2016ರಲ್ಲಿ ಬರುತ್ತಂತೆ ನೂತನ ಸ್ಕೋಡಾ ಸೂಪರ್ಬ್
ಇತ್ತೀಚೆಗಷ್ಟೇ ಸ್ಕೋಡಾ ಸಂಸ್ಥೆಯು ನೂತನ ಸೂಪರ್ಬ್ ಫೇಸ್‌ಲಿಫ್ಟ್ ವರ್ಷನ್ ಅನಾವರಣಗೊಳಿಸಿತ್ತು. ಇದು ಈ ವಾಹನ ತಯಾರಕ ಸಂಸ್ಥೆಗೆ ಹೊಸ ಹುರುಪಿಗೆ ಕಾರಣವಾಗಿತ್ತು.
ಇದೀಗ ಲಭ್ಯವಾಗಿರುವ ಮಾಹಿತಿಗಳ ಪ್ರಕಾರ ನೂತನ ಸ್ಕೋಡಾ ಸೂಪರ್ಬ್ 2016ನೇ ಸಾಲಿನಲ್ಲಿ ಲಾಂಚ್ ಆಗಲಿದೆ. ಇತ್ತೀಚೆಗಷ್ಟೇ ನಡೆದ 2014 ಜಿನೆವಾ ಮೋಟಾರು ಶೋದಲ್ಲಿ ಪ್ರದರ್ಶನಗೊಂಡಿದ್ದ ವಿಷನ್ ಸಿ ಕಾನ್ಸೆಪ್ಟ್ ತಲಹದಿಯಲ್ಲಿ ಇದು ನಿರ್ಮಾಣವಾಗಲಿದೆ.

ಸ್ಕೋಡಾ ವಿಷನ್ ಸಿ ಕಾನ್ಸೆಪ್ಟ್ ನಾಲ್ಕು ಬಾಗಿಲುಗಳ ಕೂಪೆ ಕಾರಾಗಿದ್ದು, ಒಕ್ಟಾವಿಯಾ (ಎಂಕ್ಯೂಬಿ) ತಲಹದಿಯಲ್ಲಿ ನಿರ್ಮಾಣವಾಗಿದೆ. ಇದರಲ್ಲಿ ವಿಷನ್ ಸಿ ಕಾನ್ಸೆಪ್ಟ್ ಪ್ರಮುಖ ಆಕರ್ಷಣೆಯಾಗಿರಲಿದೆ. ನೂತನ ಸೂಪರ್ ಐಷಾರಾಮಿ ಇಂಟಿರಿಯರ್‌ಗಳನ್ನು ಪಡೆದುಕೊಳ್ಳಲಿದೆ. ಜತೆಗೆ ಉನ್ನತ ಗುಣಮಟ್ಟದ ಪರಿಕರಗಳನ್ನು ಬಳಕೆ ಮಾಡಲಾಗಿದೆ.
ಅಂದ ಹಾಗೆ 2016 ಸ್ಕೋಡಾ ಸೂಪರ್ಬ್ 2.0 ಲೀಟರ್ ಡೀಸೆಲ್ ಎಂಜಿನ್ ಪಡೆದುಕೊಳ್ಳುವ ಸಾಧ್ಯತೆಯಿದೆ. ಇದು ಸಿಕ್ಸ್ ಸ್ಪೀಡ್ ಮ್ಯಾನುವಲ್ ಮತ್ತು ಡಿಎಸ್‌ಜಿ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಪಡೆದುಕೊಳ್ಳುವ ನಿರೀಕ್ಷೆಯಿದೆ.



Click it and Unblock the Notifications








