ಸಣ್ಣ ಬದಲಾವಣೆಯೊಂದಿಗೆ ಸುಜುಕಿ ಸ್ವಿಫ್ಟ್‌ ಎಂಟ್ರಿ

Written By:

ಭಾರತದಲ್ಲಿ ಸ್ವಿಫ್ಟ್ ಮಾದರಿಯು ಅತಿ ಹೆಚ್ಚಿನ ಯಶಸ್ಸನ್ನು ಸಾಧಿಸಿದೆ. ಉತ್ತಮ ನಿರ್ವಹಣೆ ಹಾಗೂ ಇಂಧನ ಕ್ಷಮತೆಯು ಸ್ವಿಫ್ಟ್ ಮಾದರಿಯನ್ನು ದೇಶದ ಸರ್ವಶ್ರೇಷ್ಠ ಕಾರುಗಳ ಸ್ಥಾನಗಳಲ್ಲಿ ಗುರುತಿಸುವಲ್ಲಿ ನೆರವಾಗಿತ್ತು.

ಇದೀಗ ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಸುಜುಕಿ, ಪ್ರಖ್ಯಾತ ಸ್ವಿಫ್ಟ್‌ಗೆ ಕೆಲವೊಂದು ಮಾರ್ಪಾಡುಗಳನ್ನು ತಂದಿದೆ. ನೂತನ ಸ್ವಿಫ್ಟ್ ಮಾದರಿಯು ಎಲ್‌ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್ ಜತೆ ಫಾಗ್ ಲ್ಯಾಂಪ್‌ಗಳಂತಹ ಸೌಲಭ್ಯಗಳನ್ನು ಪಡೆಯಲಿದೆ.

To Follow DriveSpark On Facebook, Click The Like Button

ಆಧುನಿಕ ಮಾರುಕಟ್ಟೆಯಲ್ಲಿ ಎಲ್‌ಇಡಿ ಡಿಆರ್‌ಎಲ್ ಸೌಲಭ್ಯ ಹೊಂದಿರುವ ಕಾರುಗಳು ತೀರಾ ಸಾಮಾನ್ಯವಾಗುತ್ತಿದೆ. ಇದನ್ನು ಅರಿತುಕೊಂಡಿರುವ ಸಂಸ್ಥೆಯು ಇಂತಹ ಸೌಲಭ್ಯವನ್ನು ತನ್ನ ಜನಪ್ರಿಯ ಸ್ವಿಫ್ಟ್‌ಗೆ ಆಳವಡಿಸಲು ನಿರ್ಧರಿಸಿದೆ.

ಇದೇ ವೇಳೆ ಗೇರ್ ಶಿಫ್ಟ್ ಇಂಡಿಕೇಟರ್ ಹಾಗೂ ಟೈರ್ ಪ್ರೆಶರ್ ಮಾನಿಟರಿಂಗ್ ವ್ಯವಸ್ಥೆಯನ್ನು ಸುಜುಕಿ ಒದಗಿಸಲಿದೆ. ಈ ಎಲ್ಲ ಅಪ್‌ಗ್ರೇಡ್ ಸೌಲಭ್ಯಗಳನ್ನು ಹೊಂದಿರುವ ಸ್ವಿಫ್ಟ್ ಮಾದರಿಗಳು ಈಗಾಗಲೇ ಬ್ರಿಟನ್‌ಗಳಂತಹ ಮುಂದುವರಿದ ದೇಶಗಳಲ್ಲಿ ಮಾರಾಟದಲ್ಲಿದೆ.

suzuki swift

ಆದರೆ ಇಂತಹ ವೈಶಿಷ್ಟ್ಯ ಪಡೆಯಲು ಬೆಲೆ ಸ್ವಲ್ಪ ದುಬಾರಿಯಾಗಿರುವುದರಿಂದ ಭಾರತದಲ್ಲಿ ಸದ್ಯಕ್ಕೆ ಲಭ್ಯವಾಗುವುದು ಅನುಮಾನವಾಗಿದೆ. ಬ್ರಿಟನ್ ಮಾದರಿಯಲ್ಲಿ ಡಿಎಬಿ ಡಿಜಿಟಲ್ ರೆಡಿಯೋ ಹಾಗೂ ನೇವಿಗೇಷನ್ ಸಹ ಸುಜುಕಿ ಪ್ರದಾನ ಮಾಡುತ್ತಿದೆ.

ಯುಕೆ ಸ್ವಿಫ್ಟ್ ಮಾದರಿಯಲ್ಲಿ ಆಟೋ ಹೆಡ್‌ಲೈಟ್, ಕ್ರೂಸ್ ಕಂಟ್ರೋಲ್, ಪವರ್ ಫೋಲ್ಡಿಂಗ್ ಮಿರರ್ ಜತೆ ಇಂಟೆಗ್ರೇಟಡ್ ಟರ್ನ್ ಲೈಟ್, ಬಟನ್ ಎಂಜಿನ್ ಸ್ಟಾಪ್/ಸ್ಟಾಫ್, ಕೀಲೆಸ್ ಎಂಟ್ರಿ, ಎಲೆಕ್ಟ್ರಿಕ್ ವಿಂಡೋ, ರಿಯರ್ ಪ್ರೈವಸಿ ಗ್ಲಾಸ್ ಹಾಗೂ ಆಟೋಮ್ಯಾಟಿಕ್ ಎಸಿ ಸೌಲಭ್ಯವಿದೆ.

ಅಲ್ಲದೆ ಯುಕೆ ಮಾದರಿ ಸ್ವಿಫ್ಟ್ ಯುರೋ 5 ಸ್ಟಾಂಡರ್ಡ್ ದರ್ಜೆಯನ್ನು ಹೊಂದಿದೆ. ಇನ್ನೊಂದೆಡೆ ಭಾರತದಲ್ಲಿ ಯುರೋ 4 ದರ್ಜೆಯಾಗಿದೆ. ಹಾಗೆಯೇ ಫೋರ್ ವೀಲ್ ಡ್ರೈವ್ ವ್ಯವಸ್ಥೆಯನ್ನು ಬ್ರಿಟನ್‌ನಲ್ಲಿ ಒದಗಿಸುತ್ತಿದೆ.

English summary
Maruti Suzuki has been selling the India for while now, and when it was launched it was the ideal car for the Indian market.
Story first published: Wednesday, June 11, 2014, 16:50 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark