ರೋಲ್ಸ್ ರಾಯ್ಸ್ ಘೋಸ್ಟ್ ಸಿರೀಸ್ II ಭಾರತದಲ್ಲಿ ಬಿಡುಗಡೆ
ಬ್ರಿಟನ್‌ನ ಐಕಾನಿಕ್ ಕಾರು ತಯಾರಿಕ ಸಂಸ್ಥೆಯಾಗಿರುವ ರೋಲ್ಸ್ ರಾಯ್ಸ್ ಭಾರತದಲ್ಲಿ ಘೋಸ್ಟ್ ಸಿರೀಸ್ II ಮಾದರಿಯನ್ನು ಬಿಡುಗಡೆಗೊಳಿಸಿದೆ.
ಇದಕ್ಕೂ ಮೊದಲು 2014 ಜಿನೆವಾದಲ್ಲಿ ಪ್ರದರ್ಶನ ಕಂಡಿದ್ದ ರೋಲ್ಸ್ ರಾಯ್ಸ್ ಉದ್ದವಾದ ವೀಲ್ ಬೇಸ್ ಮತ್ತು ಸ್ಟಾಂಡರ್ಡ್ ವೀಲ್ ಬೇಸ್ ಮಾದರಿಗಳನ್ನು ದೇಶದತ್ತ ಪಯಣ ಬೆಳೆಸಿದೆ.

ದರ ಮಾಹಿತಿ (ಮುಂಬೈ ಎಕ್ಸ್ ಶೋ ರೂಂ)
ರೋಲ್ಸ್ ರಾಯ್ಸ್ ಘೋಸ್ಟ್ ಸಿರೀಸ್ II - 4.5 ಕೋಟಿ ರು.
ವಿಶಿಷ್ಟತೆಗಳು
ರೋಲ್ಸ್ ರಾಯ್ಸ್ ಘೋಸ್ಟ್ ಸಿರೀಸ್ II 6.6 ಲೀಟರ್ ವಿ12 ಟ್ವಿನ್ ಟರ್ಬೊ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 563 ಅಶ್ವಶಕ್ತಿ (5250 ಆವರ್ತನಕ್ಕೆ) ಉತ್ಪಾದಿಸಲಿದೆ. ಅದೇ ರೀತಿ ಗರಿಷ್ಠ 780 ಎನ್‌ಎಂ ಟಾರ್ಕ್ (1500 ಆವರ್ತನಕ್ಕೆ) ಪಡೆಯಲಿದೆ.

ವಿನ್ಯಾಸ
ಹೊಸ ಘೋಸ್ಟ್ ಸಂಪೂರ್ಣ ಪರಿಷ್ಕೃತ ಹೆಡ್ ಲ್ಯಾಂಪ್ ಪಡೆದುಕೊಂಡಿದ್ದು, ಡೇ ಟೈಮ್ ರನ್ನಿಂಗ್ ಹೆಡ್ ಲ್ಯಾಂಪ್ ಕಾರಿಗೆ ಇನ್ನಷ್ಟು ಆಕರ್ಷಣೆ ತುಂಬಿದೆ. ಅದೇ ರೀತಿ ಪರಿಷ್ಕೃತ ಬಂಪರ್ ಕೂಡಾ ಕಾಣಬಹುದಾಗಿದೆ.
ಕಾರಿನೊಳಗೂ ಗಮನಾರ್ಹ ಬದಲಾವಣೆ ತರಲಾಗಿದ್ದು, ಹೆಚ್ಚಿನ ಆರಾಮದಾಯಕದ ನಿಟ್ಟಿನಲ್ಲಿ ಸೀಟನ್ನು ವಿನ್ಯಾಸಗೊಳಿಸಲಾಗಿದೆ. ಇನ್ನು ಮುಂದುಗಡೆ ತೊಡೆಯ ಬೆಂಬಲ ಸೀಟನ್ನು ವಿದ್ಯುನ್ಮಾನವಾಗಿ ನಿಯಂತ್ರಿಸಬಹುದಾಗಿದೆ.

ವೈಶಿಷ್ಟ್ಯ
ಸ್ಯಾಟಲೈಟ್ ಏಡಡ್ ಗೇರ್ ಶಿಫ್ಟ್,
ಹೆಡ್ಸ್ ಅಪ್ ಡಿಸ್‌ಪ್ಲೇ,
ಇನ್ಫ್ರಾರೆಡ್ ಕ್ಯಾಮೆರಾ,
ವಾಯ್ಸ್ ನಿಯಂತ್ರಣ ಕಮಾಂಡ್


Click it and Unblock the Notifications








