ಜೆಸ್ಟ್ ಡೆಲಿವರಿ; ಟಾಟಾ ಮೋಟಾರ್ಸ್ ಅಧ್ಯಕ್ಷರೇ ನಾಕುಷ್
ನಿಮಗೆಲ್ಲರಿಗೂ ತಿಳಿದಿರುವಂತೆಯೇ ಎಲ್ಲ ಹೊಸತನದಿಂದ ಕೂಡಿದ ಟಾಟಾ ಜೆಸ್ಟ್ ಭಾರತ ಮಾರುಕಟ್ಟೆಯನ್ನು ಈಗಾಗಲೇ ಪ್ರವೇಶಿಸಿದೆ. ಅಂತೆಯೇ ಮಾರಾಟದಲ್ಲಿ ಹೋಂಡಾ ಅಮೇಜ್‌ಗಳಂತಹ ಕಾಂಪಾಕ್ಟ್ ಸೆಡಾನ್ ಕಾರುಗಳನ್ನೇ ಹಿಂದಿಕ್ಕಿ ಮುನ್ನುತ್ತಿದೆ.
ಹಾಗಿರಬೇಕೆಂದರೆ ಟಾಟಾ ಜೆಸ್ಟ್ ವಿತರಣೆ ಶಿಪ್ರಗತಿಯಲ್ಲಿ ಸಾಗುತ್ತಿಲ್ಲ ಎಂಬ ಕಾರಣಕ್ಕಾಗಿ ಟಾಟಾ ಮೋಟಾರ್ಸ್ ಪ್ರಯಾಣಿಕ ವಿಭಾಗದ ಅಧ್ಯಕ್ಷರಾಗಿರುವ ಮಾಯಾಂಕ್ ಪರೀಕ್ ತಮ್ಮ ಅಸಂತುಷ್ಟಿಯನ್ನು ವ್ಯಕ್ತಪಡಿಸಿದ್ದಾರೆ.

ಹೋಂಡಾ ಅಮೇಜ್ ಜೊತೆಗೆ ಮಾರುತಿಯ ಜನಪ್ರಿಯ ಸ್ವಿಫ್ಟ್ ಡಿಜೈರ್ ಮತ್ತು ಹ್ಯುಂಡೈ ಎಕ್ಸ್‌ಸೆಂಟ್‌ಗಳಂತಹ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಿ ಕಣಕ್ಕಿಳಿದಿದ್ದ ಜೆಸ್ಟ್ ತನ್ನ ಅಸ್ತಿತ್ವವನ್ನು ಉಳಿಸಬೇಕಾಗಿರುವುದು ಟಾಟಾ ಪಾಲಿಗೆ ಅತಿ ಮಹತ್ವವೆನಿಸಿದೆ.
ವರದಿಗಳ ಪ್ರಕಾರ ಬೇಡಿಕೆ ಹೆಚ್ಚುತ್ತಿರುವ ಜೆಸ್ಟ್ ಕಾರಿನ ಕೆಲವು ನಿರ್ದಿಷ್ಟ ಮಾದರಿಗಳ ಕಾಯುವಿಕೆ ಅವಧಿ ತುಂಬಾ ದೀರ್ಘವಾಗಿದೆ. ಅಲ್ಲದೆ ಭಾರತ ಮಾರುಕಟ್ಟೆಗೆ ಹೊಸತಾಗಿರುವ ಜೆಸ್ಟ್ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ (ಎಎಂಟಿ) ವೇಟಿಂಗ್ ಪೀರೆಡ್ ಆರು ತಿಂಗಳ ವರೆಗೆ ವಿಸ್ತರಿಸಿದೆ ಎಂಬುದು ತಿಳಿದು ಬಂದಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಯಾಂಕ್ ಪರೀಕ್, "ಹೀಗಾಗಬಾರದಿತ್ತು. ಇದು ಸುವರ್ಣವಕಾಶವಾಗಿದ್ದು, ಗ್ರಾಹಕರಿಗೆ ಅಗತ್ಯವಿದ್ದಾಗ ನಾವು ವಿತರಣೆ ಮಾಡಬೇಕು. ಈ ನಿಟ್ಟಿನಲ್ಲಿ ನಿರ್ಮಾಣ ಸಾಮರ್ಥ್ಯ ವೃದ್ಧಿಸುವ ಪ್ರಯತ್ನ ನಡೆಯಬೇಕಾಗಿದ್ದು, ವಿತರಣೆ ಕಡಿಮೆಯಾಗಿದೆಯೇ ಎಂಬುದರ ಬಗ್ಗೆ ಮಾರಾಟಗಾರರನ್ನು ಸಂಪರ್ಕಿಸಬೇಕು" ಎಂದಿದ್ದಾರೆ.
ಆದರೆ ಇಲ್ಲಿ ಟಾಟಾ ಮೋಟಾರ್ಸ್ ಉನ್ನತ ಅಧಿಕಾರಿಯೊಬ್ಬರೇ ಇಂತಹದೊಂದು ಹೇಳಿಕೆ ನೀಡಿರುವುದು ವಿಪರ್ಯಾಸವೆನಿಸಿದೆ. ಈ ಹಿಂದೆ 2008ರಲ್ಲೂ ಟಾಟಾಗೆ ಇಂತಹದೊಂದು ಪರಿಸ್ಥಿತಿ ಎದುರಾಗಿತ್ತು. ಅಂದು ನ್ಯಾನೋ ಸಣ್ಣ ಕಾರಿನ ಬೇಡಿಕೆ ಪೂರೈಸಲು ದೇಶದ ಅತಿ ದೊಡ್ಡ ಸಂಸ್ಥೆ ವಿಫಲವಾಗಿತ್ತು.
ವಿಶ್ಲೇಷಕ ಪ್ರಕಾರ ಜೆಸ್ಟ್ ಕಾಯುವಿಕೆ ಅವಧಿ ಕಡಿಮೆ ಮಾಡುವಲ್ಲಿ ಟಾಟಾ ಯಶಸ್ಸು ಸಾಧಿಸಿದ್ದಲ್ಲಿ ಖಂಡಿತವಾಗಿಯೂ ಮಾರುಕಟ್ಟೆಯಲ್ಲಿ ಮೋಡಿ ಮಾಡಲಿದೆ ಎಂದಿದ್ದಾರೆ.
ಮೆಟ್ಜೆಲೆರ್ ರೋಡ್ ಟೆಕ್ ಝಡ್6 ಟ್ಯೂಬ್‌ಲೆಸ್ - ಶೇ.10ರಷ್ಟು ರಿಯಾಯಿತಿ ತ್ವರೆ ಮಾಡಿ


Click it and Unblock the Notifications