ಕೇರಳದಲ್ಲಿ ಮಹಿಳೆಯರಿಗಾಗಿ 'ಶಿ ಟ್ಯಾಕ್ಸಿ'; ಬೆಂಗ್ಳೂರಿಗೂ ಬೇಕೇ?

By Nagaraja

ನೆರೆಯ ಕೇರಳ ರಾಜ್ಯದಲ್ಲಿ ಅಲ್ಲಿನ ಸರಕಾರವು ಮಹಿಳಾ ಪ್ರಯಾಣಿಕರ ಸುರಕ್ಷಿತ ಪ್ರಯಾಣಿಕ್ಕೆ ಹೆಚ್ಚಿನ ಆದ್ಯತೆ ಕೊಡುತ್ತಿದೆ. ಕಳೆದ ವರ್ಷ ತಿರುವನಂತಪುರ ನಗರಕ್ಕೆ ಪರಿಚಯವಾಗಿದ್ದ ನೂತನ 'ಶಿ ಟ್ಯಾಕ್ಸಿ' ವ್ಯವಸ್ಥೆಯು ಇದೀಗ ಕೊಚ್ಚಿ ನಗರವನ್ನು ಪ್ರವೇಶಿಸಿದೆ.

ಈ ಮೂಲಕ ತಿರುವನಂತಪುರ ಬಳಿಕ ಮಹಿಳೆಯರಿಗಾಗಿ ವಿಶೇಷ ಕ್ಯಾಬ್ ವ್ಯವಸ್ಥೆ ಹೊಂದಿರುವ ದೇಶದ ಎರಡನೇ ನಗರವೆಂಬ ಹೆಗ್ಗಳಿಕೆಗೆ ಕೊಚ್ಚಿ ಪಾತ್ರವಾಗಿದೆ. ಕೇರಳ ಸರಕಾರದ ಸಹಭಾಗಿತ್ವದಲ್ಲಿ ಶಿ ಟ್ಯಾಕ್ಸಿ ಆರಂಭಿಸಲಾಗಿದೆ. ಇದರಂತೆ ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಯೋಜನೆಗೆ ಹಸಿರು ನಿಶಾನೆ ತೋರಿದರು.

ಕೇರಳದಲ್ಲಿ ಮಹಿಳೆಯರಿಗಾಗಿ 'ಶಿ ಟ್ಯಾಕ್ಸಿ'; ಬೆಂಗ್ಳೂರಿಗೆ ಬೇಕೇ?

ರಾತ್ರಿ ಹೊತ್ತು ಟ್ಯಾಕ್ಸಿ ಅಥವಾ ರಿಕ್ಷಾ ಪ್ರಯಾಣ ಅಪಾಯಕಾರಿಯಾಗಿ ಪರಿಣಮಿಸಿರುವುದರಿಂದ ಕೇರಳ ಸರಕಾರ 24 ತಾಸು ಸೇವೆ ಒದಗಿಸುವ ಮಹಿಳೆಯರೇ ಚಲಾಯಿಸುವ ಶಿ ಟ್ಯಾಕ್ಸಿ‌ಗಳನ್ನು ಪರಿಚಯಿಸಿದೆ.

ಕೇರಳದಲ್ಲಿ ಮಹಿಳೆಯರಿಗಾಗಿ 'ಶಿ ಟ್ಯಾಕ್ಸಿ'; ಬೆಂಗ್ಳೂರಿಗೆ ಬೇಕೇ?

ಆರು ತಿಂಗಳುಗಳ ಹಿಂದೆಯಷ್ಟೇ ಅಂದರೆ 2013 ನವೆಂಬರ್ 19ರಂದು ರಾಜಧಾನಿ ತಿರುವನಂತಪುರದಲ್ಲಿ ಮೊದಲ ಬಾರಿಗೆ ಶಿ ಟ್ಯಾಕ್ಸಿ ಆರಂಭವಾಗಿತ್ತು. ಕೇರಳದ ಜನಪ್ರಿಯ ನಟಿ ಮಂಜು ವಾರಿಯರ್ ಶಿ ಟ್ಯಾಕ್ಸಿ ಯೋಜನೆಯ ಸದ್ಭಾವನಾ ಪ್ರಚಾರ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ.

ಕೇರಳದಲ್ಲಿ ಮಹಿಳೆಯರಿಗಾಗಿ 'ಶಿ ಟ್ಯಾಕ್ಸಿ'; ಬೆಂಗ್ಳೂರಿಗೆ ಬೇಕೇ?

ಈ ಸಂದರ್ಭದಲ್ಲಿ ಮಾತನಾಡಿದ ಕೇರಳ ಸಿಎಂ ಉಮ್ಮನ್ ಚಾಂಡಿ, ಮಹಿಳಾ ಸಬಲೀಕರಣದಲ್ಲಿ ದೇಶಕ್ಕೆ ಶಿ ಟ್ಯಾಕ್ಸಿ ಯೋಜನೆಯು ಮಾದರಿಯಾಗಲಿದೆ ಎಂದಿದ್ದಾರೆ.

ಕೇರಳದಲ್ಲಿ ಮಹಿಳೆಯರಿಗಾಗಿ 'ಶಿ ಟ್ಯಾಕ್ಸಿ'; ಬೆಂಗ್ಳೂರಿಗೆ ಬೇಕೇ?

ಶಿ ಟ್ಯಾಕ್ಸಿ ಯಶಸ್ಸಿನ ಬೆನಲ್ಲೇ ಕೇರಳ ಜಾಗತಿಕವಾಗಿಯೂ ಗುರುತಿಸಲ್ಪಟ್ಟಿದ್ದು, ಯುನೈಟೆಡ್ ಅರಬ್ ಎಮಿರೇಟ್ಸ್ ಸಹ ಇದರ ಸಾಧಕ ಬಾಧಕಗಳನ್ನು ಪರಿಶೀಲಿಸಿ ಈ ಯೋಜನೆ ಕೈಗೆತ್ತಿಕೊಳ್ಳುವ ಇರಾದೆಯಲ್ಲಿದೆ.

ಕೇರಳದಲ್ಲಿ ಮಹಿಳೆಯರಿಗಾಗಿ 'ಶಿ ಟ್ಯಾಕ್ಸಿ'; ಬೆಂಗ್ಳೂರಿಗೆ ಬೇಕೇ?

ಸದ್ಯ ಕೊಚ್ಚಿಯಲ್ಲಿ 10 ಶಿ ಟ್ಯಾಕ್ಸಿ ಕ್ಯಾಬ್‌ಗಳು ಲಭ್ಯವಾಗಲಿದೆ. ಮುಂದಿನ ದಿನಗಳಲ್ಲಿ ಉತ್ತರ ಮಲಬಾರ್‌ನ ಕಲ್ಲಿಕೋಟೆ ನಗರದಲ್ಲೂ ಪರಿಚಯವಾಗಲಿದೆ ಎಂದು ಕೇರಳ ಸಚಿವರಾದ ಎಂ. ಕೆ. ಮುನೀರ್ ತಿಳಿಸಿದ್ದಾರೆ.

ಕೇರಳದಲ್ಲಿ ಮಹಿಳೆಯರಿಗಾಗಿ 'ಶಿ ಟ್ಯಾಕ್ಸಿ'; ಬೆಂಗ್ಳೂರಿಗೆ ಬೇಕೇ?

ಮಾತು ಮುಂದುವರಿಸಿರುವ ಅವರು, ಕೇರಳದ್ಯಾಂತ ಎಲ್ಲ ಪ್ರಮುಖ ನಗರಗಳಲ್ಲಿ 250ರಷ್ಟು ಶಿ ಟ್ಯಾಕ್ಸಿ ಪರಿಚಯಿಸಲಾಗುವುದು ಎಂದಿದ್ದಾರೆ.

ಕೇರಳದಲ್ಲಿ ಮಹಿಳೆಯರಿಗಾಗಿ 'ಶಿ ಟ್ಯಾಕ್ಸಿ'; ಬೆಂಗ್ಳೂರಿಗೆ ಬೇಕೇ?

ಅಂದ ಹಾಗೆ ದೇಶದ ನಂಬರ್ ವನ್ ಕಾರು ಸಂಸ್ಥೆಯಾಗಿರುವ ಮಾರುತಿ ಸುಜುಕಿ, ಶಿ ಟ್ಯಾಕ್ಸಿ‌ ಯೋಜನೆಗಾಗಿ ಕಾರುಗಳನ್ನು ಒದಗಿಸಲಿದೆ. ಇದು ವಿಶೇಷವಾದ ಗುಲಾಬಿ ಹಾಗೂ ಶ್ವೇತ ಬಣ್ಣದ ಮಿಶ್ರಣವನ್ನು ಹೊಂದಿದೆ.

ವೈಶಿಷ್ಟ್ಯತೆಗಳು

ವೈಶಿಷ್ಟ್ಯತೆಗಳು

ಈ ಕಾರಿನಲ್ಲಿ ಜಿಪಿಎಸ್, ನಿಖರ ಮಾಪಕ ವ್ಯವಸ್ಥೆ. ಎಲ್‌ಸಿಡಿ ಸಿಸ್ಟಂ, ವೈಯಕ್ತಿಕ ಮತ್ತು ತುರ್ತು ಎಚ್ಚರಿಕೆಯ ವ್ಯವಸ್ಥೆಗಳು, ಮನರಂಜನೆ ಮತ್ತು ಇನ್ನಿತರ ಹಲವಾರು ಸೌಕರ್ಯಗಳನ್ನು ಒಳಗೊಂಡಿರಲಿದೆ.

ಸುರಕ್ಷತೆ

ಸುರಕ್ಷತೆ

ಇದರ ಜತೆಗೆ ಸುರಕ್ಷಾ ಮಾನದಂಡಗಳಿಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಚಾಲಕಿ ಹಾಗೂ ಪ್ರಯಾಣಿಕರಿಗೆ ಎಮರ್ಜನ್ಸಿ ಅಲರ್ಟ್ ಸ್ವಿಚ್ ಅಂತೆಯೇ ಮಹಿಳಾ ಚಾಲಕರಿಯರಿಗೆ ಸೇಫ್ಟಿ ಅಲರ್ಟ್ ಮೊಬೈಲ್ ಅಪ್ಲಿಕೇಷನ್ ವ್ಯವಸ್ಥೆಯಿರುತ್ತದೆ.

ಕೇರಳದಲ್ಲಿ ಮಹಿಳೆಯರಿಗಾಗಿ 'ಶಿ ಟ್ಯಾಕ್ಸಿ'; ಬೆಂಗ್ಳೂರಿಗೆ ಬೇಕೇ?

ಕೇರಳ ಸರಕಾರದ ಸಾಮಾಜಿಕ ನ್ಯಾಯ ಇಲಾಖೆಯ ಜೆಂಡರ್ ಪಾರ್ಕ್ ಸಂಸ್ಥೆ, ಈ ಮಹತ್ತರ ಶಿ ಟ್ಯಾಕ್ಸಿ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಈ ಮೂಲಕ ಪುರುಷರಿಗೆ ಮಹಿಳೆಯರು ಸಹ ಸರಿಸಮಾನರು ಎಂಬ ಏಕರೂಪದ ವೇದಿಕೆ ರೂಪಿಸಲು ಸಂಸ್ಥೆ ಕಟುಬದ್ಧವಾಗಿದೆ.

ವಿಶೇಷತೆ

ವಿಶೇಷತೆ

ಶಿ ಟ್ಯಾಕ್ಸಿ ಸೇವೆಗಾಗಿ ಗ್ರಾಹಕರು ಸ್ಟಾಂಡ್‌ಗಳಲ್ಲಿ ಕಾದು ನಿಲ್ಲುವ ಅಗತ್ಯವಿಲ್ಲ. ಇದಕ್ಕಾಗಿ ವಿಶೇಷ ಕಾಲ್ ಸೆಂಟರ್ ವ್ಯವಸ್ಥೆ ಏರ್ಪಡಿಸಲಾಗಿದೆ.

ಭದ್ರತೆ

ಭದ್ರತೆ

ಶಿ ಟ್ಯಾಕ್ಸಿ ಪ್ರಯಾಣಿಕರಿಗೆ ಸಂಪೂರ್ಣ ಭದ್ರತೆ ಒದಗಿಸುತ್ತಿದ್ದು, ಪೊಲೀಸ್ ಕಂಟ್ರೋಲ್ ರೂಮ್ ಪ್ರತ್ಯೇಕ ನಿಗಾವಹಿಸಿರುತ್ತದೆ.

ಕೇರಳದಲ್ಲಿ ಮಹಿಳೆಯರಿಗಾಗಿ 'ಶಿ ಟ್ಯಾಕ್ಸಿ'; ಬೆಂಗ್ಳೂರಿಗೆ ಬೇಕೇ?

ಸದ್ಯ ಇಂತಹದೊಂದು ವ್ಯವಸ್ಥೆ ನಮ್ಮ ಬೆಂಗಳೂರು ನಗರದಲ್ಲೂ ಆಳವಡಿಸಿದರೆ ಹೇಗಿರಬಹುದು? ನಿಮ್ಮ ಅಭಿಪ್ರಾಯಗಳನ್ನು ನಮ್ಮ ಜೊತೆ ಹಂಚಿಕೊಳ್ಳಲು ಮರೆಯದಿರಿ...

ಕೇರಳದಲ್ಲಿ ಮಹಿಳೆಯರಿಗಾಗಿ 'ಶಿ ಟ್ಯಾಕ್ಸಿ'; ಬೆಂಗ್ಳೂರಿಗೆ ಬೇಕೇ?

ಗುಲಾಬಿ ಹಾಗೂ ಶ್ವೇತ ಬಣ್ಣ ಮಿಶ್ರಿತ ಮನೋಹರವಾದ 'ಶಿ ಟ್ಯಾಕ್ಸಿ'


More from DriveSpark

Article Published On: Thursday, May 22, 2014, 13:37 [IST]
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+