2017ರಲ್ಲಿ ಸುಜುಕಿ ಗುಜರಾತ್ ಘಟಕದಲ್ಲಿ ನಿರ್ಮಾಣ ಆರಂಭ

By Nagaraja

ಸುಜುಕಿ ಮೋಟಾರು ಕಾರ್ಪ್ (ಎಸ್‌ಎಂಸಿ) ಹೂಡಿಕೆಯಡಿಯಲ್ಲಿ ಗುಜರಾತ್‌ನಲ್ಲಿ ನಿರ್ಮಾಣವಾಗಲಿರುವ ಮಾರುತಿ ಸುಜುಕಿ ಎಕ್ಸ್‌ಕ್ಲೂಸಿವ್ ಘಟಕದಲ್ಲಿ ಉತ್ಪಾದನೆ ಪ್ರಕ್ರಿಯೆ 2017ನೇ ಇಸವಿಯಿಂದ ಆರಂಭವಾಗಲಿದೆ.

ಈ ಸಂಬಂಧ ಬುಧವಾರ ಅಹಮಾದಾಬಾದ್‌ನಲ್ಲಿ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (ಎಂಎಸ್‌ಐಎಲ್) ಮುಖ್ಯಸ್ಥ ಆರ್‌ಸಿ ಭಾರ್ಗವ ಹೇಳಿಕೆ ನೀಡಿದ್ದಾರೆ. ಅಲ್ಲದೆ ಹೂಡಿಕೆದಾರರರನ್ನು ಸೆಳೆಯುವ ನಿಟ್ಟಿನಲ್ಲಿ ಇದೇ ತಿಂಗಳಲ್ಲಿ ರೋಡ್ ಶೋ ಹಮ್ಮಿಕೊಂಡಿರುವುದಾಗಿ ತಿಳಿಸಿದ್ದಾರೆ.

maruti suzuki

ಪ್ರಸಕ್ತ ವರ್ಷಾರಂಭದಲ್ಲಿ ತನ್ನದೇ ಆದ ಘಟಕ ತೆರೆಯುವುದಾಗಿ ಸುಜುಕಿ ಮೋಟಾರು ಸಂಸ್ಥೆ ಘೋಷಿಸಿತ್ತು. ಆದರೆ ಈ ನಿರ್ದಿಷ್ಟ ಘಟಕದಲ್ಲಿ ಕಾರುಗಳನ್ನು ಉತ್ಪಾದಿಸಿ ಅದನ್ನು ಮಾರುತಿಗೆ ಮಾರಾಟ ಮಾಡುವ ಸುಜುಕಿ ಯೋಜನೆ ಹೂಡಿಕೆದಾರರಲ್ಲಿ ಅಸಂತೋಷಕ್ಕೆ ಕಾರಣವಾಗಿತ್ತಲ್ಲದೆ ಈ ಸಂಬಂಧ ವಿವಾದ ಇತ್ಯರ್ಥ್ಯಕ್ಕೆ ಸೆಬಿ ಸಂಪರ್ಕಿಸಿದ್ದರು.

ಈ ತಿಂಗಳು ಆರಂಭಿಸಲಿರುವ ರೋಡ್ ಶೋ ಆಗಸ್ಟ್ ಮಧ್ಯಂತರ ಅವಧಿಯ ವರೆಗೂ ಮುಂದುವರಿಯಲಿದೆ. ಈ ಮೂಲದ ಸ್ಥಳೀಯ ಹಾಗೂ ಜಾಗತಿಕ ಹೂಡಿಕೆದಾರರನ್ನು ಮನವೊಳಿಸುವ ಮಾಡುವ ಪ್ರಯತ್ನ ಮಾಡಲಾಗುವುದು.

ಹಾಗೊಂದು ವೇಳೆ ಎಲ್ಲವೂ ಅಂದುಕೊಂಡಂತೆ ನಡೆದ್ದಲ್ಲಿ 488 ಮಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆಯ ಜಪಾನ್ ವಾಹನ ತಯಾರಕ ಸಂಸ್ಥೆಯ ಮೊತ್ತ ಮೊದಲ ಘಟಕ ದೇಶದಲ್ಲಿ ತಲೆಯೆತ್ತಲಿದೆ. ಪ್ರಾರಂಭದಲ್ಲಿ ಈ ಘಟಕದಲ್ಲಿ ವಾರ್ಷಿಕವಾಗಿ ಒಂದು ಲಕ್ಷ ಯುನಿಟ್‌ಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ.

Article Published On: Friday, June 6, 2014, 14:16 [IST]
English summary
The upcoming manufacturing facility in Gujarat that will be build using Investment from Suzuki Motor Corp (SMC) will begin producing cars exclusively for Maruti Suzuki from 2017.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+