ಟಾಟಾದಿಂದ 10 ನೂತನ ಪ್ರೈಮಾ ಟ್ರಕ್ ಲಾಂಚ್
ದೇಶದ ಅತಿ ದೊಡ್ಡ ವಾಹನ ತಯಾರಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, 10 ನೂತನ ಅತಿ ಭಾರದ ವಾಣಿಜ್ಯ ವಾಹನಗಳನ್ನು ಲಾಂಚ್ ಮಾಡಿದೆ. ಇವೆಲ್ಲವೂ ಪ್ರೈಮಾ ಎಲ್‌ಎಕ್ಸ್ ರೇಂಜ್‌ಗಳಲ್ಲಿ ಗುರುತಿಸಿಕೊಳ್ಳಲಿದೆ.
ಇತ್ತೀಚೆಗಷ್ಟೇ 2014 ಆಟೋ ಎಕ್ಸ್ ಪೋದಲ್ಲಿ ನೂತನ ಪ್ರೈಮಾ ಟ್ರಕ್ ರೇಂಜ್‌ಗಳನ್ನು ಪ್ರದರ್ಶನಕ್ಕಿರಿಸಿದ್ದ ಟಾಟಾ ಮೋಟಾರ್ಸ್, ವಾಣಿಜ್ಯ ಮಾರುಕಟ್ಟೆಯಲ್ಲಿ ತನ್ನ ಬಲ ಪ್ರದರ್ಶನ ನಡೆಸಿತ್ತು.

ಟಾಟಾ ಬಿಡುಗಡೆ ಮಾಡಿರುವ ಹತ್ತು ನೂತನ ಟ್ರಕ್ಕುಗಳ ಪೈಕಿ ಆರು ಭಾರ ಎಳೆಯುವಿಕೆ ಹಾಗೂ ಉಳಿದ ನಾಲ್ಕು ನಿರ್ಮಾಣ ವಿಭಾಗದಲ್ಲಿ ಕಾಣಿಸಿಕೊಳ್ಳಲಿದೆ.

ಗರಿಷ್ಠ ನಿರ್ವಹಣೆಯ ಟಾಟಾ ಟ್ರಕ್ ಹಣಕಾಸು ದೃಷ್ಟಿಕೋನದಲ್ಲಿ ಸೂಕ್ತವೆನಿಸಲಿದೆ ಎಂದು ಸಂಸ್ಥೆ ಅಭಿಪ್ರಾಯಪಟ್ಟಿದೆ.

ಸರಕು ವಿಭಾಗದಲ್ಲಿ ಕಾಣಿಸಿಕೊಂಡಿರುವ ಟಾಟಾ ಟ್ರಕ್‌ಗಳು ಇಂತಿದೆ: ಪ್ರೈಮಾ ಎಲ್‌ಎಕ್ಸ್ 4928.ಎಸ್ ಎಸ್ಆರ್‌ಟಿ, ಪ್ರೈಮಾ ಎಲ್‌ಎಕ್ಸ್ 2523.ಟಿ, ಪ್ರೈಮಾ ಎಲ್‌ಎಕ್ಸ್ 3123.ಟಿ, ಪ್ರೈಮಾ ಎಲ್‌ಎಕ್ಸ್ 4928. ಎಸ್ ಎಚ್‌ಆರ್‌ಟಿ, ಪ್ರೈಮಾ ಎಲ್‌ಎಕ್ಸ್ 4028.ಎಸ್ ಎಸ್ಆರ್ ಮತ್ತು ಪ್ರೈಮಾ ಎಲ್‌ಎಕ್ಸ್ 4028.ಎಸ್ ಎಚ್‌ಆರ್.

ಇತರ ನಾಲ್ಕು ನಿರ್ಮಾಣ ಮಾದರಿಗಳು: ಪ್ರೈಮಾ ಎಲ್ಎಕ್ಸ್ 3128.ಕೆ, ಪ್ರೈಮಾ ಎಲ್ಎಕ್ಸ್ 2528.ಕೆ, ಪ್ರೈಮಾ ಎಲ್ಎಕ್ಸ್ 2523.ಕೆ ಮತ್ತು ಪ್ರೈಮಾ ಎಲ್ಎಕ್ಸ್ 3123.ಕೆ.

ಅಷ್ಟೇ ಅಲ್ಲದೆ ಮಾರಾಟಗಾರರು ಹಾಗೂ ಖರೀದಿಗಾರರ ನಡುವಣ ಬಾಂಧವ್ಯ ವೃದ್ಧಿಸುವ ಸಲುವಾಗಿ 'ಪವರ್ ಆಫ್ 5' ಕಾರ್ಯಕ್ರಮಕ್ಕೂ ಟಾಟಾ ಚಾಲನೆ ನೀಡಿದೆ. ಇದರಲ್ಲಿ ಟಾಟಾ ಅಲರ್ಟ್, ಟಾಟಾ ಫ್ಲೀಟ್‌ಮ್ಯಾನ್, ಟ್ರಿಪಲ್ ಬೆನಿಫಿಟ್ ಇನ್ಸುರನ್ಸ್, ಟಾಟಾ ಮೋಟಾರ್ಸ್ 4 ವರ್ಷದ ವಾರಂಟಿ ಸೇರಿರಲಿದೆ.

ಒಟ್ಟಿನಲ್ಲಿ ಟಾಟಾ ಪ್ರೈಮಾ ಟ್ರಕ್ಕುಗಳು ದೇಶದ ವಾಣಿಜ್ಯ ವಿಭಾಗದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಕಾರಣವಾಗುವ ನಿರೀಕ್ಷೆಯನ್ನು ಸಂಸ್ಥೆ ಹೊಂದಿದೆ.


Click it and Unblock the Notifications








