ಟಾಟಾ ಮೂವಸ್ ಎಂಪಿವಿ ಲಾಂಚ್; ಬೆಲೆ 6.99 ಲಕ್ಷ ರು.
ದೇಶದ ಅತಿದೊಡ್ಡ ವಾಹನ ತಯಾರಿಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, ನೂತನ ಮೂವಸ್ ಬಹು ಬಳಕೆಯ ವಾಹನವನ್ನು ಲಾಂಚ್ ಮಾಡಿದೆ. ಇದರ ದೆಹಲಿ ಎಕ್ಸ್ ಶೋ ರೂಂ ದರ 6.99 ಲಕ್ಷ ರು.ಗಳಾಗಿರಲಿದೆ.
ವೆರಿಯಂಟ್...
ಒಟ್ಟು ಎರಡು ವೆರಿಯಂಟ್‌ಗಳಲ್ಲಿ ಟಾಟಾ ಮೂವಸ್ ಲಭ್ಯವಾಗಲಿದೆ. ಅವುಗಳೆಂದರೆ ಸಿಎಕ್ಸ್ ಹಾಗೂ ಎಲ್‌ಎಕ್ಸ್.

ಸೀಟು ವಿನ್ಯಾಸ.
ಮೂರು ವಿಧದ ಆಸನ ಶೈಲಿಗಳನ್ನು ಟಾಟಾ ಮೂವಸ್ ಪಡೆದುಕೊಳ್ಳಲಿದೆ. ಇದು ಏಳು ಸೀಟುಗಳ ಸೆಂಟ್ರಲ್ ಕ್ಯಾಪ್ಟನ್ ಸ್ಟೈಲ್ ಸೀಟು, 8 ಸೀಟುಗಳ ಫ್ರಂಟ್ ಫೇಸಿಂಗ್ ಬೆಂಚ್ ಹಾಗೂ 9 ಸೀಟುಗಳ ಅಂತಿಮ ಸಾಲಿನಲ್ಲಿ ಮುಖಾಮುಖಿ ಸೀಟುಗಳನ್ನು ಪಡೆದುಕೊಳ್ಳಲಿದೆ.
ಎಂಜಿನ್
ಅಂದ ಹಾಗೆ ನೂತನ ಮೂವಸ್ ಆವೃತ್ತಿಯು 2.2 ಲೀಟರ್, 4 ಸಿಲಿಂಡರ್ ವ್ಯಾರಿಕೊರ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 120 ಅಶ್ವಶಕ್ತಿ (250 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಇದು ಮುಂಭಾಗದ ಚಕ್ರಗಳಿಗೆ 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಮುಖಾಂತರ ಪವರ್ ವಿತರಿಸಲಿದೆ.
ಮೈಲೇಜ್...
ಟಾಟಾ ಸಂಸ್ಥೆಯ ಪ್ರಕಾರ ನೂತನ ಮೂವಸ್ ಮಲ್ಟಿ ಪರ್ಪಸ್ ವೆಹಿಕಲ್ ಪ್ರತಿ ಲೀಟರ್‌ಗೆ 15.16 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ. ಹಾಗೆಯೇ 180 ಎಂಎಂ ಗ್ರೌಂಡ್ ಕ್ಲಿಯರನ್ಸ್, 5.35 ಮೀಟರ್ ಟರ್ನಿಂಗ್ ರೇಡಿಯಸ್ ಹಾಗೂ ಹೊಂದಾಣಿಸಬಹುದಾದ ಪವರ್ ಸ್ಟೀರಿಂಗ್ ಪಡೆದುಕೊಳ್ಳಲಿದೆ.
ಕಲರ್...
ಇನ್ನುಳಿದಂತೆ ನೂತನ ಟಾಟಾ ಮೂವಸ್ ಎಂಪಿವಿ, ಪೋರ್ಸೆಲೈನ್ ವೈಟ್ ಹಾಗೂ ಮಿಟಿಯರ್ ಸಿಲ್ವರ್ ಬಣ್ಣಗಳಲ್ಲಿ ಲಭ್ಯವಿರಲಿದೆ.


Click it and Unblock the Notifications








