ಪೋರ್ಷೆ ಮಾಷನ್ ಭಾರತ ಪ್ರವೇಶ ಖಚಿತ
ಜಗತ್ತಿನ ಅತ್ಯಂತ ದುಬಾರಿ ಕಾರುಗಳಲ್ಲಿ ಪೋರ್ಷೆ ಕೂಡಾ ಒಂದಾಗಿದೆ. ಶ್ರೀಮಂತರಲ್ಲಿ ಅತಿ ಶ್ರೀಮಂತರಲ್ಲಿ ಮಾತ್ರ ಪೋರ್ಷೆಗಳಂತಹ ಅತಿ ಬೆಲೆ ಬಾಳುವ ಪೋರ್ಷೆ ಸೂಪರ್ ಕಾರುಗಳಿವೆ.
ಹಾಗಿರುವಾಗ ಪೋರ್ಷೆಯಿಂದ ಮಗದೊಂದು ವರ್ಷನ್ ಭಾರತ ಎಂಟ್ರಿ ಕೊಡಲು ಸಿದ್ಧವಾಗುತ್ತಿದೆ. ಇದು ಕೇಯನ್ ಕೆಳಗಡೆ ಗುರುತಿಸಿಕೊಳ್ಳಲಿದೆ. ಅದುವೇ ಪೋರ್ಷೆ ಮಾಷನ್. ಈ ಐಷಾರಾಮಿ ಎಸ್‌ಯುವಿ ಕಾರು ಬಿಎಂಡಬ್ಲ್ಯು, ಆಡಿ ಹಾಗೂ ರೇಂಜ್ ರೋವರ್ ಸವಾಲನ್ನು ಎದುರಿಸಲಿದೆ.

ಪೆಟ್ರೋಲ್ ಹಾಗೂ ಡೀಸೆಲ್ ವೆರಿಯಂಟ್‌ಗಳಲ್ಲಿ ಮಾಷನ್ ಲಭ್ಯವಾಗಲಿದೆ. ಇದು ಜೂನ್ ತಿಂಗಳಲ್ಲಿ ಬಿಡುಗಡೆಯಾಗಲಿದೆ. ಈ ಮೂಲಕ ವಿದೇಶದಿಂದ ಆಮದು ಮಾಡುವ ಕಾರುಗಳ ಮೇಲಿನ ಸರಕಾರದ ತೆರಿಗೆ ನೀತಿ ಬದಲಾಗುವ ನಿರೀಕ್ಷೆಯನ್ನಿಟ್ಟುಕೊಂಡಿದೆ.
ಅಂದ ಹಾಗೆ ಕಂಪ್ಲೀಟ್ ಬಿಲ್ಡ್ ಯುನಿಟ್ (ಸಿಬಿಯು) ಪೋರ್ಷೆ ಮಾಷನ್ ಲಗ್ಷುರಿ ಎಸ್‌ಯುವಿ ಭಾರತ ಪ್ರವೇಶ ಪಡೆಯಲಿದೆ. ಇದು 3.6 ಲೀಟರ್, ಸಿಕ್ಸ್ ಸಿಲಿಂಡರ್ ಎಂಜಿನ್ ಪಡೆದುಕೊಳ್ಳಲಿದ್ದು, 405 (550 ಎನ್‌ಎಂ ಟಾರ್ಕ್) ಅಶ್ವಶಕ್ತಿ ಉತ್ಪಾದಿಸಲಿದೆ. ಹಾಗೆಯೇ ಸೆವೆನ್ ಸ್ಪೀಡ್ ಪಿಡಿಕೆ ಸಿಸ್ಟಂ ಇರಲಿದೆ. ನೂತನ ಕಾರು ಗಂಟೆಗೆ 266 ಕೀ.ಮೀ. ಹಾಗೆಯೇ ಕೇವಲ 4.8 ಸೆಕೆಂಡುಗಳಲ್ಲಿ ಗಂಟೆಗೆ 0-100 ಕೀ.ಮೀ. ವೇಗವರ್ಧಿಸಿಕೊಳ್ಳಲಿದೆ.


Click it and Unblock the Notifications








