ನ್ಯಾನೋ ಘಟಕದಲ್ಲಿ ಜಾಗ್ವಾರ್ ನಿರ್ಮಿಸಲಿರುವ ಟಾಟಾ?
ನ್ಯಾನೋ ಹಾಗೂ ಜಾಗ್ವಾರ್‌ಗೆ ಅಜಗಜಾಂತರ ವ್ಯತ್ಯಾಸವಿದೆ. ಒಂದು ಮಧ್ಯಮ ವರ್ಗದ ಕಾರಾದರೆ ಇನ್ನೊಂದು ವಿಲಾಸ ಜೀವನದ ಸಂಕೇತ. ಹಾಗಿರುವಾಗ ನ್ಯಾನೋ ಹಾಗೂ ಜಾಗ್ವಾರ್ ಒಂದೇ ಘಟಕದಲ್ಲಿ ನಿರ್ಮಾಣವಾದರೆ ಹೇಗಿರಬಹುದು?
ಇವೆಲ್ಲಕ್ಕೂ ಒಡೆಯ ಟಾಟಾ ಮೋಟಾರ್ಸ್ ಉತ್ತರಿಸಬೇಕಾಗುತ್ತದೆ. ಯಾಕೆಂದರೆ ಗುಜರಾತ್‌ನ ಸನಂದ್‌ನಲ್ಲಿರುವ ನ್ಯಾನೋ ಘಟಕದಲ್ಲಿ ದುಬಾರಿ ಜಾಗ್ವಾರ್ ಕಾರು ಉತ್ಪಾದನೆಯಾಗಲಿದೆಯೆಂಬ ವರದಿ ಹೊರಬಂದಿರುವುದು ವಾಹನ ಪ್ರೇಮಿಗಳಲ್ಲಿ ಅಚ್ಚರಿ ಮೂಡಿಸಿದೆ.

ವಿಷಯ ಏನೆಂದರೆ ಗುಜರಾತ್ ವಿಧಾನಸಭೆಯಲ್ಲೂ ಈ ಬಗ್ಗೆ ಚರ್ಚೆಯಾಗಿತ್ತು. ಪ್ರತಿಪಕ್ಷ ನಾಯಕ ಶಂಕರ್‌ಸಿನ್ಹ್ ವಾಘೆಲಾ ಅವರು ಸನಂದ್ ಘಟಕದಲ್ಲಿ ನ್ಯಾನೋ ಉತ್ಪಾದನೆ ಸ್ಥಗಿತಗೊಳಿಸಿ ಜಾಗ್ವಾರ್ ನಿರ್ಮಿಸುತ್ತಿರುವುದರ ಬಗ್ಗೆ ಪ್ರಶ್ನೆ ಎತ್ತಿದ್ದರು.
ಈ ಬಗ್ಗೆ ಟಾಟಾ ಮೋಟಾರ್ಸ್‌ನಿಂದ ಇದುವರೆಗೆ ಯಾವುದೇ ಅಧಿಕೃತ ಉತ್ತರ ಬಂದಿಲ್ಲ. ಜಗತ್ತಿನ ಅಗ್ಗದ ಕಾರು ತನ್ನ ಆವೇಗ ಕಾಯ್ದುಕೊಳ್ಳುವಲ್ಲಿ ವಿಫಲವಾಗಿರಬಹುದು. ಆದರೆ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿ ನಿರ್ಮಿಸಿರುವ ಘಟಕದಲ್ಲಿ ಐಷಾರಾಮಿ ಕಾರುಗಳನ್ನು ಉತ್ಪಾದಿಸುವುತ್ತಿರುವುದು ಜನ ಸಾಮಾನ್ಯರಲ್ಲಿ ಅಕ್ರೋಶಕ್ಕೆ ಎಡೆ ಮಾಡಿಕೊಟ್ಟಿದೆ.


Click it and Unblock the Notifications








