ಸ್ಕೋಡಾ ರಾಪಿಡ್ ಶ್ರೇಣಿಯ ಕಾರುಗಳಿಗೆ ಆಫರ್
ಜೆಕ್ ಗಣರಾಜ್ಯದ ವಾಹನ ತಯಾರಿಕ ಸಂಸ್ಥೆಯಾಗಿರುವ ಸ್ಕೋಡಾ, ಭಾರತದಲ್ಲಿ ತನ್ನ ಸಾನಿಧ್ಯವನ್ನು ಗಟ್ಟಿಪಡಿಸುವ ಇರಾದೆಯಲ್ಲಿದೆ. ಇದರಂತೆ ತನ್ನ ಜನಪ್ರಿಯ ರಾಪಿಡ್ ಶ್ರೇಣಿಯ ಕಾರುಗಳಿಗೆ ಗರಿಷ್ಠ ಕೊಡುಗೆಗಳನ್ನು ಮುಂದಿರಿಸಿದೆ.
ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆಯಾಗಿದ್ದ ಹೊಸ ಸ್ಕೋಡಾ ರಾಪಿಡ್, ನಿರೀಕ್ಷಿದಷ್ಟು ಮಾರಾಟ ಸಾಧಿಸುವಲ್ಲಿ ವಿಫಲವಾಗಿದೆ. 2014 ಅಕ್ಟೋಬರ್ ತಿಂಗಳಲ್ಲಿ ಸರಿ ಸುಮಾರು 1,000 ಯುನಿಟ್‌ಗಳಷ್ಟು ಮಾರಾಟ ಮಾತ್ರ ಗಿಟ್ಟಿಸಿಕೊಂಡಿತ್ತು. ಇನ್ನೊಂದೆಡೆ ಈಗಷ್ಟೇ ಬಿಡುಗಡೆಯಾಗಿರುವ ಮಾರುತಿ ಸಿಯಾಝ್ ಅಕ್ಟೋಬರ್ ತಿಂಗಳಲ್ಲಿ 6,000ಗಿಂತಲೂ ಹೆಚ್ಚು ಮಾರಾಟ ದಾಖಲಿಸಿತ್ತು.

ಇದರಂತೆ ಹೋಂಡಾ ಹಾಗೂ ಮಾರುತಿ ಕಾರುಗಳ ಸವಾಲನ್ನು ಎದುರಿಸಲು ಸ್ಕೋಡಾ ಇಂತಹದೊಂದು ನಡೆ ಅನುಸರಿಬೇಕಾಗಿರುವುದು ಅನಿವಾರ್ಯವಾಗಿದೆ. ಇದೀಗ ಸಂಸ್ಥೆಯು 30,000 ರು.ಗಳ ಎಕ್ಸ್‌ಚೇಂಜ್ ಬೋನಸ್ ಒದಗಿಸುತ್ತಿದೆ. ಇದರ ಜೊತೆಗೆ ಒಂದು ವರ್ಷಗಳ ಉಚಿತ ವಿಮಾ ಸೌಲಭ್ಯ ಕೂಡಾ ಇರಲಿದೆ. ಅಂತೆಯೇ ಮುಂದಿನ ನಾಲ್ಕು ವರ್ಷಗಳಿಗೆ ಉಚಿತ ರೋಡ್ ಸೈಡ್ ಸೇವೆ ಕೊಡಾ ಒದಗಿಸಲಿದೆ. ಅಂತೆಯೇ ಕಾರ್ಪೋರೇಟ್ ಡಿಸ್ಕೌಂಟ್ ಇದರಲ್ಲಿ ಸೇರಿರಲಿದೆ.
ಡಿಎಸ್‌ಜಿ ಡೀಸೆಲ್ ಆಟೋಮ್ಯಾಟಿಕ್ ಹೊರತುಪಡಿಸಿ ಪೆಟ್ರೋಲ್ ಹಾಗೂ ಡೀಸೆಲ್ ರಾಪಿಡ್ ಮಾದರಿಗಳಿಗೆ ಆಫರುಗಳು ಅನ್ವಯವಾಗಲಿದೆ. ಭಾರತದಲ್ಲಿ ಸ್ಕೋಡಾ ಪೆಟ್ರೋಲ್ ಶ್ರೇಣಿಯ ಕಾರುಗಳ ಬೆಲೆ 7.22 ಲಕ್ಷ ರು.ಗಳಿಂದ ಆರಂಭವಾಗಿ 9.82 ಲಕ್ಷ ರು.ಗಳ ವರೆಗಿದೆ (ದೆಹಲಿ ಎಕ್ಸ್ ಶೋ ರೂಂ). ಹಾಗೆಯೇ ಡೀಸೆಲ್ ವೆರಿಯಂಟ್ 8.39 ಲಕ್ಷ ರು.ಗಳಿಂದ 9.87 ಲಕ್ಷ ರು.ಗಳ ವರೆಗಿದೆ (ದೆಹಲಿ ಎಕ್ಸ್ ಶೋ ರೂಂ).

ಚೆಕ್ ಗಣರಾಜ್ಯದ ಸಂಸ್ಥೆಯು ಇತ್ತೀಚೆಗಷ್ಟೇ ರಾಪಿಡ್ ಬ್ಲ್ಯಾಕ್ ಪ್ಯಾಕ್‌ನೊಂದಿಗೆ ಬಿಡುಗಡೆಗೊಳಿಸಿತ್ತು. ಇದು ಕಪ್ಪು ಹೆಡ್ ಲ್ಯಾಂಪ್, ಕಪ್ಪು ಗ್ರಿಲ್, ಕಪ್ಪು ಅಲಾಯ್ ವೀಲ್ ಮತ್ತು ಕಪ್ಪು ವರ್ಣದ ಒಆರ್‌ವಿಎಂ ಸೌಲಭ್ಯಗಳನ್ನು ಪಡೆದಿತ್ತು. ಈ ಪ್ಯಾಕೇಜ್ ಎಲೆಗನ್ಸ್ ವೆರಿಯಂಟ್‌ನಲ್ಲಿ ಮಾತ್ರ ಲಭ್ಯವಿದೆ.
1000 ರು.ಗಿಂತಲೂ ಮೇಲ್ಪಟ್ಟ ಕಾರು ಆಕ್ಸೆಸರಿ - ಉಚಿತ ಶಿಪ್ಪಿಂಗ್ - ಈಗಲೇ ಆರ್ಡರ್ ಮಾಡಿರಿ


Click it and Unblock the Notifications