ಪಾಕಿಸ್ತಾನಿ ಹ್ಯಾಕರ್ಸ್‌ಗಳಿಂದ ಟಾಟಾ ಮೋಟಾರ್ಸ್ ವೆಬ್‌ಸೈಟ್ ಹ್ಯಾಕ್?

By Nagaraja

ಬೆಚ್ಚಿ ಬೀಳಿಸುವ ಸುದ್ದಿಯೊಂದರಲ್ಲಿ ಪಾಕಿಸ್ತಾನ ಮೂಲದ ಹ್ಯಾಕರ್ಸ್‌ ಸಂಘವೊಂದು ಭಾರತದ ಪ್ರಖ್ಯಾತ ಆಟೋಮೊಬೈಲ್ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್ ವೆಬ್‌ಸೈಟ್‌ವೊಂದನ್ನು ಹ್ಯಾಕ್ ಮಾಡಿರುವ ಬಗ್ಗೆ ವರದಿಯಾಗಿದೆ.

ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಅದಕ್ಕೆ ಕನ್ನ ಹಾಕಲು ಹ್ಯಾಕರ್ಸ್ ಎಂಬ ಪೆಡಂಭೂತ ಸದಾ ಕಾರ್ಯಾಚರಿಸುತ್ತಲೇ ಇರುತ್ತವೆ. ಇದೀಗ ಟಾಟಾ ಮೋಟಾರ್ಸ್‌ನ, ಕನೆಸ್ಟ್ ಡಾಟ್ ಟಾಟಾಮೋಟಾರ್ಸ್ ಡಾಟ್ ಕಾಮ್ (http://connect.tatamotors.com/) ವೆಬ್‌ಸೈಟನ್ನು ಹ್ಯಾಕ್ ಮಾಡಿರುವ ಬಗ್ಗೆ ವರದಿಯಾಗಿದೆ.

ಪಾಕಿಸ್ತಾನಿ ಹ್ಯಾಕರ್ಸ್‌ಗಳಿಂದ ಟಾಟಾ ಮೋಟಾರ್ಸ್ ವೆಬ್‌ಸೈಟ್ ಹ್ಯಾಕ್?

ದೇಶದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್‌ನ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಒಂದಾಗಿರುವ ಕನೆಸ್ಟ್ ಡಾಟ್ ಟಾಟಾಮೋಟಾರ್ಸ್ ಡಾಟ್ ಕಾಮ್ ವೆಬ್‌ಸೈಟ್ ಅನ್ನು 'H4$N4!N H4XOR' ಎಂದು ಗುರುತಿಸಿಕೊಂಡಿರುವ ಹ್ಯಾಕರ್ಸ್ ಹ್ಯಾಕ್ ಮಾಡಿಕೊಂಡಿರುವುದಾಗಿ 'ಇ ಹ್ಯಾಕಿಂಗ್ ನ್ಯೂಸ್' ವರದಿ ಮಾಡಿದೆ.

ಪಾಕಿಸ್ತಾನಿ ಹ್ಯಾಕರ್ಸ್‌ಗಳಿಂದ ಟಾಟಾ ಮೋಟಾರ್ಸ್ ವೆಬ್‌ಸೈಟ್ ಹ್ಯಾಕ್?

ಹ್ಯಾಕರ್ಸ್‌ಗಳಿಂದ ಟಾಟಾ ಮೋಟಾರ್ಸ್ ಅಧಿಕೃತ ವೆಬ್‌ಸೈಟ್‌ಗೆ (http://www.tatamotors.com/) ಯಾವುದೇ ವಿಪತ್ತು ಸಂಭವಿಸಿಲ್ಲ. ಆದರೆ 2014 ಆಟೋ ಎಕ್ಸ್ ಪೋಗಾಗಿ ವಿಶೇಷವಾಗಿ ತಯಾರಿಸಲಾಗಿದ್ದ ವೆಬ್‌ಸೈಟನ್ನು (ಸಬ್ ಡೊಮೈನ್) ಹ್ಯಾಕ್ ಮಾಡುವಲ್ಲಿ ಸಫಲರಾಗಿದ್ದಾರೆ.

ಪಾಕಿಸ್ತಾನಿ ಹ್ಯಾಕರ್ಸ್‌ಗಳಿಂದ ಟಾಟಾ ಮೋಟಾರ್ಸ್ ವೆಬ್‌ಸೈಟ್ ಹ್ಯಾಕ್?

ಟಾಟಾ ವೆಬ್‌ಸೈಟ್ ಹ್ಯಾಕ್ ಮಾಡಿದ ಹ್ಯಾಕರ್ಸ್‌ಗಳು, ಇದರಲ್ಲಿ ಇಂಡಿಯಾ ತಯಾರಾಗಿರಿ ನಾವು ಬರುತ್ತಿದ್ದೇವೆ ("India B Ready I Am Coming :P ") ಎಂಬುದಾಗಿ ಉಲ್ಲೇಖಿಸಿರುವುದಾಗಿಯೂ ಮಾಹಿತಿಯಿದೆ.

ಪಾಕಿಸ್ತಾನಿ ಹ್ಯಾಕರ್ಸ್‌ಗಳಿಂದ ಟಾಟಾ ಮೋಟಾರ್ಸ್ ವೆಬ್‌ಸೈಟ್ ಹ್ಯಾಕ್?

ತಮ್ಮನ್ನು ತಾವೇ ಪಾಕಿಸ್ತಾನಿ ಹ್ಯಾಕ್ಸರ್ಸ್ ತಂಡವೆಂದು (Pakistan Haxors Crew) ಕರೆದುಕೊಳ್ಳುತ್ತಿರುವ ಈ ತಂಡವು, ಇದರ ಭವಿಷ್ಯತ್ ಫಲ ಹಿಂಬಾಲಿಸಲಿದೆ ಎಂದು ಎಚ್ಚರಿಕೆ ನೀಡುತ್ತಿದೆ.

ಪಾಕಿಸ್ತಾನಿ ಹ್ಯಾಕರ್ಸ್‌ಗಳಿಂದ ಟಾಟಾ ಮೋಟಾರ್ಸ್ ವೆಬ್‌ಸೈಟ್ ಹ್ಯಾಕ್?

ಪಾಕಿಸ್ತಾನಕ್ಕಾಗಿ ಹ್ಯಾಕಿಂಗ್ ಮಾಡುತ್ತಿರುವುದಾಗಿ ತಿಳಿಸಿರುವ ಈ ಹ್ಯಾಕರ್ಸ್, ಹ್ಯಾಕ್ಸರ್ ಹಸ್ಮೈನ್ (Haxor hasnain) ಎಂಬುದಾಗಿಯೂ ಗುರುತಿಸಿಕೊಂಡಿದ್ದು, ನಿಮ್ಮ ಭದ್ರತೆಯನ್ನು ಎಚ್ಚರಿಸುತ್ತಿದೆ. ನಮ್ಮ ಹೋರಾಟವು ಯಾವುದೇ ವ್ಯಕ್ತಿಯ ವಿರುದ್ಧವಲ್ಲ. ಬದಲಾಗಿ ಎಲ್ಲರ ವಿರುದ್ಧವಾಗಿದೆ ಎಂದು ಸಹ ತಿಳಿಸುತ್ತಿದೆ.

Article Published On: Monday, May 12, 2014, 14:07 [IST]
English summary
A website owned by Tata Motors has reportedly been hacked by a Pakistani group calling themselves "Pakistan Haxors Crew"
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+