ಟಾಟಾ ಉಪ ಮುಖ್ಯಸ್ಥ ಸ್ಥಾನಕ್ಕೆ ರವಿ ಕಾಂತ್ ರಾಜೀನಾಮೆ
ದೇಶದ ಅತಿ ದೊಡ್ಡ ವಾಹನ ತಯಾರಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, ಏಳಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ರವಿ ಕಾಂತ್ ಉಪ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಟಾಟಾ ಮೋಟಾರ್ಸ್ ಸಂಸ್ಥೆಯ ನಿಯಮಗಳ ಅನ್ವಯ ಪ್ರಾಯ ಪರಿಧಿಯನ್ನು ಕಡ್ಡಾಯವಾಗಿ ಪಾಲಿಸಲಾಗುತ್ತಿದ್ದು, 70 ವರ್ಷಕ್ಕೂ ಮೇಲ್ಪಟ್ಟ ಉದ್ಯೋಗಿಗಳು ಸಂಸ್ಥೆಯಲ್ಲಿ ಸೇವೆ ಸಲ್ಲಿಸುವಂತಿಲ್ಲ. ಇದರಂತೆ 2014 ಮೇ 31ಕ್ಕೆ ಜಾರಿಗೆ ಬರುವಂತೆಯೇ ರವಿಕಾಂತ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

2005 ಜುಲೈ 29ರಿಂದ 2009 ಜೂನ್ 1ರ ವರೆಗೆ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದ ರವಿಕಾಂತ್, ಜಗತ್ತಿನ ಅತಿ ಅಗ್ಗದ ನ್ಯಾನೋ ಕಾರು ಅಭಿವೃದ್ಧಿಯಲ್ಲಿ ದೊಡ್ಡ ಪಾತ್ರ ವಹಿಸಿದ್ದರು.
ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿರುವ ಟಾಟಾ ಮೋಟಾರ್ಸ್ ಮುಖ್ಯಸ್ಥ ಸೈರಸ್ ಪಿ ಮಿಸ್ತ್ರಿ, "ಸಂಸ್ಥೆಗೆ ಅಪಾರ ಸಲ್ಲಿಸುವ ಮೂಲಕ ಏಳಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ರವಿ ಅವರಿಗೆ ಕೃತಜ್ಞತೆ ಸಲ್ಲಿಸಲು ಬಯಸುತ್ತಿದ್ದು, ಅವರ ಭವಿಷ್ಯ ಕ್ಷೇಮವಾಗಿರಲಿ" ಎಂದು ಹಾರೈಸಿದ್ದಾರೆ.
ಇನ್ನು ಭವಿಷ್ಯದ ಟಾಟಾ ಯೋಜನೆಗಳ ಬಗ್ಗೆ ಗಮನ ಹರಿಸುವುದಾದ್ದಲ್ಲಿ ಬೋಲ್ಟ್ ಹ್ಯಾಚ್‌ಬ್ಯಾಕ್ ಹಾಗೂ ಸೆಡಾನ್ ಜೆಸ್ಟ್ ಸದ್ಯದಲ್ಲೇ ಬಿಡುಗಡೆಯಾಗಲಿದೆ.


Click it and Unblock the Notifications