ದಟ್ಸನ್ ಗೊ ಎಫೆಕ್ಟ್; ನಿಸ್ಸಾನ್ ಮಾರಾಟದಲ್ಲಿ ನೆಗೆತ
ಇತ್ತೀಚೆಗಷ್ಟೇ ಲಾಂಚ್ ಆಗಿರುವ ದಟ್ಸನ್ ಗೊ ಸಣ್ಣ ಕಾರಿನ ಬಲದ ನೆರವಿನೊಂದಿಗೆ 2014 ಎಪ್ರಿಲ್ ತಿಂಗಳ ಮಾರಾಟದಲ್ಲಿ ಭರ್ಜರಿ ಮಾರಾಟ ಕಂಡುಕೊಂಡಿರುವ ಜಪಾನ್ ಮೂಲದ ನಿಸ್ಸಾನ್ ಗ್ರೂಪ್ ಆಫ್ ಇಂಡಿಯಾ ಸಂಸ್ಥೆಯು, ಶೇಕಡಾ 328ರಷ್ಟು ಭರ್ಜರಿ ಏರಿಕೆ ದಾಖಲಿಸಿದೆ.
ವಾಹನ ಬೇಡಿಕೆ ಕುಸಿದಿರುವ ಹಂತದಲ್ಲಿಯೂ ನಿಸ್ಸಾನ್ ತನ್ನ ನೂತನ ಸಣ್ಣ ಕಾರು ಬ್ರಾಂಡ್ ಆಗಿರುವ ದಟ್ಸನ್ ನೆರವಿನೊಂದಿಗೆ ಮಾರಾಟದಲ್ಲಿ ಭಾರಿ ವೃದ್ಧಿ ಸಾಧಿಸಿದೆ. 2014 ಎಪ್ರಿಲ್ ತಿಂಗಳ ಮಾರಾಟದಲ್ಲಿ ನಿಸ್ಸಾನ್ ಒಟ್ಟು 5301 ಯುನಿಟ್ ವಾಹನಗಳನ್ನು ಮಾರಾಟ ಮಾಡಿವೆ. ಕಳೆದ ವರ್ಷವಿದು 1239 ಯುನಿಟ್ ಮಾತ್ರವಾಗಿತ್ತು.

ಇವೆಲ್ಲಕ್ಕೂ ಕಾರಣವಾಗಿರುವುದು ಬಜೆಟ್ ಕಾರು ದಟ್ಸನ್ ಗೊ. ನಿಸ್ಸಾನ್ ಮಾರಾಟದ ಅರ್ಧದಷ್ಟು ಅಂದರೆ 2691 ಯುನಿಟ್ ಮಾರಾಟವನ್ನು ದಟ್ಸನ್ ಗೊ ಗಿಟ್ಟಿಸಿಕೊಂಡಿತ್ತು.
ಕಳೆದ ಆರ್ಥಿಕ ಸಾಲಿನ ಅಂತ್ಯದಲ್ಲಿ ಮಾರುತಿ ಸುಜುಕಿಯನ್ನ ಹಿಂದಕ್ಕೆ ತಳ್ಳಿದ್ದ ನಿಸ್ಸಾನ್, ದೇಶದ ಎರಡನೇ ಅತಿದೊಡ್ಡ ರಫ್ತುದಾರ ಸಂಸ್ಥೆ ಣಿಸಿಕೊಂಡಿತ್ತು. ಅದೇ ಹೊತ್ತಿಗೆ ಮುಂದಿನ ದಿನಗಳಲ್ಲಿ ಆಗಮನವಾಗಲಿರುವ ದಟ್ಸನ್ ಗೊ ಪ್ಲಸ್ ಕಾಂಪಾಕ್ಟ್ ಎಂಪಿವಿ, ನಿಸ್ಸಾನ್ ಸನ್ನಿ ಫೇಸ್‌ಲಿಫ್ಟ್ ಮತ್ತು ಪರಿಷ್ಕೃತ ಇವಾಲಿಯಾ ಎಂಪಿವಿ ಆವೃತ್ತಿಗಳು ನಿಸ್ಸಾನ್ ಮಾರಾಟಕ್ಕೆ ಇನ್ನಷ್ಟು ಉತ್ತೇಜಿಸುವ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ.


Click it and Unblock the Notifications








