ಇನ್ನಷ್ಟು ಮಾರಾಟ ಪ್ರಗತಿ ನಿರೀಕ್ಷೆಯಲ್ಲಿ ನಿಸ್ಸಾನ್
ಜಪಾನ್ ಮೂಲದ ನಿಸ್ಸಾನ್ ವಾಹನ ತಯಾರಕ ಸಂಸ್ಥೆಯಾಗಿರುವ ನಿಸ್ಸಾನ್ ಕಳೆದ ಆರ್ಥಿಕ ಸಾಲಿಗೆ ಹೋಲಿಸಿದಾಗ ಈ ಬಾರಿ ಶೇಕಡಾ 3.4ರಷ್ಟು ಏರಿಕೆ ದಾಖಲಿಸಿದೆ. ಈ ಮೂಲಕ ದೇಶದಲ್ಲಿ ನಿಸ್ಸಾನ್ ಪ್ರಗತಿಯತ್ತ ದಾಪುಗಾಲನ್ನಿಟ್ಟಿದೆ.
ಕಳೆದ ವರ್ಷ 36,975 ಯುನಿಟ್ ವಾಹನ ಮಾರಾಟ ಮಾಡಿದ್ದ ನಿಸ್ಸಾನ್ ಈ ಸಂಖ್ಯೆಯನ್ನು 2013-2014ನೇ ಸಾಲಿನಲ್ಲಿ 38,217 ಯುನಿಟ್‌ಗಳಿಗೆ ಏರಿಸುವಲ್ಲಿ ಯಶ ಕಂಡಿದೆ. ಕೆಲವು ತಿಂಗಳುಗಳ ಹಿಂದೆಯಷ್ಟೇ ಪರಿಚಯಿಸಿದ್ದ ನೂತನ ಟೆರನೊ ಎಸ್‌ಯುವಿ ಮಾರುಕಟ್ಟೆಯಲ್ಲಿ ಉತ್ತಮ ಪ್ರತಿಕ್ರಿಯೆ ಗಿಟ್ಟಿಸಿಕೊಂಡಿದೆ ಎಂದು ನಿಸ್ಸಾನ್ ಪ್ರಕಟಣೆಯಲ್ಲಿ ತಿಳಿಸಿದೆ.

ಅಷ್ಟೇ ಅಲ್ಲದೆ ಇತ್ತೀಚೆಗಷ್ಟೇ ನಿಸ್ಸಾನ್ ಸಬ್ ಬ್ರಾಂಡ್ ಆಗಿರುವ ದಟ್ಸನ್, ನೂತನ ಗೊ ಹ್ಯಾಚ್‌ಬ್ಯಾಕ್ ಕಾರನ್ನು ಲಾಂಚ್ ಮಾಡಿತ್ತು. ಈ ಸಣ್ಣ ಕಾರು ಈಗಾಗಲೇ 2,000ಗಿಂತಲೂ ಹೆಚ್ಚು ಬುಕ್ಕಿಂಗ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಮಾರ್ಚ್ ತಿಂಗಳಲ್ಲಿ ಮಾತ್ರವಾಗಿ ನಿಸ್ಸಾನ್ 7,019 ಯುನಿಟ್ ಮಾರಾಟ ಸಾಧಿಸಿದೆ. ಕಳೆದ ವರ್ಷವಿದು 2,125 ಯುನಿಟ್‌ಗಳಾಗಿದ್ದವು. ಅಂದರೆ ಬರೋಬ್ಬರಿ ಶೇಕಡಾ 230ರಷ್ಟು ವೃದ್ಧಿ ದಾಖಲಿಸಿದೆ.
ಇಂದಿನ ಫೇಸ್‌ಬುಕ್ ವೀಡಿಯೋ


Click it and Unblock the Notifications








