ಫೋಕ್ಸ್‌ವ್ಯಾಗನ್ ಚಕನ್ ಘಟಕದತ್ತ ವಿಶೇಷ ಪ್ರವಾಸ
ಮುಂಬೈನ ಫೋಕ್ಸ್‌ವ್ಯಾಗನ್ ಡೀಲರ್ ವಿಶೇಷ ಕಾರ್ಯಕ್ರಮವೊಂದನ್ನು ಏರ್ಪಡಿಸಿತ್ತು. ಅದು ತನ್ನ ಫೋಕ್ಸ್‌ವ್ಯಾಗನ್ ಕಾರು ಮಾಲಿಕರಿಗಾಗಿ ಮುಂಬೈನಿಂದ ಫೋಕ್ಸ್‌ವ್ಯಾಗನ್ ಘಟಕ ಸ್ಥಿತಗೊಂಡಿರುವ ಪುಣೆ ಘಟಕದತ್ತ ವಿಶೇಷ ಪ್ರವಾಸ ಏರ್ಪಡಿಸಿತ್ತು.
ನಿಮಗೆಲ್ಲರಿಗೂ ತಿಳಿದಂತೆಯೇ ಫೋಕ್ಸ್‌ವ್ಯಾಗನ್ ಚಕನ್ ಘಟಕ ಪುಣೆಯಲ್ಲಿ ಸ್ಥಿತಗೊಂಡಿದೆ. ಈ ಸಂದರ್ಭದಲ್ಲಿ ಕಾರು ಮಾಲಿಕರಿಗೆ ಫೋಕ್ಸ್‌ವ್ಯಾಗನ್ ಜನ್ಮಸ್ಥಳ ನೋಡುವ ಅವಕಾಶ ದೊರಕಿತ್ತು. ಅಲ್ಲದೆ ಚಕನ್ ಘಟಕದಲ್ಲಿ ಕಾರುಗಳ ಉತ್ಪಾದನೆ ಹೇಗೆ ನಡೆಯುತ್ತದೆ ಎಂಬುದನ್ನು ತಿಳಿದುಕೊಳ್ಳಲು ಸಾಧ್ಯವಾಗಿತ್ತು.

ಈ ತಂಡವನ್ನು ನುರಿತ ತಜ್ಞರು ಮುಂದಾಳತ್ವ ವಹಿಸಿದ್ದರು. ಅಲ್ಲದೆ ಫೋಕ್ಸ್‌ವ್ಯಾಗನ್ ಘಟಕದಲ್ಲಿ ಏಕೆ ಫೋಕ್ಸ್‌ವ್ಯಾಗನ್ ಕಾರುಗಳನ್ನು ಮಾತ್ರ ಉತ್ಪಾದನೆ ಮಾಡಲು ಸಾಧ್ಯ ಎಂಬುದರ ಬಗ್ಗೆ ಮಾಹಿತಿ ಕೊಡಲಾಗಿತ್ತು.
ನಿಜಕ್ಕೂ ಫೋಕ್ಸ್‌ವ್ಯಾಗನ್ ಮಾಲಿಕರ ಪಾಲಿಗಿದು ಅತಿ ವಿಶೇಷ ಅನುಭವವಾಗಿತ್ತು. ಮುಂದಿನ ದಿನಗಳಲ್ಲಿ ಇದು ಫೋಕ್ಸ್‌ವ್ಯಾಗನ್ ಮಾರಾಟಕ್ಕೆ ಇನ್ನಷ್ಟು ಸ್ಪೂರ್ತಿ ತುಂಬುವ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ.


Click it and Unblock the Notifications








