ಅಮೀರ್ ಖಾನ್ ರಸ್ತೆ ಸುರಕ್ಷತೆ ಪ್ರಚಾರ ರಾಯಭಾರಿ
ದೇಶದಲ್ಲಿ ವರ್ಧಿಸುತ್ತಿರುವ ರಸ್ತೆ ಅಪಘಾತವನ್ನು ತಡೆಗಟ್ಟುವ ಸಲುವಾಗಿ ಸವಾರರಲ್ಲಿ ಮುನ್ನಚ್ಚೆರಿಕೆ ಸೃಷ್ಟಿಸುವುದು ಅನಿವಾರ್ಯವಾಗಿದ್ದು, ಈ ನಿಟ್ಟಿನಲ್ಲಿ ಬಾಲಿವುಡ್‌ನ ಜನಪ್ರಿಯ ನಟ ಅಮೀರ್ ಖಾನ್ ಅವರನ್ನು ರಸ್ತೆ ಸುರಕ್ಷತೆಯ ಮುಖ್ಯ ಪ್ರಚಾರ ರಾಯಭಾರಿಯನ್ನಾಗಿ ಭಾರತ ರಸ್ತೆ ಸಾರಿಗೆ ಸಚಿವಾಲಯವು ನೇಮಕಗೊಳಿಸಿದೆ.
ಇನ್ನು ಮುಂದೆ ಅಮೀರ್ ಅವರು ದೇಶದೆಲ್ಲೆಡೆ ರಸ್ತೆ ಸುರಕ್ಷತಾ ಅಭಿಯಾನವನ್ನು ಪ್ರೋತ್ಸಾಹಿಸಲಿದ್ದಾರೆ. ಈ ಮೂಲಕ ಜನರಲ್ಲಿ ಅರಿವು ಮೂಡಿಸಲಿದ್ದಾರೆ.

ಅಪಾಯಕಾರಿ ಚಾಲನೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಅನಿವಾರ್ಯವಾಗಿದೆ. ಅಂದ ಹಾಗೆ ಅಮೀರ್ ಖಾನ್ ಮೊದಲ ಬಾರಿಯೇನಲ್ಲ ಸರಕಾರದ ಜೊತೆ ಕೈ ಜೋಡಿಸುತ್ತಿರುವುದು. ಈಗಾಗಲೇ ಪ್ರವಾಸಿ ಇಲಾಖೆಯ ಅತಿಥಿ ದೇವೋ ಭವ ಅಭಿಯಾನದಲ್ಲೂ ತಮ್ಮ ಸೇವೆ ಸಲ್ಲಿಸಿದ್ದಾರೆ.
ಇದೀಗ ಸಾರಿಗೆ ಸಚಿವ ನಿತಿನ್ ಗಡ್ಕರಿ ಭೇಟಿ ಮಾಡಿರುವ ಅಮೀರ್ ಹೊಸ ಜವಾಬ್ದಾರಿ ಸ್ವೀಕರಿಸಿದ್ದಾರೆ. ಅವರು ಇತ್ತೀಚೆಗಷ್ಟೇ ಜನಪ್ರಿಯ ಸತ್ಯಮೇವ ಜಯತೇಯಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಕಾರ್ಯಕ್ರಮ ನಡೆಸಿಕೊಟ್ಟಿದ್ದರು.
ಸಾರಿಗೆ ಸಚಿವಾಲಯದ ಅಧ್ಯಯನ ವರದಿಯ ಪ್ರಕಾರ ದೇಶದಲ್ಲಿ ಪ್ರತಿ ವರ್ಷ ಅಂದಾಜು ಐದು ಲಕ್ಷಗಳಷ್ಟು ಅಪಘಾತಗಳು ಸಂಭವಿಸುತ್ತದೆ. ಈ ಪೈಕಿ ಶೇಕಡಾ 25ರಷ್ಟು ಮಂದಿ ಗಾಯಗೊಳ್ಳುತ್ತಾರೆ.


Click it and Unblock the Notifications








