ಶಾರೂಖ್ ಖಾನ್ ಹ್ಯುಂಡೈ ಎಕ್ಸ್‌ಸೆಂಟ್ ಬ್ರಾಂಡ್ ಅಂಬಾಸಿಡರ್

By Nagaraja

ಎಸ್‌ಆರ್‌ಕೆ ಎಂದೇ ಪ್ರಸಿದ್ಧಿ ಪಡೆದಿರುವ ಬಾಲಿವುಡ್‌ನ ಜನಪ್ರಿಯ ನಟ ಶಾರೂಖ್ ಖಾನ್ ಅವರನ್ನು ಹ್ಯುಂಡೈ ಎಕ್ಸ್‌ಸೆಂಟ್ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕಗೊಳಿಸಲಾಗಿದೆ. ಈ ಬಗ್ಗೆ ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ (ಎಚ್‌ಎಂಐಎಲ್) ಹೊರಡಿಸಿರುವ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ದೇಶದ ಅತಿ ದೊಡ್ಡ ರಫ್ತುದಾರ ಹಾಗೂ ಎರಡನೇ ಅತಿದೊಡ್ಡ ಪ್ರಯಾಣಿಕ ಕಾರು ತಯಾರಕ ಸಂಸ್ಥೆಯಾಗಿರುವ ಹ್ಯುಂಡೈ ಇಂಡಿಯಾ, ಇತ್ತೀಚೆಗಷ್ಟೇ ಎಕ್ಸ್‌ಸೆಂಟ್ ಕಾಂಪಾಕ್ಟ್ ಸೆಡಾನ್ ಕಾರನ್ನು ಮಾರುಕಟ್ಟೆಗೆ ಪರಿಚಯಿಸಿತ್ತು. ಅಲ್ಲದೆ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಅತ್ಯುತ್ತಮ ಮಾರಾಟ ಸಾಧಿಸುವಲ್ಲಿ ಯಶಸ್ವಿಯಾಗಿತ್ತು.


ಇದೀಗ ಶಾರೂಖ್ ಖಾನ್ ಪ್ರಮುಖ ಪ್ರಚಾರ ರಾಯಭಾರಿಯಾಗಿ ನೇಮಕಗೊಳ್ಳುವುದರೊಂದಿಗೆ ಇನ್ನಷ್ಟು ಮಾರಾಟ ವೃದ್ಧಿಯನ್ನು ಹ್ಯುಂಡೈ ಗುರಿಯಿರಿಸಿಕೊಂಡಿದೆ. ಇನ್ನು ಮುಂದೆ ಹ್ಯುಂಡೈ ಎಕ್ಸ್‌ಸೆಂಟ್ ಎಲ್ಲ ಪ್ರಚಾರಗಳಲ್ಲಿ ಶಾರೂಕ್ ಖಾನ್ ಕಾಣಿಸಿಕೊಳ್ಳಲಿದೆ.

ಸಂಸ್ಥೆ ನೀಡಿರುವ ಮಾಹಿತಿ ಪ್ರಕಾರ 2014 ದೆಹಲಿ ಆಟೋ ಎಕ್ಸ್ ಪೋ ಬೆನ್ನಲ್ಲೇ ಬಿಡುಗಡೆಯಾಗಿದ್ದ ಹ್ಯುಂಡೈ ಎಕ್ಸ್‌ಸೆಂಟ್, ಇದುವರೆಗೆ 35,400ರಷ್ಟು ಸಂತುಷ್ಟ ಕುಟುಂಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಮುಂಬರುವ ಹಬ್ಬದ ಆವೃತ್ತಿ ಹಿನ್ನಲೆಯಲ್ಲಿ ಮಾರಾಟ ಇನ್ನಷ್ಟು ಉತ್ತೇಜನ ಪಡೆದುಕೊಳ್ಳುವ ನಿರೀಕ್ಷೆಯಿದೆ.

hyundai xcent

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹ್ಯುಂಡೈ ಇಂಡಿಯಾ ಪ್ರಮುಖ ರಾಯಭಾರಿ ಕೂಡಾ ಆಗಿರುವ ಶಾರೂಖ್ ಖಾನ್, "ಕಳೆದ 16 ವರ್ಷಗಳಿಂದ ಸಂಸ್ಥೆಯ ಜೊತೆ ಕೈಜೋಡಿಸಿಕೊಂಡಿದ್ದು, ದೇಶದ ಅತಿ ನಂಬಿಕೆಗ್ರಸ್ತ ಸಂಸ್ಥೆಯೊಂದಿಗೆ ಕೆಲಸ ಮಾಡುವುದು ಯಾವತ್ತೂ ಖುಷಿಯ ವಿಚಾರ ಎಂದಿದ್ದಾರೆ. ಹ್ಯುಂಡೈ ನನ್ನ ಹೃದಯಕ್ಕೆ ಹತ್ತಿರವಾಗಿದ್ದು, ಜನರಿಗೆ ಅತ್ಯಂತ ಆಧುನಿಕ, ಪ್ರೀಮಿಯಂ, ಸ್ಟೈಲಿಷ್ ಮತ್ತು ಅಮೂಲ್ಯ ಕಾರು ನೀಡುವಲ್ಲಿ ಯಶಸ್ವಿಯಾಗಿದೆ" ಎಂದಿದ್ದಾರೆ.

More from DriveSpark

Article Published On: Thursday, September 18, 2014, 10:16 [IST]
English summary
Hyundai Motor India Limited (HMIL), the country’s largest exporter and the second-largest car manufacturer, today announced Bollywood legend and superstar Shah Rukh Khan as the brand ambassador for Xcent- the real family sedan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+