ರಿಟ್ಜ್ ವಿಶೇಷ ಆವೃತ್ತಿಗೂ ಬಂತು ರಿಯಾಯಿತಿ ದರ
ಸಾಮಾನ್ಯವಾಗಿ ನಿರ್ದಿಷ್ಟ ಮಾದರಿಯ ಕಳೆಗುಂದಿರುವ ಮಾರಾಟವನ್ನು ಉತ್ತೇಜಿಸುವ ಸಲುವಾಗಿ ವಿಶೇಷ ಅಥವಾ ಸೀಮಿತ ಆವೃತ್ತಿಗಳನ್ನು ಬಿಡುಗಡೆ ಮಾಡಲಾಗುತ್ತದೆ. ಆದರೆ ಅಂತಹ ವಿಶೇಷ ಆವೃತ್ತಿಗಳೇ ನೆಲಕಚ್ಚಿ ಹೋದರೆ ಹೇಗಿರಬಹುದು? ಇಲ್ಲಿದೆ ನೋಡಿ ಉತ್ತರ.
ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ತಯಾರಿಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ, ಜುಲೈ ತಿಂಗಳಲ್ಲಿ ರಿಟ್ಜ್ ವಿಲೇಟ್ ವಿಶೇಷ ಆವೃತ್ತಿಯನ್ನು ಬಿಡುಗಡೆಗೊಳಿಸಿತ್ತು.
ಆಕರ್ಷಕ ಮೈ ಬಣ್ಣದೊಂದಿಗೆ ಆಗಮನವಾಗಿದ್ದ ರಿಟ್ಜ್ ಎಲೇಟ್ ಮಾರುಕಟ್ಟೆಯಲ್ಲಿ ನಿರೀಕ್ಷಿದಷ್ಟು ಮಾರಾಟವಾಗಿರಲಿಲ್ಲ. ಇದೀಗ ಸಂಸ್ಥೆಯು ರಿಟ್ಜ್ ಎಲೇಟ್ ಖರೀದಿ ವೇಳೆ ರು. 65,000 ರು.ಗಳ ವರೆಗೆ ರಿಯಾಯಿತಿ ದರ ನೀಡಲಾಗುತ್ತಿದೆ.

ಈ ಸೀಮಿತ ಆವೃತ್ತಿಯ ಗಾಡಿಯು ಸಿಡಿಐ ಮತ್ತು ವಿಎಕ್ಸಐ ವೆರಿಯಂಟ್‌ಗಳಲ್ಲಿ ಲಭ್ಯವಿರಲಿದೆ. ಅಷ್ಟಕ್ಕೂ ರಿಟ್ಜ್ ಎಲೇಟ್ ಸೀಮಿತ ಆವೃತ್ತಿಯಲ್ಲಿರುವ ವೈಶಿಷ್ಟ್ಯಗಳೇನು? ಕೆಳಗಡೆ ಇದೆ ನೋಡಿ
ವೈಶಿಷ್ಟ್ಯಗಳು
2 ಡಿನ್ ಮ್ಯೂಸಿಕ್ ಸಿಸ್ಟಂ ಜೊತೆ ಸ್ಪೀಕರ್,
ಸೀಟ್ ಕವರ್,
ಬ್ಲೂಟೂತ್ ಸ್ಟಿರಿಯೋ ಮತ್ತು ಟೆಲಿಫೋನಿ ಕಿಟ್,
ರಿವರ್ಸ್ ಪಾರ್ಕಿಂಗ್ ಸೆನ್ಸಾರ್,
ಬಾಡಿ ಗ್ರಾಫಿಕ್ಸ್,
ಡೋರ್ ವೈಸರ್,
ಫ್ಲೋರ್ ಮ್ಯಾಟ್,
ಮಲ್ಟಿಪರ್ಪಸ್ ಬ್ಯಾಗ್,
ಆಂಬಿಯೆಂಟ್ ಲೈಟಿಂಗ್,
ನೆಕ್ ಕುಷನ್ಸ್,
ಸ್ಟೀರಿಂಗ್ ವೀಲ್ ಕವರ್,
ಮಡ್ ಫ್ಲಾಪ್ಸ್

ಎಂಜಿನ್
ಎರಡು ಎಂಜಿನ್ ಆಯ್ಕೆಗಳಲ್ಲಿ ರಿಟ್ಜ್ ಲಭ್ಯವಿರಲಿದೆ. ಇದರ 1.2 ಲೀಟರ್ 4 ಸಿಲಿಂಡರ್ ಕೆ ಸಿರೀಸ್ ಪೆಟ್ರೋಲ್ ಎಂಜಿನ್ 85 ಅಶ್ವಶಕ್ತಿ (113 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಅಂತೆಯೇ 1.3 ಲೀಟರ್ 4 ಸಿಲಿಂಡರ್ ಫಿಯೆಟ್ ಮಲ್ಟಿಜೆಟ್ ಡೀಸೆಲ್ ಎಂಜಿನ್ 75 ಅಶ್ವಶಕ್ತಿ (190 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಇವೆರಡು 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಪಡೆದುಕೊಂಡಿದೆ. ಅಂತೆಯೇ ಪೆಟ್ರೋಲ್ ನಿಯಂತ್ರಿತ ರಿಟ್ಜ್, 4 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲೂ ಲಭ್ಯವಾಗಲಿದೆ.
ಮೈಲೇಜ್
ಸ್ವಿಫ್ಟ್ ಡೀಸೆಲ್ ಪ್ರತಿ ಲೀಟರ್‌ಗೆ 23.2 ಕೀ.ಮೀ. ಅಂತೆಯೇ ಪೆಟ್ರೋಲ್ ವೆರಿಯಂಟ್ ಅನುಕ್ರಮವಾಗಿ ಪ್ರತಿ ಲೀಟರ್‌ಗೆ 17.16 ಕೀ.ಮೀ. (ಆಟೋಮ್ಯಾಟಿಕ್) ಹಾಗೂ 18.5 ಕೀ.ಮೀ. (ಮ್ಯಾನುವಲ್) ಮೈಲೇಜ್ ನೀಡಲಿದೆ.


Click it and Unblock the Notifications








