ನಿಸ್ಸಾನ್ ಎಕ್ಸ್-ಟ್ರೈಲ್, 370ಝಡ್ ಮಾರಾಟಕ್ಕೆ ಬಿತ್ತು ಬ್ರೇಕ್

By Nagaraja

ಕಳಪೆ ಮಾರಾಟದ ಹಿನ್ನಲೆಯಲ್ಲಿ ಭಾರತದಲ್ಲಿ ನಿಸ್ಸಾನ್ ಎಕ್ಸ್-ಟ್ರೈಲ್ ಮತ್ತು 370ಝಡ್ ಆವೃತ್ತಿಗಳನ್ನು ನಿಲುಗಡೆಗೊಳಿಸಲು ಜಪಾನ್ ಮೂಲದ ದೈತ್ಯ ವಾಹನ ತಯಾರಕ ಸಂಸ್ಥೆಯು ನಿರ್ಧರಿಸಿದೆ.

ನಿಸ್ಸಾನ್ ಎಕ್ಸ್-ಟ್ರೈಲ್ ಪ್ರೀಮಿಯಂ ಎಸ್‌ಯುವಿ ಆಗಿದ್ದರೆ 370ಝಡ್ ಎಂಟ್ರಿ ಲೆವೆಲ್ ಸ್ಪೋರ್ಟ್ಸ್ ಕೂಪೆ ಕಾರಾಗಿದೆ. ಭಾರತದಲ್ಲಿ ಸ್ಥಳೀಯವಾಗಿ ಕಾರು ಮಾದರಿಗಳನ್ನು ಉತ್ಪಾದಿಸುವ ಯೋಜನೆಯ ಅಂಗವಾಗಿಯೂ ನಿಸ್ಸಾನ್‌ನಿಂದ ಇಂತಹದೊಂದು ನಡೆ ಕಂಡುಬಂದಿದೆ. ಹಾಗಿದ್ದರೂ ಟಿಯಾನಾ ಐಷಾರಾಮಿ ಸೆಡಾನ್ ಕಾರಿನ ಮಾರಾಟವನ್ನು ನಿಸ್ಸಾನ್ ಮುಂದುವರಿಸಲಿದೆ.

Nissan

ಚೆನ್ನೈನ ಓರಗಡಂ ಘಟಕದಲ್ಲಿ ನಿಸ್ಸಾನ್ ಮೈಕ್ರಾ ಆಕ್ಟಿವ್, ಮೈಕ್ರಾ, ಸನ್ನಿ, ಇವಾಲಿಯಾ ಮತ್ತು ಟೆರೆನೊ ಕಾರುಗಳು ಉತ್ಪಾದನೆಯಾಗುತ್ತಿದೆ. ಇನ್ನೊಂದೆಡೆ ಕಂಪ್ಲೀಟ್ ಬಿಲ್ಟ್ ಯುನಿಟ್ ಮುಖಾಂತರ ಆಗಮನವಾಗಿದ್ದ ನಿಸ್ಸಾನ್ ಎಕ್ಸ್ ಟ್ರೈಲ್ ಎಸ್‌ಯುವಿ ಮತ್ತು 370ಝಡ್ ಕೂಪೆ ಕಾರುಗಳು ಕಳಪೆ ಮಾರಾಟ ಪ್ರದರ್ಶನ ನೀಡಿತ್ತು.

ಅಂದ ಹಾಗೆ ನಿಸ್ಸಾನ್ ಎಕ್ಸ್-ಟ್ರೈಲ್ 2.0 ಲೀಟರ್ 4 ಸಿಲಿಂಡರ್ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದ್ದು, 150 ಅಶ್ವಶಕ್ತಿ (320 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದರ ದೆಹಲಿ ಎಕ್ಸ್ ಶೋ ರೂಂ ದರ 22.75 ಲಕ್ಷ ರು.ಗಳಾಗಿದ್ದವು.


ಅದೇ ರೀತಿ ಎರಡು ಸೀಟುಗಳ ಸ್ಪೋರ್ಟ್ಸ್ ಕೂಪೆ ಕಾರಾಗಿರುವ 370ಝಡ್, 332 ಅಶ್ವಶಕ್ತಿ ಉತ್ಪಾದಿಸಬಲ್ಲ (363 ಎನ್‌ಎಂ ಟಾರ್ಕ್) 3.7 ಲೀಟರ್ ಪೆಟ್ರೋಲ್ ಎಂಜಿನ್ ಪಡೆದಿತ್ತು. ಇದು ಕೇವಲ ಆರು ಸೆಕೆಂಡುಗಳಲ್ಲಿ ಗಂಟೆಗೆ 100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿತ್ತು. ಭಾರತಕ್ಕೆ ಆಮದು ಮಾಡಿಕೊಳ್ಳಲಾಗುತ್ತಿದ್ದ ಈ ಎಂಟ್ರಿ ಲೆವೆಲ್ ಕೂಪೆ ಸ್ಪೋರ್ಟ್ಸ್ ಕಾರು 60 ಲಕ್ಷ ರು.ಗಳಷ್ಟು ದುಬಾರಿಯಾಗಿತ್ತು.

More from DriveSpark

Article Published On: Monday, February 24, 2014, 16:01 [IST]
English summary
Nissan has announced that it will discontinue the sales of its premium SUV, the X-Trail & the entry level sports car, the 370Z, in India. This comes in the wake of poor sales of the X-Trail luxury SUV and almost non-existant sales of the 370Z.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+