2015 ಸ್ಕೋಡಾ ರಾಪಿಡ್ ಡಿಎಸ್‌ಜಿ ಆಟೋಮ್ಯಾಟಿಕ್ ವೆರಿಯಂಟ್

By Nagaraja

2015ರಲ್ಲಿ ಆಗಮನವಾಗಲಿರುವ ಸ್ಕೋಡಾ ರಾಪಿಡ್ ಹೆಚ್ಚು ಶಕ್ತಿಶಾಲಿ ಆಗಿರುವುದಷ್ಟೇ ಅಲ್ಲದೆ ಆರಾಮದಾಯಕ ಚಾಲನೆ ಪ್ರದಾನ ಮಾಡಲಿದೆ. ಹೌದು ನೂತನ ಸ್ಕೋಡಾ ರಾಪಿಡ್ ಡೀಸೆಲ್ ವರ್ಷನ್ ಡಿಎಸ್‌ಜಿ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಪಡೆದುಕೊಳ್ಳಲಿದೆ.

ಸ್ಕೋಡಾದ ಪೈಕಿ ರಾಪಿಡ್ ಅತಿ ಹೆಚ್ಚು ಮಾರಾಟವನ್ನು ಗಿಟ್ಟಿಸಿಕೊಂಡಿರುವ ಮಾದರಿಯಾಗಿದೆ. ಹಾಗಿದ್ದರೂ ಸೆಗ್ಮೆಂಟ್ ಲೀಟರ್ ಹೋಂಡಾ ಸಿಟಿ ಅಥವಾ ಫೋಕ್ಸ್‌ವ್ಯಾಗನ್ ವೆಂಟೊಗೆ ಹೋಲಿಸಿದರೆ ರಾಪಿಡ್ ತುಂಬಾನೇ ಹಿಂದೆ ಬಿದ್ದಿದೆ.

Skoda Rapid

ಈ ಎಲ್ಲ ಪರಿಸ್ಥಿತಿಗಳನ್ನು ನಿಕಟವಾಗಿ ಅವಲೋಕಿಸಿರುವ ಸ್ಕೋಡಾ, ಹೆಚ್ಚಿನ ಇಂಧನ ದಕ್ಷತೆಯ ರಾಪಿಡ್ ಬಿಡುಗಡೆ ಮಾಡಲು ಯೋಜನೆ ಹೊಂದಿದೆ. ಪ್ರಸ್ತುತ ರಾಪಿಡ್ ಆವೃತ್ತಿಯು 1.6 ಲೀಟರ್ 4 ಸಿಲಿಂಡರ್ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್‌ಗಳನ್ನು ಹೊಂದಿದೆ. ಇದು 105 ಅಶ್ವಶಕ್ತಿ ಉತ್ಪಾದಿಸುತ್ತಿವೆ.

ಬಲ್ಲ ಮೂಲಗಳ ಪ್ರಕಾರ ಹೊಸತಾದ ಡೀಸೆಲ್ ಎಂಜಿನ್ 1.5 ಲೀಟರ್ ಯುನಿಟ್ ಪಡೆಯಲಿದೆ. ಇನ್ನೊಂದೆಡೆ ಪೆಟ್ರೋಲ್ ಎಂಜಿನ್ 1.3 ಲೀಟರ್ ಡೈರಕ್ಟ್ ಇಂಜೆಕ್ಟಡ್ ಎಂಜಿನ್ ಪಡೆದುಕೊಳ್ಳಲಿದೆ. ಅಲ್ಲದೆ ಪೆಟ್ರೋಲ್ ಹಾಗೂ ಡೀಸೆಲ್ ಮಾದರಿಗಳಲ್ಲಿ ಡಿಎಸ್‌ಜಿ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಹೊಂದಿರಲಿದೆ. ಇದೀಗಲೇ ಫೋಕ್ಸ್‌ವ್ಯಾಗನ್ ವೆಂಟೊದಲ್ಲಿ ಲಭ್ಯವಿದೆ.

ಸಂಸ್ಥೆಯ ಪ್ರಕಾರ ಡಿಎಸ್‌ಜಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೆಚ್ಚು ಇಂಧನ ಕ್ಷಮತೆ ನೀಡಲು ನೆರವಾಗಲಿದೆ. ಈ ಮೂಲಕ ಉತ್ತಮ ಮಾರಾಟ ಗಿಟ್ಟಿಸಿಕೊಳ್ಳುವ ಇರಾದೆಯಲ್ಲಿದೆ.

More from DriveSpark

Article Published On: Thursday, May 15, 2014, 14:50 [IST]
English summary
The new Skoda Rapid for 2015 will be not only more fuel efficient, but will also be more convenient to drive, thanks to introduction of DSG automatic gearbox.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+