ಟಾಟಾ ಬ್ರಾಂಡ್ ಮರು ಸ್ಥಾಪಿಸಲಿರುವ ಬೋಲ್ಟ್, ಜೆಸ್ಟ್

By Nagaraja

ಬಹಳ ಹಿಂದಿನಿಂದಲೇ ಟಾಟಾ ಕಾರುಗಳ ಗುಣಮಟ್ಟತೆ ಬಗ್ಗೆ ವಿಮರ್ಶಕರು ತಗಾದೆ ಎತ್ತುತ್ತಲೇ ಇದ್ದಾರೆ. ಆದರೆ ನೂತನ ಬೋಲ್ಟ್ ಹಾಗೂ ಜೆಸ್ಟ್ ಆವೃತ್ತಿಗಳು ಈ ಎಲ್ಲ ಕೊರತೆಯನ್ನು ನೀಗಿಸಲಿದೆ. ಇದು ಕೇವಲ ದೇಶಿಯ ಮಾರುಕಟ್ಟೆಗಷ್ಟೇ ಸೀಮಿತವಲ್ಲ; ಬದಲಾಗಿ ಬೆಳೆಯುತ್ತಿರುವ ರಾಷ್ಟ್ರಗಳತ್ತವೂ ಟಾಟಾ ಸಂಪೂರ್ಣ ದೃಷ್ಟಿ ನೆಟ್ಟಿದೆ.

ಯುರೋಪ್ ಹಾಗೂ ಭಾರತ ತಂಡಗಳು ಜಂಟಿಯಾಗಿ ನೂತನ ಬೋಲ್ಟ್ ಹಾಗೂ ಜೆಸ್ಟ್ ತಂಡಗಳು ಅಭಿವೃದ್ಧಿಪಡಿಸಿರುವುದು ಟಾಟಾದ ಜಾಗತಿಕ ಯೋಜನೆಯ ಮುಖಪುಟವನ್ನು ತೆರೆದಂತಿದೆ. ಅಷ್ಟೇ ಅಲ್ಲದೆ ಈ ಬಹುನಿರೀಕ್ಷಿತ ಕಾರಿನ ವಿನ್ಯಾಸ ಹಾಗೂ ಅಭಿವೃದ್ಧಿಯ ಜವಾಬ್ದಾರಿಯನ್ನು ಸಂಪೂರ್ಣವಾಗಿ ಲಂಡನ್‌ನಲ್ಲಿರುವ ಯುರೋಪ್ ತಾಂತ್ರಿಕ ಕೇಂದ್ರ ವಹಿಸಿರುವುದು ಗಮನಾರ್ಹವೆನಿಸಿದೆ.

Tata Bolt and Zest

ಈ ಕಾಂಪಾಕ್ಟ್ ಸೆಡಾನ್ ಹಾಗೂ ಹ್ಯಾಚ್‌ಬ್ಯಾಕ್ ಕಾರುಗಳು, ಭಾರತ ಸೇರಿದಂತೆ ಇಂಡೋನೇಷ್ಯಾ ಹಾಗೂ ದಕ್ಷಿಣ ಆಫ್ರಿಕಾದ ಮಾರುಕಟ್ಟೆಗಳಲ್ಲೂ ಬಿಡುಗಡೆಯಾಗಲಿದೆ. ಕೇವಲ ಜೆಸ್ಟ್ ಹಾಗೂ ಬೋಲ್ಟ್‌ಗಳಿಂದ ಮಾತ್ರ ಟಾಟಾ ಜಾಗತಿಕವಾಗಿ ಗುರುತಿಸಿಕೊಳ್ಳಲು ಸಾಧ್ಯವಿಲ್ಲ. ಇದನ್ನು ಸ್ಪಷ್ಟವಾಗಿ ಅರಿತಿರುವ ಸಂಸ್ಥೆಯು 2020ರ ವೇಳೆಯಾಗುವಾಗ ಹೊಸ ಹೊಸ ಮಾದರಿಗಳನ್ನು ಪರಿಚಯಿಸುವ ಯೋಜನೆ ಹೊಂದಿದೆ. ಈ ನಿಟ್ಟಿನಲ್ಲಿ ಸಂಸ್ಥೆಯ ಯುರೋಪಿಯನ್ ಆರ್ ಆಂಡ್ ಡಿ ಸೆಂಟರ್ ಪ್ರಮುಖ ಪಾತ್ರ ನಿಭಾಯಿಸಲಿದೆ.

ಸಹಜವಾಗಿಯೇ ಟಾಟಾ ಬ್ರಾಂಡ್ ಮರು ಸ್ಥಾಪಿಸುವುದರಲ್ಲಿ ಬೋಲ್ಟ್ ಹಾಗೂ ಜೆಸ್ಟ್ ನೆರವಾಗಲಿದೆ. ಪ್ರಮುಖವಾಗಿಯೂ ಇದು ತನ್ನ 'ಟ್ಯಾಕ್ಸಿ' ಕಾರೆಂಬ ಅಪಕೀರ್ತಿಯಿಂದ ಹೊರಬರಬೇಕಾಗಿದೆ. ಇಲ್ಲಿ ಅಗ್ಗದ ನ್ಯಾನೋದ ಬದಲಾಗಿ ಸಣ್ಣ ಸಿಟಿ ಕಾರೆಂದು ನ್ಯಾನೋವನ್ನು ಸಂಸ್ಥೆ ಬಿಂಬಿಸಿರುವುದು ನೆನಪಿಸಿಕೊಳ್ಳಬಹುದು.

ಈ ನಿಟ್ಟಿನಲ್ಲಿ ಇತ್ತೀಚೆಗಷ್ಟೇ ಬಿಡುಗಡೆಯಾದ ನ್ಯಾನೋ ಟ್ವಿಸ್ಟ್ ಪವರ್ ಸ್ಟೀರಿಂಗ್ ಇನ್ನಷ್ಟು ಮೆರುಗು ತುಂಬಿತ್ತು. ಇಂಡಿಯಾ ವಿಚಾರದಲ್ಲಿ ಬೋಲ್ಟ್ ಇದಕ್ಕೆ ಸಮಾನವಾದ ಬ್ರಾಂಡಿಂಗ್ ಪಾತ್ರವನ್ನು ನಿರ್ವಹಿಸಲಿದೆ. ಅಂತೆಯೇ ಮುಂಬರುವ ವರ್ಷಗಳಲ್ಲಿ ಎಸ್‌ಯುವಿ, ಕಾಂಪಾಕ್ಟ್ ಎಸ್‌ಯುವಿ ಹಾಗೂ ಪ್ರೀಮೀಯಂ ಎಸ್‌ಯುವಿ ಮಾದರಿಗಳನ್ನು ಲಾಂಚ್ ಮಾಡುವ ಇರಾದೆಯನ್ನು ಟಾಟಾ ಹೊಂದಿದೆ.

More from DriveSpark

Article Published On: Saturday, May 17, 2014, 10:48 [IST]
English summary
Tata Motors is no longer content being a local player and has chalked out a clear cut strategy to go international. This growth strategy will start with the launch of the Bolt and Zest that will take place in a few weeks time
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+