ಟ್ಯಾಕ್ಸಿಗಳು ಸುರಕ್ಷಿತ, ವಿಶ್ವಾಸಾರ್ಹ ಮತ್ತು ನಂಬಲಾರ್ಹವೇ?

By Nagaraja

ದೆಹಲಿಯಲ್ಲಿ ಮಹಿಳೆಯ ಮೇಲಿನ ಅತ್ಯಾಚಾರ ಪ್ರಕರಣದ ಬೆನ್ನಲ್ಲೇ ಸ್ಪಷ್ಟನೆ ಕೊಟ್ಟಿರುವ ಭಾರತ ರೆಡಿಯೋ ಟ್ಯಾಕ್ಸಿ ಸಂಸ್ಥೆಯು ತಮ್ಮ ಟ್ಯಾಕ್ಸಿಗಳು ಹೆಚ್ಚು ಸುರಕ್ಷಿತ, ವಿಶ್ವಾಸಾರ್ಹ ಹಾಗೂ ನಂಬಲಾರ್ಹವಾಗಿದೆ ಎಂದಿದೆ.

ಕಳೆದ ಶುಕ್ರವಾರ ಉಬೆರ್ ಕ್ಯಾಬ್ ಸರ್ವಿಸ್ ಚಾಲಕ ದೆಹಲಿಯ ಉದ್ಯೋಗಸ್ಥ ಮಹಿಳೆಯನ್ನು ಅಜ್ಞಾತ ವಾಸಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದನು. ತದಾ ಬೆನ್ನಲ್ಲೇ ಆಪ್ ತಳಹದಿಯ ಕ್ಯಾಬ್ ಸೇವೆಗೆ ದೆಹಲಿ ಸರಕಾರ ನಿಷೇಧ ಹೇರಿತ್ತು.

ಇದೇ ವೇಳೆ ಹೇಳಿಕೆ ಕೊಟ್ಟಿರುವ ರೆಡಿಯೋ ಟ್ಯಾಕ್ಸಿ ಆಸೋಸಿಯೇಷನ್ ಆಫ್ ಇಂಡಿಯಾ, ರಾಜ್ಯ ಸಾರಿಗೆ ಇಲಾಖೆಯ ಎಲ್ಲ ನಿಯಮ ಹಾಗೂ ಮಾರ್ಗಸೂಚಿಗಳನ್ನು ಪಾಲಿಸಲು ಸಿದ್ಧರಾಗಿದ್ದೇವೆ ಎಂದಿದೆ.

ರೆಡಿಯೋ ಟ್ಯಾಕ್ಸಿಗಳು ಪ್ರಮುಖವಾಗಿ ಮುಂಬೈ, ದೆಹಲಿ, ಬೆಂಗಳೂರು, ಹೈದರಾಬಾದ್, ಕೋಲ್ಕತ್ತಾ, ಚಂಡೀಗಡ, ಪಂಜಾಬ್, ಇಂಧೋರ್ ಮುಂತಾದ ನಗರಗಳನ್ನು ಕೇಂದ್ರಿಕರಿಸಿ ಕಾರ್ಯಾಚರಿಸುತ್ತಿದೆ.

radio taxi

ರೆಡಿಯೋ ಟ್ಯಾಕ್ಸಿಗಳು ಯಾವುವು?
ಮೆಗಾ ಕ್ಯಾಬ್ಸ್,
ಈಸಿ ಕ್ಯಾಬ್ಸ್,
ಮೆರು ಕ್ಯಾಬ್ಸ್,
ಗೀ ಕ್ಯಾಬ್ಸ್ (ಗುರ್ಗಾಂವ್),
ಚಾನ್ಸನ್ ಕ್ಯಾಬ್ಸ್,
ಯೊ ಕ್ಯಾಬ್ಸ್,
ಸ್ಕೈ ಕ್ಯಾಬ್ಸ್ (ಹೈದರಾಬಾದ್),
ಫ್ಯಾಬ್ ಕ್ಯಾಬ್ (ಚಂಡೀಗಡ),
ಸ್ಟಾರ್ ಕ್ಯಾಬ್ (ಇಂಧೋರ್)

ಇದೇ ಸಂದರ್ಭದಲ್ಲಿ ಉಬೆರ್ ಟ್ಯಾಕ್ಸಿಯಿಂದ ನಡೆದ ಘಟನೆಗೆ ಸಂಸ್ಥೆಯು ಖಂಡನೆ ವ್ಯಕ್ತಪಡಿಸಿದ್ದು, ಇಂತಹ ಘಟನೆಯು ಇಡೀ ದೇಶದ ಟ್ಯಾಕ್ಸಿ ಸೇವೆಗೆ ಕಪ್ಪು ಮಸಿ ಬಳಿಯುವಂತಾಗಿದೆ ಎಂದು ಆಂತಕ ವ್ಯಕ್ತಪಡಿಸಿದೆ.

ಈ ಸಂದರ್ಭದಲ್ಲಿ ಮಾತನಾಡಿರುವ ಭಾರತ ರೆಡಿಯೋ ಟ್ಯಾಕ್ಸಿ ಸಂಸ್ಥೆಯ ಅಧ್ಯಕ್ಷರಾಗಿರುವ ಕುನಾಲ್ ಲಾಹನಿ, ರಾಜ್ಯ ಸಾರಿಗೆ ಇಲಾಖೆಯ ಮಾರ್ಗಸೂಚಿಯಂತೆ ಪ್ರತಿ ಟ್ಯಾಕ್ಸಿ‌ಗಳಲ್ಲೂ ಜಿಪಿಎಸ್/ಜಿಪಿಆರ್‌ಎಸ್ ಟ್ರ್ಯಾಕಿಂಗ್ ಉಪಕರಣ ಆಳವಡಿಸಲಾಗಿದೆ ಎಂದಿದ್ದಾರೆ.

ಮಾತು ಮುಂದುವರಿಸಿರುವ ಅವರು ಪ್ರತಿಯೊಂದು ಟ್ಯಾಕ್ಸಿಗಳಲ್ಲಿ ಚಾಲಕನ ಚಿತ್ರ ಹಾಗೂ ಚಾಲನಾ ಪರವಾನಗಿಯನ್ನು ಕಾರಿನ ಡ್ಯಾಶ್ ಬೋರ್ಡ್‌ನಲ್ಲಿ ತೋರಿಸಲಾಗುವುದು ಎಂದಿದ್ದಾರೆ.

More from DriveSpark

Article Published On: Wednesday, December 10, 2014, 14:52 [IST]
English summary
Radio Taxi Association of India, that represents all licensed Radio Taxi operators across India confirmed that all the members of the association follow all the rules and guidelines issued by the State Transport Departments in all major cities.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+