ಕ್ಯಾಲೆಂಡರ್ ವರ್ಷದಲ್ಲಿ ಸ್ಕೋಡಾ 10 ಲಕ್ಷ ಸೇಲ್ಸ್ ಗುರಿ

By Nagaraja

ಜೆಕ್ ಗಣರಾಜ್ಯದ ಐಕಾನಿಕ್ ವಾಹನ ತಯಾರಿಕ ಸಂಸ್ಥೆಯಾಗಿರುವ ಸ್ಕೋಡಾ, ಕ್ಯಾಲೆಂಡರ್ ವರ್ಷವೊಂದರಲ್ಲಿ ಒಂದು ಮಿಲಿಯನ್ ವಾಹನಗಳ ಮಾರಾಟವನ್ನು ಗುರಿಯಿರಿಸಿಕೊಂಡಿದೆ.

ಸ್ಕೋಡಾಗೆ ಈ ಐತಿಹಾಸಿಕ ಮೈಲುಗಲ್ಲನ್ನು ತಲುಪಲು ಇನ್ನು ಸ್ವಲ್ಪ ದೂರವಷ್ಟೇ ಸಾಗಬೇಕಾಗಿದೆ. ಸಂಸ್ಥೆಯು ಈಗಾಗಲೇ 2014ನೇ ಸಾಲಿನ ಜನವರಿಯಿಂದ ನವೆಂಬರ್ ವರೆಗಿನ ಮೊದಲ 11 ತಿಂಗಳಲ್ಲಿ 9,55,300 ಯುನಿಟ್‌ಗಳ ಮಾರಾಟ ಕಂಡುಕೊಂಡಿದೆ.

ನವೆಂಬರ್ ತಿಂಗಳಲ್ಲಿ ಮಾತ್ರವಾಗಿ ಜಾಗತಿಕವಾಗಿ 90,200 ಯುನಿಟ್‌ಗಳ ಮಾರಾಟ ಕಂಡುಕೊಂಡಿರುವ ಸ್ಕೋಡಾ ಸಂಸ್ಥೆಗೆ ಈ ದಾಖಲೆ ತುಲುಪುವುದು ಕಷ್ಟದ ವಿಚಾರವಲ್ಲ. ಈಗ ಎಲ್ಲರೂ ಸ್ಕೋಡಾ ಸಂಸ್ಥೆಯಿಂದ ಇಂತಹದೊಂದು ಘೋಷಣೆ ಹೊರ ಬೀಳುವುದನ್ನು ನಿರೀಕ್ಷಿಸುತ್ತಿದ್ದಾರೆ.

skoda

ಕಳೆದ ವರ್ಷ ಅಂದರೆ 2013ನೇ ಸಾಲಿನಲ್ಲಿ ಒಟ್ಟು 9,20,800 ಯುನಿಟ್‌ಗಳ ಮಾರಾಟ ಕಂಡುಕೊಂಡಿದ್ದ ಸ್ಕೋಡಾ ಸಂಸ್ಥೆಯು ಒಂದು ಮಿಲಿಯನ್ ಯುನಿಟ್‌ಗಳ ಮಾರಾಟ ದಾಖಲೆಯನ್ನು ಸ್ವಲ್ಪದರಲ್ಲೇ ಕಳೆದುಕೂಂಡಿತ್ತು.

ಜಾಗತಿಕ ಮಾರುಕಟ್ಟೆಗೆ ಪರಿಗಣಿಸಿದಾಗ ಭಾರತದಲ್ಲಿ ಸ್ಕೋಡಾ ಕಾರುಗಳು ಅಷ್ಟೊಂದು ಜನಪ್ರಿಯವಾಗಿಲ್ಲ. ಇದನ್ನು ಮಧ್ಯಮ ವರ್ಗಕ್ಕಿಂತ ಮೇಲ್ಪಟ್ಟ ಶ್ರೀಮಂತ ಮಾಲಿಕರು ಖರೀದಿಸಲು ಇಷ್ಟಪಡುತ್ತಾರೆ. ಮಾರಾಟ ನಂತರದ ನಿರ್ವಹಣಾ ವೆಚ್ಚ ಕೂಡಾ ಹೆಚ್ಚಿರುವುದು ದೇಶದಲ್ಲಿ ಸ್ಕೋಡಾ ಕಾರುಗಳ ಹಿನ್ನೆಡೆಗೆ ಕಾರಣವಾಗಿದೆ.

ಇನ್ನೊಂದೆಡೆ ಚೀನಾದಲ್ಲಿ ಸ್ಕೋಡಾ ಕಾರುಗಳಿಗೆ ಅತಿ ಹೆಚ್ಚಿನ ಬೇಡಿಕೆಯಿದೆ. ಭಾರತದಲ್ಲಿ ಫ್ಯಾಬಿಯಾ ಹ್ಯಾಚ್‌ಬ್ಯಾಕ್, ಯೆಟಿ ಎಸ್‌ಯುವಿ, ರಾಪಿಡ್, ಒಕ್ಟಾವಿಯಾ ಹಾಗೂ ಸೂಪರ್ ಸೆಡಾನ್ ಕಾರುಗಳು ಮಾರಾಟದಲ್ಲಿದೆ.

Article Published On: Wednesday, December 10, 2014, 15:20 [IST]
English summary
Skoda Looking To Achieve One Million Sales Globally In 2014
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+