ದಕ್ಷಿಣ ಆಫ್ರಿಕಾದತ್ತ ಪಯಣ ಬೆಳೆಸಿದ ಎರ್ಟಿಗಾ

By Nagaraja

ಕೆಲವು ಸಮಯಗಳ ಹಿಂದೆಯೇ ದೇಶದ ಮಾರುಕಟ್ಟೆಗೆ ಪರಿಚಯವಾಗಿದ್ದ ಮಾರುತಿ ಎರ್ಟಿಗಾ ಉತ್ತಮ ಬೇಡಿಕೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಗುಣಮಟ್ಟ ಹಾಗೂ ನಿರ್ವಹಣೆಯ ವಿಚಾರದಲ್ಲಿ ಎರ್ಟಿಗಾ ಗ್ರಾಹಕರ ಮನ ಗೆಲ್ಲುವಲ್ಲಿ ಯಶ ಕಂಡಿತ್ತು.

ಬಹು ಬಳಕೆಯ ವಾಹನ ವಿಭಾಗ ಬೆಳೆಯುತ್ತಿರುವುದನ್ನು ಗುರುತಿಸಿಕೊಂಡಿರುವ ಇತರ ವಾಹನ ತಯಾರಕ ಸಂಸ್ಥೆಗಳು ಎಂಪಿವಿ ವಿಭಾಗದಲ್ಲಿ ತನ್ನ ಮಾದರಿಗಳನ್ನು ಪರಿಚಯಿಸುವ ಯೋಜನೆ ಹೊಂದಿದೆ. ಇವುಗಳಲ್ಲಿ ದಟ್ಸನ್ ಗೊ ಪ್ಲಸ್ ಹಾಗೂ ಹೋಂಡಾ ಮೊಬಿಲಿಯೊ ಪ್ರಮುಖವಾಗಿದೆ.

Suzuki Ertiga

ಈ ಎಲ್ಲ ವಿಚಾರಗಳನ್ನು ಮನಗಂಡಿರುವ ಎರ್ಟಿಗಾ ನಿಧಾನವಾಗಿ ವಿದೇಶದತ್ತ ತನ್ನ ನಿಗಾ ಹರಿಸಿದೆ. ಇದರಂತೆ ದಕ್ಷಿಣ ಆಫ್ರಿಕಾದಲ್ಲಿ ಎರ್ಟಿಗಾ ಬಿಡುಗಡೆ ಮಾಡಿದೆ. ಇದು ಬಾರತದ ಘಟಕದಿಂದಲೇ ರಫ್ತಾಗಲಿದೆ. ಅಂದರೆ ಕಂಪ್ಲೀಟ್ ಬಿಲ್ಟ್ ಯುನಿಟ್ ಮುಖಾಂತರ ದಕ್ಷಿಣ ಆಫ್ರಿಕಾದಲ್ಲಿ ಎರ್ಟಿಗಾ ಮಾರಾಟವಾಗಲಿದೆ. ಅಂದರೆ ಅಲ್ಲಿ ರು. 8.81 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.

ದಕ್ಷಿಣ ಆಫ್ರಿಕಾ ಎರ್ಟಿಗಾ ವೆರಿಯಂಟ್ 1.4 ಲೀಟರ್ ಕೆ ಸಿರೀಸ್ ಪೆಟ್ರೋಲ್ ಎಂಜಿನ್ ಪಡೆದುಕೊಳ್ಳಲಿದೆ. ಇದು 93 ಅಶ್ವಶಕ್ತಿ ಉತ್ಪಾದಿಸಲಿದೆ. ಸಂಸ್ಥೆಯ ಪ್ರಕಾರ ಪ್ರಸ್ತುತ ಎಂಜಿನ್ ಪ್ರತಿ ಲೀಟರ್‌ಗೆ 15.5 ಕೀ.ಮೀ. ಮೈಲೇಜ್ ನೀಡಲಿದೆ.

ಅದೇ ರೀತಿ ಅನೇಕ ಸುರಕ್ಷಾ ವೈಶಿಷ್ಟ್ಯಗಳನ್ನು ಆಫರು ಮಾಡುತ್ತಿದೆ. ಇದರಲ್ಲಿ ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್, ಆ್ಯಂಟಿ ಲಾಕ್ ಬ್ರೇಕ್ ಸಿಸ್ಟಂ ಮತ್ತು ಮುಂದುಗಡೆ ಎರಡು ಏರ್ ಬ್ಯಾಗ್ ಇರಲಿದೆ. ಹಾಗೆಯೇ ಬಹು ಕ್ರಿಯಾತ್ಮಕ ಸ್ಟೀರಿಂಗ್ ವೀಲ್, ಪವರ್ ವಿಂಡೋ, ಸೆಂಟ್ರಲ್ ಲಾಂಕಿಂಗ್, ಫಾಗ್ ಲ್ಯಾಂಪ್, ಮಾಹಿತಿ ಮನರಂಜನಾ ಸಿಸ್ಟಂ, ಯುಎಸ್‌ಬಿ ಮತ್ತು ಅಲಾಯ್ ವೀಲ್ ಕೂಡಾ ಸೌಲಭ್ಯವಿರಲಿದೆ.

More from DriveSpark

Article Published On: Friday, June 13, 2014, 11:55 [IST]
English summary
Suzuki has recently launched the Ertiga in South Africa and will be exported by India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+