ಸಂಸ್ಥೆ ತೊರೆಯುವಂತೆ 600ರಷ್ಟು ಕಾರ್ಮಿಕರಿಗೆ ಟಾಟಾ ಆದೇಶ
ಸಮಕಾಲೀನ ಮಾರುಕಟ್ಟೆಯಲ್ಲಿ ಕಾರು ಮಾರಾಟ ಹಿನ್ನಡೆಯಲ್ಲಿದೆ. ಈ ನಡುವೆ ದೇಶದ ಅತಿ ದೊಡ್ಡ ವಾಹನ ತಯಾರಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, 600ರಷ್ಟು ಕಾರ್ಮಿಕರಲ್ಲಿ ಸಂಸ್ಥೆ ಬಿಟ್ಟು ತೆರುಳುವಂತೆ ಆದೇಶ ಹೊರಡಿಸಿದೆ.
ಕಾರು ಮಾರಾಟ ಕುಸಿತದಿಂದಾಗಿ ಟಾಟಾ ಅತಿ ಹೆಚ್ಚು ನಷ್ಟ ಅನುಭವಿಸುತ್ತಿದೆ. ಈ ಎಲ್ಲ ಹಣಕಾಸು ಸ್ಥಿತಿಗಳನ್ನು ನಿಯಂತ್ರಿಸುವ ಸಲುವಾಗಿ 600ರಷ್ಟು ಕಾರ್ಮಿಕರಲ್ಲಿ ಸಂಸ್ಥೆ ತೊರೆಯುವಂತೆ ಆದೇಶಿಸಲಾಗಿದೆ.

ಬೆಲೆ ಕಡಿತಗೊಳಿಸುವ ನಿಟ್ಟಿನಲ್ಲಿ ಇಂತಹದೊಂದು ಯೋಜನೆಯನ್ನು ದಿವಂಗತ ಮಹಾನಿರ್ದೇಶಕ ಕಾರ್ಲ್ ಸ್ಲಿಮ್ ಆರಂಭಿಸಿದ್ದರು. ಕಳೆದ ಕೆಲವು ವರ್ಷಗಳಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಟಾಟಾ ಕುಸಿತದತ್ತ ಮುಖ ಮಾಡಿದೆ. ಕೇವಲ ಫೇಸ್‌ಲಿಫ್ಟ್ ವರ್ಷನ್‌ಗಳ ಹೊರತಾಗಿ ನೂತನ ಉತ್ಪನ್ನಗಳನ್ನು ಪರಿಚಯಿಸದಿರುವುದು ಸಹ ಸಂಸ್ಥೆಗೆ ಮಾರಕವಾಗಿ ಪರಿಣಮಿಸಿದೆ.


Click it and Unblock the Notifications