ಕಾರ್ಲ್ ಸ್ಲಿಮ್ ನಿಗೂಢ ಸಾವು ಆತ್ಮಹತ್ಯೆಯೇ?
ಬೃಹತ್ ಹೋಟೆಲ್ ಕಟ್ಟಡದಿಂದ ಆಯತಪ್ಪಿ ಕೆಳಗೆ ಬಿದ್ದಿರುವ ಟಾಟಾ ಮೋಟಾರ್ಸ್ ವಾಹನ ತಯಾರಿಕ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಕಾರ್ಲ್ ಸ್ಲಿಮ್ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದಾರೆ.
ಥಾಯ್ಲೆಂಡ್‌ನ ಬ್ಯಾಂಕಾಂಕ್‌ನಲ್ಲಿ ನಡೆದ ನಿರ್ದೇಶಕರ ಮಂಡಳಿ ಮಹಾಸಭೆಯಲ್ಲಿ ಪಾಲ್ಗೊಳ್ಳಲು ತೆರಳಿದ್ದ ಕಾರ್ಲ್ ಸ್ಲಿಮ್ ಭಾನುವಾರ ದಾರುಣವಾಗಿ ಸಾವನ್ನಪ್ಪಿರುವುದಾಗಿ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಹಿಂದೆ 2012 ಅಕ್ಟೋಬರ್ ತಿಂಗಳಲ್ಲಿ ಟಾಟಾ ಚುಕ್ಕಾಣಿ ಹಿಡಿದಿದ್ದ ಕಾರ್ಲ್ ಸ್ಲಿಮ್, ಸಂಸ್ಥೆಯ ಏಳಿಗೆಯಲ್ಲಿ ಮುಖ್ಯ ಪಾತ್ರ ವಹಿಸಿದ್ದರು. ಅವರ ಅತ್ಯುತ್ತಮ ಕಾರ್ಯ ವೈಖರಿಯಿಂದಾಗಿ ಟಾಟಾ ದೇಶಿಯ ಮಾರುಕಟ್ಟೆಯಲ್ಲಿ ತನ್ನ ಸ್ಥಾನ ಮರಳಿ ಪಡೆಯುವಲ್ಲಿ ಸಾಧ್ಯವಾಗಿತ್ತು.
ಪ್ರಸ್ತುತ ಕಾರ್ಲ್ ಸ್ಲಿಮ್ ಮರಣಕ್ಕೆ ವಾಹನೋದ್ಯಮ ಖೇದ ವ್ಯಕ್ತಪಡಿಸಿದೆ. ಪೊಲೀಸರು ತನಿಖೆ ಕೈಗೊಂಡಿದ್ದು, ಸಾವಿಗಿರುವ ನಿಖರ ಕಾರಣ ಪತ್ತೆ ಹಚ್ಚುವುದರಲ್ಲಿ ತೊಡಗಿದ್ದಾರೆ. ಕಾರ್ಲ್ ಸ್ಲಿಮ್ ಮರಣೋತ್ತರ ಪರೀಕ್ಷಾ ವರದಿಯಲ್ಲಿ ಈ ಬಗ್ಗೆ ನಿಖರ ಮಾಹಿತಿ ಸಿಗುವ ಸಾಧ್ಯತೆಯಿದೆ.
ಈ ಹಿಂದೆ 2007ರಿಂದ 2011ರ ಅವಧಿಯಲ್ಲಿ ಜನರಲ್ ಮೋಟಾರ್ಸ್ ಇಂಡಿಯಾ ಅಧ್ಯಕ್ಷರಾಗಿಯೂ ಕೆಲಸ ನಿರ್ವಹಿಸಿರುವ ಕಾರ್ಲ್ ಸ್ಲಿಮ್ ಮೆಚ್ಚುಗೆಗೆ ಪಾತ್ರವಾಗಿದ್ದರು.


Click it and Unblock the Notifications