ಸೆಪ್ಟೆಂಬರ್ ತಿಂಗಳಲ್ಲಿ ನಿಸ್ಸಾನ್ ಮಾರಾಟ ಏರಿಕೆ

By Nagaraja

ಭಾರತದಲ್ಲಿ ತನ್ನ ಸಾನಿಧ್ಯವನ್ನು ಮತ್ತಷ್ಟು ಬಲಪಡಿಸಿರುವ ಜಪಾನ್ ಮೂಲದ ದೈತ್ಯ ವಾಹನ ತಯಾರಿಕ ಸಂಸ್ಥೆಯಾಗಿರುವ ನಿಸ್ಸಾನ್, 2014 ಸೆಪ್ಟೆಂಬರ್ ತಿಂಗಳ ಮಾರಾಟದಲ್ಲಿ ಶೇಕಡಾ 64.2ರಷ್ಟು ಭರ್ಜರಿ ಏರಿಕೆ ದಾಖಲಿಸಿದೆ.

ಕಳೆದ ವರ್ಷದ ಮಾರಾಟಕ್ಕೆ ಹೋಲಿಸಿದರೆ ಹೊಸ ಮಾದರಿಗಳನ್ನು ಪರಿಚಯಿಸಿರುವ ನಿಸ್ಸಾನ್ ಮಾರಾಟದಲ್ಲಿ ಶಿಪ್ರ ಗತಿಯ ಬೆಳವಣಿಗೆ ಸಾಧಿಸಿದೆ. 2014 ಸೆಪ್ಟೆಂಬರ್ ತಿಂಗಳಲ್ಲಿ ನಿಸ್ಸಾನ್ ಸಂಸ್ಥೆಯು ಒಟ್ಟು 4,145 ಯುನಿಟ್‌ಗಳ ಮಾರಾಟ ದಾಖಲಿಸಿದೆ.

nissan terrano

ಕಳೆದ ವರ್ಷ ಇದೇ ಅವಧಿಯಲ್ಲಿ ನಿಸ್ಸಾನ್ ಸಂಸ್ಥೆಯು 2,547 ಯುನಿಟ್ ಮಾತ್ರ ಮಾರಾಟ ನಡೆಸುವಲ್ಲಿ ಯಶಸ್ವಿಯಾಗಿತ್ತು. ಈ ಮೂಲಕ ಶೇಕಡಾ 64.2ರಷ್ಟು ಏರಿಕೆ ದಾಖಲಿಸಿದೆ.

ಅಷ್ಟೇ ಅಲ್ಲದೆ ಈ ಎಲ್ಲದರ ಮೂಲಕ 2014 ಆರ್ಥಿಕ ಸಾಲಿನ ಎರಡನೇ ತ್ರೈಮಾಸಿಕ ಅವಧಿಯಲ್ಲಿ ಸಂಸ್ಥೆಯು ಒಟ್ಟು 25,741 ಯುನಿಟ್‌ಗಳ ಮಾರಾಟ ದಾಖಲಿಸಿದೆ. ಕಳೆದ ವರ್ಷವಿದು 12,515 ಯುನಿಟ್‌ಗಳಿಗೆ ಮಾತ್ರ ಸೀಮಿತವಾಗಿತ್ತು. ಈ ಮೂಲಕ ಶೇಕಡಾ 105.7ರಷ್ಟು ಭರ್ಜರಿ ಏರಿಕೆ ಸಾಧಿಸಿದೆ.

ನಿಸ್ಸಾನ್ ಮಾರಾಟ ವರದಿ (ಯುನಿಟ್‌ಗಳಲ್ಲಿ)

ಸೆಪ್ಟೆಂಬರ್ 2014 - 4,145
ಸೆಪ್ಟೆಂಬರ್ 2013 - 2,527
ಏರಿಕೆ (%) - 64.2

2ನೇ ತ್ರೈಮಾಸಿಕ ಅವಧಿ
2014 (ಇದುವರೆಗೆ) - 25,741
2013 - 12,515
ಏರಿಕೆ (%) - 105.7

Article Published On: Saturday, October 4, 2014, 12:20 [IST]
English summary
Nissan today reported sales in India of 4,145 vehicles in the month of September 2014, an increase of 64.2% versus 2,527 units a year earlier.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+