ಟಾಟಾ ನೂತನ ಕಾರಿನ ಹೆಸರು ಏನು ಗೊತ್ತೇ?
ನಿಮಗೆಲ್ಲರಿಗೂ ತಿಳಿದಿರುವಂತೆಯೇ ಫಾಲ್ಕನ್ 4 ಕೋಡ್ ನೇಮ್ ಪಡೆದುಕೊಂಡಿರುವ ಟಾಟಾದ ನೂತನ ಹ್ಯಾಚ್‌ಬ್ಯಾಕ್ ಕಾರು 2014 ಇಂಡಿಯಾ ಆಟೋ ಎಕ್ಸ್ ಪೋದಲ್ಲಿ ಲಾಂಚ್ ಪ್ರದರ್ಶನ ಕಾಣಲಿದೆ.
ಅಷ್ಟಕ್ಕೂ ಟಾಟಾದ ಈ ಬಹುನಿರೀಕ್ಷಿತ ಕಾರು ಯಾವ ಹೆಸರಿನಿಂದ ಗುರುತಿಸಿಕೊಳ್ಳಲಿದೆ ಎಂಬುದು ನಿಮಗೆ ಗೊತ್ತೇ? ಹೌದು, ಬಲ್ಲ ಮೂಲಗಳ ಪ್ರಕಾರ ಟಾಟಾದ ನೂತನ ಹ್ಯಾಚ್‌ಬ್ಯಾಕ್ ಕಾರು 'ಬೋಲ್ಟ್' ಎಂದು ಹೆಸರಿಸಿಕೊಳ್ಳುವ ಸಂಭವವಿದೆ.

ಇದು ಪ್ರಮುಖವಾಗಿಯೂ ಮಾರುತಿ ಸುಜುಕಿ ಸ್ವಿಫ್ಟ್ ಮತ್ತು ಹ್ಯುಂಡೈ ಗ್ರಾಂಡ್ ಐ10 ಕಾರುಗಳಿಗೆ ಸ್ಪರ್ಧಿಯಾಗಿರಲಿದೆ. ಇಡಿಯಾ ಆಟೋ ಎಕ್ಸ್ ಪೋದಲ್ಲಿ ಟಾಟಾದಿಂದ ಫಾಲ್ಕನ್ 5 ಕೋಡ್ ಪಡೆದುಕೊಂಡಿರುವ ಮಗದೊಂದು ಫೋರ್ ಸಬ್ ಮೀಟರ್ ಸೆಡಾನ್ ಕಾರು ಸಹ ಅನಾವರಣಗೊಳ್ಳಲಿದೆ.
ಈ ಎರಡು ಆವೃತ್ತಿಗಳು ಪೆಟ್ರೋಲ್ ಸೇರಿದಂತೆ ಡೀಸೆಲ್ ವೆರಿಯಂಟ್‌ಗಳಲ್ಲಿ ಲಭ್ಯವಿರಲಿದೆ. ಇದು 84 ಅಶ್ವಶಕ್ತಿ ಉತ್ಪಾದಿಸುವ (140 ಎನ್‌ಎಂ ಟಾರ್ಕ್) 1.2 ಲೀಟರ್ ರೆವೊಟ್ರೋನ್ ಫ್ಯೂಯಲ್ ಇಂಜೆಕ್ಟಡ್ ಪೆಟ್ರೋಲ್ ಹಾಗೂ 1.3 ಲೀಟರ್ ಫಿಯೆಟ್ ಮಲ್ಟಿಜೆಟ್ ಡೀಸೆಲ್ ಎಂಜಿನ್ ಪಡೆದುಕೊಳ್ಳಲಿದೆ. ಟಾಟಾ ಎಕ್ಸ್1 ಫ್ಲ್ಯಾಟ್‌ಫಾರ್ಮ್‌ನ್ಲಲಿ ನಿರ್ಮಾಣವಾಗುತ್ತಿರುವ ಟಾಟಾ ಬೋಲ್ಟ್, ಹೊಸತಾದ ವಿನ್ಯಾಸ ಪಡೆದುಕೊಳ್ಳಲಿದೆ. ಇದು ವಿಸ್ಟಾ ಕಾರಿಗೆ ಬದಲಿ ವ್ಯವಸ್ಥೆಯಾಗಿರಲಿದೆ.


Click it and Unblock the Notifications