ನಿರ್ಮಾಣ ವೆಚ್ಚ ಹೆಚ್ಚಳ; ನಿಸ್ಸಾನ್ ಬೆಲೆ ಏರಿಕೆ
ಜಪಾನ್‌ನ ದೈತ್ಯ ವಾಹನ ತಯಾರಿಕ ಸಂಸ್ಥೆಯಾಗಿರುವ ನಿಸ್ಸಾನ್, 2015 ಜನವರಿ 1ರಿಂದ ಜಾರಿಗೆ ಬರುವಂತೆಯೇ ತನ್ನೆಲ್ಲ ಮಾದರಿಗಳ ಕಾರುಗಳಿಗೆ ಬೆಲೆ ಏರಿಕೆ ಘೋಷಣೆ ಮಾಡಿದೆ.
ನಿಸ್ಸಾನ್ ಬೆಲೆ ಏರಿಕೆ ನೀತಿಯಲ್ಲಿ ಬಜೆಟ್ ಬ್ರಾಂಡ್ ದಟ್ಸನ್ ಕೂಡಾ ಒಳಗೊಂಡಿರಲಿದೆ. ಇದರಂತೆ ದಟ್ಸನ್ ಗೊ ಹ್ಯಾಚ್‌ಬ್ಯಾಕ್ ಕಾರಿಗೆ 11,000 ರು.ಗಳ ವರೆಗೆ ಅಂತೆಯೇ ನಿಸ್ಸಾನ್ ಮಾದರಿಗಳಿಗೆ ರು. 18,000ಗಳ ವರೆಗೆ ಬೆಲೆ ಏರಿಕೆ ಕಂಡುಬರಲಿದೆ.

ಈ ಬಗ್ಗೆ ಹೇಳಿಕೆ ಕೊಟ್ಟಿರುವ ನಿಸ್ಸಾನ್ ಮೋಟಾರು ಇಂಡಿಯಾ ವ್ಯವಸ್ಥಾಪಕ ನಿರ್ದೇಶಕರಾಗಿರುವ ಅರುಣ್ ಮಲ್ಹೋತ್ರಾ, "ನಿರ್ಮಾಣ ವೆಚ್ಚ ಹಿನ್ನೆಲೆಯಲ್ಲಿ ಬೆಲೆ ಏರಿಕೆ ಅನಿವಾರ್ಯವಾಗಿದೆ ಎಂಬ ಸ್ಪಷ್ಟನೆ ನೀಡಿದ್ದಾರೆ. ಹಾಗಿದ್ದರೂ ನಿಸ್ಸಾನ್ ಹಾಗೂ ದಟ್ಸನ್ ಇನ್ನು ಮುಂದೆಯೂ ಗ್ರಾಹಕರಿಗೆ ಹಣಕ್ಕೆ ತಕ್ಕ ಮೌಲ್ಯ ನೀಡಲಿದೆ" ಎಂದಿದ್ದಾರೆ.
ಅಗ್ರಮಾನ್ಯ ಸಂಸ್ಥೆಗಳಾಗಿರುವ ಮಾರುತಿ ಸುಜುಕಿ, ಬಿಎಂಡಬ್ಲ್ಯು, ಜನರಲ್ ಮೋಟಾರ್ಸ್, ಟಾಟಾ ಮೋಟಾರ್ಸ್ ಹಾಗೂ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಗಳು ಈಗಾಗಲೇ ಬೆಲೆ ಏರಿಕೆ ಘೋಷಿಸಿವೆ. ಇವೆಲ್ಲವೂ ಹೊಸ ವರ್ಷದಲ್ಲಿ ಅನ್ವಯವಾಗಲಿದೆ.
ಕೇಂದ್ರ ಸರಕಾರದ ಅಬಕಾರಿ ಸುಂಕ ನೀತಿ ಇನ್ನಷ್ಟೇ ಪ್ರಕಟಣೆಗೊಳ್ಳಲಿರುವಂತೆಯೇ ವಾಹನ ತಯಾರಿಕ ಸಂಸ್ಧೆಗಳು ಬೆಲೆ ಏರಿಕೆಗೊಳಿಸಿರುವುದು ವಾಹನಗಳ ಮಾರಾಟಕ್ಕೆ ಇನ್ನಷ್ಟು ಹಿನ್ನಡೆಯನ್ನುಂಟು ಮಾಡಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.


Click it and Unblock the Notifications








