'ಹ್ಯಾಪಿ ವಿತ್ ನಿಸ್ಸಾನ್' ಕಸ್ಟಮರ್ ಕೇರ್ ಸರ್ವೀಸ್
ಜಪಾನ್ ಮೂಲದ ವಾಹನ ಸಂಸ್ಥೆಯಾಗಿರುವ ನಿಸ್ಸಾನ್ ಇಂಡಿಯಾ ಸಹ ಬೇಸಿಗೆ ಕಾಲ ಕಾರು ಸರ್ವೀಸ್ ಶಿಬಿರ ಆರಂಭಿಸಿದೆ. ನಿಸ್ಸಾನ್‌ನ 'ಹ್ಯಾಪಿ ವಿತ್ ನಿಸ್ಸಾನ್' ಶಿಬಿರದ ಮುಖಾಂತರದ ದೇಶದ್ಯಾಂತ ಉಚಿತ ಚೆಕಪ್ ಶಿಬಿರಗಳು ನಡೆಯಲಿದೆ.
ಉಚಿತ ಚೆಕಪ್ ಕ್ಯಾಂಪ್‌ನ ಪ್ರಾಥಮಿಕ ಹಂತವು ಮೇ9ರಿಂದ ಆರಂಭವಾಗಿ 18ರ ವರೆಗೆ ಸಾಗಲಿದೆ. ದೇಶದ 54 ನಗರಗಳಲ್ಲಿರುವ 66 ಡೀಲರ್‌ಶಿಪ್‌ಗಳಲ್ಲಿ ಕ್ಯಾಂಪ್ ತೆರೆದುಕೊಳ್ಳಲಿದೆ.

ಈ ಬಗ್ಗೆ ಮಾತನಾಡಿರುವ ನಿಸ್ಸಾನ್ ಇಂಡಿಯಾ ಅಧ್ಯಕ್ಷ ಕೆನಿಚಿರೊ ಯೋಮುರಾ, ಗ್ರಾಹಕರಿಗೆ ನಂಬಿಕೆಗ್ರಸ್ತ ಸರ್ವೀಸ್ ವಾತಾವರಣವನ್ನು ಸೃಷ್ಟಿಸಲು ನಿಸ್ಸಾನ್ ಬಯಸುತ್ತಿದ್ದು, ಸಂಸ್ಥೆಯ ವಾಹನಗಳನ್ನು ಖರೀದಿಸಿದವರು ಈ ಬಗ್ಗೆ ಹೆಮ್ಮೆ ಪಡಲಿದ್ದಾರೆ ಎಂದಿದ್ದಾರೆ.
ಇದೇ ಸಂದರ್ಭದಲ್ಲಿ ಈ ಅವಧಿಯಲ್ಲಿ ನಿಸ್ಸಾನ್ ಸರ್ವೀಸ್ ಸೆಂಟರ್‌ಗಳಿಗೆ ಭೇಟಿ ಕೊಡುವ ಗ್ರಾಹಕರಿಗೆ ನಿಸ್ಸಾನ್ ಆಕ್ಸೆಸರಿ ಹಾಗೂ ಲೇಬರ್ ಚಾರ್ಜ್‌ನಲ್ಲಿ ಶೇಕಡಾ 20ರಷ್ಟು ರಿಯಾಯಿತಿ ದರ ದೊರಕಲಿದೆ.
ಇದರ ಜತೆಗೆ ಲಕ್ಕಿ ಡ್ರಾಗಳನ್ನು ಏರ್ಪಡಿಸಲಾಗಿದ್ದು, ನಿಸ್ಸಾನ್ ಕಾರ್ ಕೇರ್ ಉತ್ಪನ್ನ, ಚಲನಚಿತ್ರ ಟಿಕೆಟ್, ಶಾಂಪಿಂಗ್, ಗಿಫ್ಟ್ ಮುಂತಾದವುಗಳನ್ನು ಗೆಲ್ಲುವ ಅವಕಾಶವಿರುತ್ತದೆ.


Click it and Unblock the Notifications