ಮಗದೊಂದು ಸಣ್ಣ ಕಾರು ತಯಾರಿಯಲ್ಲಿ ಟಾಟಾ
ವಿಶ್ವದ ಅತಿ ಅಗ್ಗದ ಕಾರು ನ್ಯಾನೋ ತಯಾರಿಸಿದ್ದ ದೇಶದ ಅತಿ ದೊಡ್ಡ ವಾಹನ ತಯಾರಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, ಮಗದೊಂದು ಸಣ್ಣ ಕಾರಿನ ಅಭಿವೃದ್ಧಿಯಲ್ಲಿ ತೊಡಗಿದೆ. ನೂತನ ಕಾರು ಕೈಟ್ ಎಂದು ಹೆಸರಿಸಿಕೊಳ್ಳಲಿದೆ.
ಈ ಹಿಂದೆ 2014 ಫೆಬ್ರವರಿ ತಿಂಗಳಲ್ಲಿ ನಡೆದ ಆಟೋ ಎಕ್ಸ್ ಪೋದಲ್ಲಿ ಟಾಟಾ ಮೋಟಾರ್ಸ್ ಸಂಸ್ಥೆಯು, ನ್ಯಾನೋ ಟ್ವಿಸ್ಟ್ ಪವರ್ ಸ್ಟೀರಿಂಗ್ ಜೊತೆ ಬೋಲ್ಟ್ ಹ್ಯಾಚ್‌ಬ್ಯಾಕ್ ಹಾಗೂ ಜೆಸ್ಟ್ ಸೆಡಾನ್ ಕಾರುಗಳನ್ನು ಪರಿಚಯಿಸಿತ್ತು.

ಇದೇ ಸಂದರ್ಭದಲ್ಲಿ ನೆಕ್ಸನ್ ಕಾನ್ಸೆಪ್ಟ್ ಕಾರೊಂದನ್ನು ಪ್ರದರ್ಶಿಸಲಾಗಿತ್ತು. ಪ್ರಸ್ತುತ ಮಾರುಕಟ್ಟೆಯಲ್ಲಿ ಸಣ್ಣ ಕಾರುಗಳಿಗೆ ಅತಿ ಹೆಚ್ಚಿನ ಬೇಡಿಕೆಯಿದೆ. ಇದನ್ನು ಪರಿಗಣಿಸಿರುವ ಸಂಸ್ಥೆಯು ಕೈಟ್ ಕೋಡ್ ಹೆಸರಿನಲ್ಲಿ ನೂತನ ಮಾದರಿ ಅಭಿವೃದ್ಧಿಪಡಿಸುತ್ತಿದೆ.
ಇನ್ನೊಂದು ಮೂಲಗಳ ಪ್ರಕಾರ ನೆಕ್ಸಾನ್ ಕಾನ್ಸೆಪ್ಟ್ ಆಧಾರದಲ್ಲಿ ನೂತನ ಮಾದರಿ ವಿನ್ಯಾಸಗೊಳ್ಳಲಿದೆ. ಇದು ಗುಜರಾತ್‌ನ ಸನಂದ್ ಘಟಕದಲ್ಲಿ ನಿರ್ಮಾಣವಾಗಲಿದೆ. ಈ ಬಹುನಿರೀಕ್ಷಿತ ಕಾರು ಮುಂದಿನ ವರ್ಷ ಮಾರುಕಟ್ಟೆ ಪ್ರವೇಶವಾಗಲಿದೆ.


Click it and Unblock the Notifications








