಗೆ ತಯಾರಾದ ಇವಾಲಿಯಾ
ಜಾಗತಿಕವಾಗಿ ಎನ್‌ವಿ200 ಹೆಸರಿನಿಂದ ಗುರುತಿಸಿಕೊಂಡಿರುವ ನಿಸ್ಸಾನ್ ಇವಾಲಿಯಾ ಅತ್ಯುತ್ತಮ ಮಾರಾಟ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಆದರೆ ಈ ಬಹುನಿರೀಕ್ಷಿತ ಕಾರು ಭಾರತ ಮಾರುಕಟ್ಟೆಯಲ್ಲಿ ಮಾತ್ರ ನಿರೀಕ್ಷಿಸಿದಷ್ಟು ಯಶ ಸಾಧಿಸುವಲ್ಲಿ ವಿಫಲವಾಗಿತ್ತು.
ವ್ಯಾನ್ ಎಂಬ ಪಟ್ಟ ಗಿಟ್ಟಿಸಿಕೊಂಡಿರುವುದೇ ದೇಶದಲ್ಲಿ ನಿಸ್ಸಾನ್ ಇವಾಲಿಯಾ ವೈಫಲ್ಯಕ್ಕೆ ಕಾರಣವಾಗಿತ್ತು. ಅಷ್ಟಕ್ಕೂ ಭಾರತೀಯ ಕುಟುಂಬಗಳು ವ್ಯಾನ್ ಚಲಾಯಿಸಲು ಇಷ್ಟಪಡುತ್ತಾರೆಯೇ ? ಖಂಡಿತ ಇಲ್ಲ.

ಅಂದ ಹಾಗೆ ಸೋಲೊಪ್ಪಿಕೊಳ್ಳಲು ಜಪಾನ್ ಮೂಲದ ಈ ವಾಹನ ತಯಾರಕ ಸಂಸ್ಥೆ ತಯಾರಿಲ್ಲ. ಅಂದಾಜು ಒಂದು ವರ್ಷದ ಬಳಿಕ ಅಂದರೆ ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಎಲ್ಲ ಹೊಸತನದಿಂದ ಕೂಡಿದ ನಿಸ್ಸಾನ್ ಇವಾಲಿಯಾ ರಿಫ್ರೆಶ್ ಮಾದರಿ ಬಿಡುಗಡೆಗೊಳಿಸಲಾಗಿತ್ತು. ಆದರೆ ಇದು ಸಹ ನಿಸ್ಸಾನ್ ಮಾರಾಟವನ್ನು ಉತ್ತೇಜಿಸುವಲ್ಲಿ ವಿಫಲವಾಗಿತ್ತು.
ಇದೀಗ ಮಗದೊಮ್ಮೆ ಇವಾಲಿಯಾ ಅಗ್ನಿ ಪರೀಕ್ಷೆಗೆ ಕಂಪನಿ ಮುಂದಾಗುತ್ತಿದೆ. ಈ ಬಾರಿ ಕಾರಿನ ಮುಂಭಾಗದಲ್ಲಿ ಬದಲಾವಣೆ ನಿರೀಕ್ಷಿಸಲಾಗುತ್ತಿದೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಬದಲಾವಣೆ ತರಲಾಗುತ್ತಿದೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ. ಅದು ಏನೇ ಇರಲಿ, ನೂತನ ಇವಾಲಿಯಾ ಬರಮಾಡಿಕೊಳ್ಳಲು 2014 ದೆಹಲಿ ಆಟೋ ಎಕ್ಸ್ ಪೋ ತಯಾರಾಗುತ್ತಿದೆ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ.


Click it and Unblock the Notifications








