ಐಷಾರಾಮಿ ಪೋರ್ಷೆ 918 ಸ್ಪೈಡರ್ ಕಾರುಗಳಿಗೆ ಹಿಂದಕ್ಕೆ ಕರೆ
ನಿರ್ದಿಷ್ಟ ಮಾದರಿಗಳಲ್ಲಿ ತೊಂದರೆಗಳು ಕಾಣಿಸಿಕೊಂಡಿರುವಾಗ ಪ್ರಯಾಣಿಕ ಕಾರು ಮಾರುಕಟ್ಟೆಯಲ್ಲಿ ವಾಹನ ತಯಾರಕ ಸಂಸ್ಥೆಗಳು ರಿಕಾಲ್‌ಗೆ ಕರೆ ನೀಡುತ್ತಿರುವುದು ಸಾಮಾನ್ಯವಾಗಿ ಕಂಡುಬರುತ್ತಿರುವ ದೃಶ್ಯವಾಗಿದೆ.
ಇತ್ತೀಚೆಗಿನ ದಿನಗಳಲ್ಲಿ ಕಾರು ವಾಪಾಸ್ ಕರೆ ಹೆಚ್ಚಾಗುತ್ತಲೇ ಇದೆ. ಆದರೆ ಅಚ್ಚರಿಯೆಂಬಂತೆ ಐಷಾರಾಮಿ ವಾಹನ ತಯಾರಕವೊಂದು ತನ್ನ ಮಾದರಿಯಲ್ಲಿ ತೊಂದರೆ ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ ಹಿಂದಕ್ಕೆ ಕರೆ ನೀಡಿರುವುದು ವಾಹನ ವಲಯದಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.

ಚಾಸೀ ಭಾಗಗಳಲ್ಲಿ ತೊಂದರೆ ಕಾಣಿಸಿಕೊಂಡ ಹಿನ್ನಲೆಯಲ್ಲಿ ಪೋರ್ಷೆ 918 ಸ್ಪೈಡರ್ ಕಾರನ್ನು ಹಿಂದಕ್ಕೆ ಕರೆಯಿಸಿಕೊಳ್ಳಲಾಗಿದೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಂಸ್ಥೆಯು ಮುಂಜಾಗ್ರತಾ ಕ್ರಮದ ಭಾಗವಾಗಿ 200ರಷ್ಟು ಪೋರ್ಷೆ 918 ಸ್ಪೈಡರ್ ಕಾರುಗಳನ್ನು ಹಿಂದಕ್ಕೆ ಪಡೆಯಲಾಗುತ್ತಿದೆ. ಆದರೆ ಗ್ರಾಹಕರಿಂದ ಇದುವರೆಗೆ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ ಎಂದಿದ್ದಾರೆ.
ತನ್ನದೇ ಪರೀಕ್ಷೆಯ ವೇಳೆ ಚಾಸೀಯಲ್ಲಿ ತೊಂದರೆ ಕಂಡುಬಂದಿರುವುದು ಸಂಸ್ಥೆಯ ಗಮನಕ್ಕೆ ಬಂದಿದೆ. ಇದನ್ನೀಗ ಎರಡು ದಿನಗಳೊಳಗೆ ಸರಪಡಿಸಿಕೊಡಲಾಗುವುದು ಎಂದಿದೆ.
ಮಿಡ್ ಮೌಂಟೆಡ್ 4.6 ಲೀಟರ್ ವಿ8 ಎಂಜಿನ್‌ನಿಂದ ನಿಯಂತ್ರಿಸಲ್ಪಡುವ ಪೋರ್ಷೆ 918 ಸ್ಪೈಡರ್, 608 ಅಶ್ವಶಕ್ತಿ ಉತ್ಪಾದಿಸಲಿದೆ. ಎರಡು ಎಲೆಕ್ಟ್ರಿಕ್ ಮೋಟಾರುಗಳನ್ನು ಹೊಂದಿರುವ ಈ ಗಾಡಿ ಒಟ್ಟಾರೆ 887 ಅಶ್ವಶಕ್ತಿ ಉತ್ಪಾದಿಸಲು ನೆರವಾಗಲಿದೆ. ಅಂತೆಯೇ 7 ಸ್ಪೀಡ್ ಗೇರ್ ಬಾಕ್ಸ್ ಸಹ ಹೊಂದಿರಲಿದೆ.


Click it and Unblock the Notifications








