ಸ್ಕೋಡಾ ಬೇಸಿಗೆ ಚೆಕಪ್ ಶಿಬಿರ ಮಿಸ್ ಮಾಡದಿರಿ
ಸ್ಕೋಡಾ ಕಾರುಗಳನ್ನು ಹೊಂದಿರುವ ಮಾಲಿಕರಿಗೆ ಶುಭ ಸುದ್ದಿ ಬಂದಿದ್ದು, ಚೆಕ್ ಗಣರಾಜ್ಯ ಈ ವಾಹನ ತಯಾರಿಕ ಸಂಸ್ಥೆಯು ಭಾರತದಲ್ಲಿ ಬೇಸಿಗೆ ಕಾಲ ಚೆಕಪ್ ಶಿಬಿರವನ್ನು ಆರಂಭಿಸಿದೆ.
ಈಗಾಗಲೇ 2014 ಮೇ 2ರಂದು ಆರಂಭವಾಗಿರುವ ಚೆಕಪ್ ಕ್ಯಾಂಪ್ 31ರ ವರೆಗೆ ಮುಂದುವರಿಯಲಿದೆ. ಸ್ಕೋಡಾದ ವಾರ್ಷಿಕ ಸಮ್ಮರ್ ಚೆಕಪ್ ಕ್ಯಾಂಪ್‌ಗಳ ಭಾಗವಾಗಿ ಶಿಬಿರ ಹಮ್ಮಿಕೊಳ್ಳಲಾಗುತ್ತಿದೆ.

ಒಂದು ತಿಂಗಳ ಪರ್ಯಂತ ಮುಂದುವರಿಯ ಈ ಚೆಕಪ್ ಶಿಬಿರದಲ್ಲಿ ಮಾಲಿಕರು ತಮ್ಮ ಬಿಡುವಿಗೆ ಅನುಸಾರವಾಗಿ ಕಾರನ್ನು ಪರೀಕ್ಷೆ ಮಾಡಿಸಿಕೊಳ್ಳಬಹುದಾಗಿದೆ. ಇದರಲ್ಲಿ ಎಸಿ, ಎಂಜಿನ್, ಸ್ಟೀರಿಂಗ್, ಕ್ಲಚ್, ಎಲೆಕ್ಟ್ರಿಕ್ ಸಿಸ್ಟಂ, ಟೈರ್, ವೀಲ್ ರಿಮ್ ಸೇರಿದಂತೆ 16 ಪಾಯಿಂಟ್‌ಗಳ ಚೆಕಪ್ ನಡೆಯಲಿದೆ.
ಈ ಎಲ್ಲದರ ಮೂಲಕ ಮಾಲಿಕರ ನಡುವಣ ನಂಬಿಕೆಯನ್ನು ವೃದ್ಧಿಸಿಕೊಳ್ಳುವುದು ಸಂಸ್ಥೆಯ ಗುರಿಯಾಗಿದೆ. ಕೇವಲ ಬೇಸಿಗೆ ಕಾಲಘಟ್ಟದಲ್ಲಿ ಮಾತ್ರವಲ್ಲ. ಸ್ಕೋಡಾ ಸಂಸ್ಥೆಯು ಮಾನ್ಸೂನ್ ಕಾರ್ ಕೇರ್, ಮಾಲಿನ್ಯ ಚೆಕಪ್ ಕ್ಯಾಂಪ್‌ಗಳಂತಹ ಶಿಬಿರಗಳನ್ನು ಹಮ್ಮಿಕೊಳ್ಳುತ್ತಿವೆ.


Click it and Unblock the Notifications