ಎಸ್‌ಯುವಿಗೆ ಪವರ್‌ಫುಲ್ ಎಂಜಿನ್ ಜೋಡಣೆಗೆ ಸುಜುಕಿ ಯೋಜನೆ

By Nagaraja

ಮುಖ್ಯವಾಗಿಯೂ ದೇಶದಲ್ಲಿ ಕ್ರೀಡಾ ಉತ್ಪಾದಕ ವಾಹನಗಳ (ಎಸ್‌‍ಯುವಿ) ಬೇಡಿಕೆಯನ್ನು ಗಮನಿಸಿರುವ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್, ಹೆಚ್ಚು ಇಂಧನ ಸಾಮರ್ಥ್ಯವುಳ್ಳ ಎಂಜಿನ್ ಅಭಿವೃದ್ಧಿಪಡಿಸುವತ್ತ ಇರಾದೆ ಹೊಂದಿದೆ.

ಸ್ವಿಫ್ಟ್ ತಲಹದಿಯಲ್ಲಿ ನೂತನ ಎಸ್‌ಯುವಿ ಅಭಿವೃದ್ಧಿಗೊಳ್ಳಲಿದೆ. ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾಗಿರುವ ಸುಜುಕಿ ಪ್ರಸ್ತುತ ಫಿಯೆಟ್‌ನ 1.3ಲೀಟರ್ ಡೀಸೆಲ್ ಎಂಜಿನ್ ಬಳಕೆ ಮಾಡುತ್ತಿದೆ. ಮಾರುತಿ ತನ್ನೆಲ್ಲ ಡೀಸೆಲ್ ಕಾರುಗಳಿಗೆ ಇದನ್ನೇ ಬಳಕೆ ಮಾಡುತ್ತದೆ. ಈ ಪಟ್ಟಿ ಸ್ವಿಫ್ಟ್, ರಿಟ್ಜ್, ಡಿಜೈರ್, ಎಸ್‌ಎಕ್ಸ್4 ಹೀಗೆ ಬೆಳೆಯುತ್ತಾ ಸಾಗುತ್ತದೆ.

maruti ritz

ಸದ್ಯ ಮಾರುಕಟ್ಟೆಯಲ್ಲಿ ರೆನೊ ಡಸ್ಟರ್, ಫೋರ್ಡ್ ಇಕೊಸ್ಪೋರ್ಟ್ ಹೆಚ್ಚು ಸದ್ದು ಮಾಡುತ್ತಿದೆ. ಹೋಂಡಾದಿಂದ ಆಗಮನವಾಗಲಿರುವ ನೂತನ ಎಸ್‌ಯುವಿ ಇನ್ನಷ್ಟು ಕುತೂಹಲಯನ್ನು ಸೃಷ್ಟಿಸಿದೆ. ಹಾಗಿರುವಂತೆಯೇ ಸುಜುಕಿಯಿಂದ ಹೆಚ್ಚು ಪವರ್‌ಫುಲ್ ಎಸ್‌ಯುವಿ ಆಗಮನವಾಗಲಿದೆ.

2012 ದೆಹಲಿ ಆಟೋ ಎಕ್ಸ್‌ಪೋದಲ್ಲಿ ಎಕ್ಸ್‌ಎ ಅಲ್ಫಾ ಕಾನ್ಸೆಪ್ಟನ್ನು ಮಾರುತಿ ಸುಜುಕಿ ಪ್ರದರ್ಶಿಸಿತ್ತು. ಪ್ರಸ್ತುತ ಕಾರು 2015ರಲ್ಲಿ ದೇಶದ ಮಾರುಕಟ್ಟೆ ಪ್ರವೇಶಿಸುವ ನಿರೀಕ್ಷಿಯಿದೆ. ಜಾಗತಿಕ ಮಾರುಕಟ್ಟೆ ಸಹ ಗುರಿಯಿರಿಸಿಕೊಂಡು ನೂತನ ಕಾರು ನಿರ್ಮಾಣವಾಗಲಿದೆ.

Article Published On: Wednesday, January 1, 2014, 12:39 [IST]
English summary
Maruti Suzuki India Ltd. has plans to develop a new 1.5L diesel engine. The engine will be developed in-house and used in the compact SUV on Swift's platform.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+