2017ರಲ್ಲಿ ರೋಲ್ಸ್ ರಾಯ್ಸ್ ಲಗ್ಷುರಿ ಎಸ್‌ಯುವಿ ಎಂಟ್ರಿ
ಬ್ರಿಟನ್‌ನ ಐಷಾರಾಮಿ ವಾಹನ ತಯಾರಕ ಸಂಸ್ಥೆಯಾಗಿರುವ ರೋಲ್ಸ್ ರಾಯ್ಸ್, 2017ನೇ ಇಸವಿಯಲ್ಲಿ ಲಗ್ಷುರಿ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ ಸೆಗ್ಮೆಂಟ್‌ಗೆ ಕಾಲಿಡುತ್ತಿದೆ. ಈ ನಿಟ್ಟಿನಲ್ಲಿ ತೆರೆಯರೆಯಲ್ಲಿ ಸಿದ್ಧತೆ ನಡೆಸಲಾಗುತ್ತಿದ್ದರೂ ಎಸ್‌ಯುವಿ ಬಗೆಗಿನ ಹೆಚ್ಚಿನ ಮಾಹಿತಿಗಳು ಲಭ್ಯವಾಗಿಲ್ಲ.
ಪ್ರೀಮಿಯಂ ಲಗ್ಷುರಿ ಎಸ್‌ಯುವಿ ಸೆಗ್ಮೆಂಟ್‌ನಲ್ಲಿ ನೂತನ ಕ್ರೀಡಾ ಉತ್ಪಾದಕ ವಾಹನವನ್ನು ಬಿಡುಗಡೆಗೊಳಿಸುವುದಾಗಿ ಬೆಂಟ್ಲಿ ಖಚಿತಪಡಿಸಿದೆ. ಈ ಮೂಲಕ ಪ್ರೀಮಿಯಂ ಎಸ್‌ಯುವಿ ಸೆಗ್ಮೆಂಟ್‌ಗೂ ಕಾಲಿಡಲಿದೆ.

ಈ ನಿಟ್ಟಿನಲ್ಲಿ ರೋಲ್ಸ್ ರಾಯ್ಸ್ ವಿನ್ಯಾಸಗಾರರ ತಂಡ ಕಠಿಣ ಪರಿಶ್ರಮದಲ್ಲಿ ತಮ್ಮನ್ನ ತಾವೇ ತೊಡಗಿಸಿಕೊಂಡಿದ್ದಾರೆ. ಇದು ಈಗಿರುವ ಕಾರಿನ ಪರಿಷ್ಕೃತ ಆವೃತ್ತಿಯಾಗಿರುವುದಿಲ್ಲ. ಅಂದರೆ ಎಲ್ಲ ಹೊಸತನದಿಂದ ಕೂಡಿದ ಡಿಸೈನ್ ತಂತ್ರಜ್ಞಾನವನ್ನು ಅನುಸರಿಸಲು ಯೋಜನೆ ಹಾಕಿಕೊಂಡಿದೆ.
ರೋಲ್ಸ್ ರಾಯ್ಸ್‌ನಿಂದ ಆಗಮನವಾಗಲಿರುವ ನೈಜ ಎಸ್‌ಯುವಿ, ಜರ್ಮನಿಯ ಮರ್ಸಿಡಿಸ್ ಬೆಂಝ್ ಜಿಎಲ್‌ಕೆ ಮಾದರಿಗಿಂತಲೂ ಬೃಹತ್ತಾಗಿರಲಿದೆ. ಇದಲ್ಲದೆ 2018ರ ವೇಳೆಗೆ ತನ್ನ ಜನಪ್ರಿಯ ಘೋಸ್ಟ್ ಫೇಸ್‌ಲಿಫ್ಟ್ ವರ್ಷನ್ ಪರಿಚಯಿಸುವ ಇರಾದೆ ಹೊಂದಿದೆ. ಇದಕ್ಕೂ ಮೊದಲು 2017ರಲ್ಲಿ ನೂತನ ಫಾಟಂ ಬಿಡುಗಡೆ ಮಾಡುವ ಯೋಜನೆ ಹೊಂದಿದೆ.


Click it and Unblock the Notifications








