ಪೋರ್ಷೆ ಕೆಯಾನ್ ಜಿಟಿಎಸ್ ಅಧಿಕೃತ ಅನಾವರಣ
ಜರ್ಮನಿಯ ಸೂಪರ್ ಕಾರು ತಯಾರಿಕ ಸಂಸ್ಥೆಯಾಗಿರುವ ಪೋರ್ಷೆ ಕಳೆದ ವಾರವಷ್ಟೇ ಕೆಯಾನ್ ಜಿಟಿಎಸ್ ಮಾದರಿಯನ್ನು ಅನಾವರಣಗೊಳಿಸಿತ್ತು.
ಭಾರತದಲ್ಲಿ ಮಕಾನ್, ಪನರಮಾ ಮತ್ತು ಕೆಯಾನ್‌ಗಳಂತಹ ಎಸ್‌ಯುವಿ ಮಾದರಿಗಳನ್ನು ಒದಗಿಸುತ್ತಿರುವ ಪೋರ್ಷೆ ಪೈಕಿ ಜಿಟಿಎಸ್ ಮಾದರಿಯು ಅತ್ಯಂತ ಶಕ್ತಿಶಾಲಿ ಎನಿಸಿಕೊಳ್ಳಲಿದೆ.

ಪೋರ್ಷೆ ಕೆಯಾನ್ ಜಿಟಿಎಸ್ ಮಾದರಿಯು 3.6 ಲೀಟರ್ ವಿ8 ನೈಸರ್ಗಿಕ ಚೋಷಿತ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಇದು 440 ಅಶ್ವಶಕ್ತಿ (600 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ. ಅಲ್ಲದೆ ಕೇವಲ 5.2 ಸೆಕೆಂಡುಗಳಲ್ಲೇ 0-100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿರಲಿದೆ. ಇದು ಗಂಟೆಗೆ ಗರಿಷ್ಠ 260 ಕೀ.ಮೀ. ವೇಗದಲ್ಲಿ ಚಲಿಸಲಿದೆ.
ಅದೇ ಹೊತ್ತಿಗೆ ಸ್ಪೋರ್ಟ್ ಕ್ರೊನೊ ಪ್ಯಾಕೇಜ್‌ನೊಂದಿಗೆ ಕ್ರೀಡಾ ಆವೃತ್ತಿಯನ್ನು ಪೋರ್ಷೆ ಗ್ರಾಹಕರಿಗೆ ಒದಗಿಸುತ್ತಿದೆ. ಕೆಯಾನ್ ಜಿಟಿಎಸ್ ನವೆಂಬರ್ 19ರಂದು ನಡೆಯಲಿರುವ 2014 ಲಾಸ್ ಏಜಂಲೀಸ್ ಆಟೋ ಶೋದಲ್ಲೂ ಅನಾವರಣಗೊಳ್ಳಲಿದೆ. ಅಲ್ಲದೆ ಭಾರತದಲ್ಲಿ 71 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.

ಇನ್ನು ಅನೇಕ ವಿಶಿಷ್ಟತೆಗಳನ್ನು ಸ್ಟಾಂಡರ್ಡ್ ಆಗಿ ಒದಗಿಸುತ್ತಿದ್ದು, 8 ಸ್ಪೀಡ್ ಟಿಪ್ ಟ್ರಾನಿಕ್ ಎಸ್ ಜೊತೆ ಆಟೋ ಸ್ಟಾಪ್/ಸ್ಟಾರ್ಟ್, ಆಟೋಮ್ಯಾಟಿಕ್ ಟೈಲ್ ಗೇಟ್, ಮಲ್ಟಿ ಫಂಕ್ಷನ್ ಸ್ಪೋರ್ಟ್ಸ್ ಸ್ಟೀರಿಂಗ್ ವೀಲ್, ಪ್ಯಾಡಲ್ ಶಿಫ್ಟರ್ ಮತ್ತು ಬೈ ಕ್ಸೆನಾನ್ ಹೆಡ್‌ಲೈಟ್ ಜೊತೆ 4 ಪಾಯಿಂಟ್ ಎಲ್‌ಇಡಿ ಡೇಟೈಮ್ ಡ್ರೈವಿಂಗ್ ಲೈಟ್ಸ್ ಇರಲಿದೆ.


Click it and Unblock the Notifications








