ಇನ್ನು ಮುಂದೆ ಮಾರುತಿ ಕಾರುಗಳಿಗೆ ಪೆಟ್ರೋನಾಸ್ ಕೀಲೆಣ್ಣೆ ಬಳಕೆ
ವಾಹನಗಳ ಘರ್ಷಣೆಯನ್ನು ಕಡಿಮೆ ಮಾಡುವುದರಲ್ಲಿ ಕೀಲೆಣ್ಣೆ ಅಥವಾ ಲ್ಯೂಬ್ರಿಕಂಟ್ ಪಾತ್ರ ಮಹತ್ವದ್ದು. ಇದೀಗ ವಿಶ್ವದ ಮುಂಚೂಣಿಯ ಲ್ಯೂಬ್ರಿಕಂಟ್ ತಯಾರಕ ಸಂಸ್ಥೆಯಾಗಿರುವ ಪೆಟ್ರೋನಾಸ್, ಭಾರತದ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಮಾರುತಿ ಸುಜುಕಿ ಸಂಸ್ಥೆಯ ಜೊತೆ ಒಪ್ಪಂದ ಮಾಡಿಕೊಂಡಿದೆ.
ಇದರೊಂದಿಗೆ ಮಾರುತಿಯ ಡೀಸೆಲ್ ವಾಹನಗಳಿಗೆ ಪೆಟ್ರೋನಾಸ್ ನೈಜ ಲ್ಯೂಬ್ರಿಕಂಟ್ ಪಾಲುದಾರಿಕೆ ವಹಿಸಲಿದೆ. ಮಾರುತಿಯ ಸಂಪೂರ್ಣ ಮಾರಾಟ ಜಾಲದಲ್ಲಿ ಪೆಟ್ರೋನಾಸ್ ತನ್ನ ಉತ್ಪನ್ನವನ್ನು ರವಾನಿಸಲಿದೆ.

ಭಾರತದಲ್ಲಿ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್‌ಗೆ ಅತ್ಯಂತ ಹೆಚ್ಚಿನ ಮಾರಾಟ ಜಾಲ ಇರುವುದರಿಂದ ಗ್ರಾಹಕರನ್ನು ಬೇಗನೇ ತಲುಪಲು ಪೆಟ್ರೋನಾಸ್‌ಗೆ ಸಾಧ್ಯವಾಗಲಿದೆ. ಅಲ್ಲದೆ ಇದರಿಂದ ಮಾರಾಟ ದ್ವಿಗುಣವಾಗುವ ಸಾಧ್ಯತೆಯಿದೆ.
ಮಾರುತಿಯ ಪಾಲುದಾರಿಕೆ ಪಡೆಯುವುದರೊಂದಿಗೆ ಪೆಟ್ರೋನಾಸ್ ಸಿಂಟೆಯಮ್ 3000 ಎಸ್‌ಝಡ್ ಎಂಜಿಡಿಎ 5 ಡಬ್ಲ್ಯು40 ಉತ್ಪನ್ನಗಳು ಮಾರುತಿಗೆ ರವಾನೆಯಾಗಲಿದೆ.
ಮಾರುತಿಯ ತಾಜಾ ಡೀಸೆಲ್ ಕಾರುಗಳಿಗೆ ಪ್ರೆಟ್ರೋನಾಸ್ ಲ್ಯೂಬ್ರಿಕಂಟ್ ಉತ್ಪನ್ನಗಳು ಬಳಕೆಯಾಗಲಿದೆ. ಇದು ಕಾರಿನ ಘರ್ಷಣೆ ಕಡಿಮೆ ಮಾಡುವುದರೊಂದಿಗೆ ಉತ್ತಮ ಎಂಜಿನ್ ಬಾಳ್ವಿಕೆಗೆ ಸಹಕಾರಿಯಾಗಲಿದೆ.


Click it and Unblock the Notifications