ಜೆ-ನರ್ಮ್ ಯೋಜನೆಯಡಿ ಹೊಸ ಬಸ್ ನಿರ್ಮಿಸಲಿರುವ ಟಾಟಾ

By Nagaraja

ಜವಾಹರಲಾಲ್‌ ನೆಹರೂ ರಾಷ್ಟ್ರೀಯ ನಗರ ಪುನರುಜ್ಜೀವನ ಯೋಜನೆ-II (ಜೆ-ನರ್ಮ್‌) ಅಡಿಯಲ್ಲಿ ಇನ್ನಷ್ಟು ಟಾಟಾ ಬಸ್ ಭಾರತದಲ್ಲಿ ಓಡಾಡಲಿದೆ. ಇದಕ್ಕೆ ಸಂಬಂಧಿಸಿದಂತೆ ಹೊಸ ಆರ್ಡರ್‌ಗಳನ್ನು ಟಾಟಾ ಮೋಟಾರ್ಸ್ ಪಡೆದುಕೊಂಡಿದೆ. ವರದಿಗಳ ಪ್ರಕಾರ ದಕ್ಷಿಣ ಭಾರತದ ರಾಜ್ಯ ಸಾರಿಗೆ ಇಲಾಖೆಯಿಂದ 928 ಬಸ್ಸುಗಳ ನಿರ್ಮಾಣಕ್ಕೆ ಟಾಟಾಗೆ ಆದೇಶ ಲಭಿಸಿದೆ.

ಇದಕ್ಕೆ ಸಮಾನವಾದ ಆರ್ಡರ್ ಕೋಲ್ಕತ್ತಾದಿಂದಲೂ (623) ಟಾಟಾ ಪಡೆದುಕೊಂಡಿದೆ. ಇವೆರಡು ಜೆ ನರ್ಮ್ ಯೋಜನೆ-II ಭಾಗವಾಗಿದೆ ಎಂದು ಟಾಟಾ ಪ್ರಕಟಣೆಯಲ್ಲಿ ತಿಳಿಸಿದೆ.

Tata Motors

ಜೆ-ನರ್ಮ್-II ಯೋಜನೆಯಡಿ ಒಟ್ಟು 2,700 ಬಸ್ಸುಗಳ ನಿರ್ಮಾಣಕ್ಕೆ ಟಾಟಾ ಜೊತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ದಕ್ಷಿಣ ಭಾರತದಿಂದ ಬಂದಿರುವ 928ರಲ್ಲಿ ಅತಿ ಹೆಚ್ಚು ಆದೇಶಗಳನ್ನು ಕರ್ನಾಟಕದಿಂದ ಪಡೆದುಕೊಂಡಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಇಲಾಖೆಯಿಂದ ಅತಿ ಹೆಚ್ಚು 487 ಅಂತೆಯೇ ಪಾಂಡಿಚೇರಿ ರಸ್ತೆ ಸಾರಿಗೆ ಕಾರ್ಪೋರೇಷನ್‌ನಿಂದ 40, ಕೇರಳ ರಸ್ತೆ ಸಾರಿಗೆ ಕಾರ್ಪೋರೇಷನ್‌ನಿಂದ 97 ಮತ್ತು ಉತ್ತರ ಪೂರ್ವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಕಾರ್ಪೋರೇಷನ್‌ನಿಂದ 304 ಯುನಿಟ್ ಹೊಸ ಬಸ್ಸುಗಳ ನಿರ್ಮಾಣಕ್ಕೆ ಟಾಟಾ ಸಹಿ ಹಾಕಿದೆ.

ಅಂತೆಯೇ ಪೂರ್ವ ಭಾರತದ ಪೈಕಿ ಕೋಲ್ಕತ್ತಾ ಹಾಗೂ ಮೇಘಾಲಯದಿಂದ ತಲಾ 120, ತ್ರಿಪುರದಿಂದ 73, ಅಸ್ಸಾಂನಿಂದ 270 ಮತ್ತು ಚತ್ತೀಸಗಡದಿಂದ 40 ಸೇರಿದಂತೆ ಒಟ್ಟು 623 ಬಸ್ಸುಗಳ ನಿರ್ಮಾಣ ಮಾಡಲಿದೆ.

ಈ ಎಲ್ಲ ಬಸ್ಸುಗಳಲ್ಲಿ ಸಿಸಿಟಿವಿ ಆಳವಡಿಸಲಾಗುತ್ತಿದ್ದು, ಪ್ರತಿಯೊಂದು ಆಗು ಹೋಗುಗಳ ಬಗ್ಗೆ ನಿಖರವಾಗಿ ತಿಳಿಯಲು ಸಹಕಾರಿಯಾಗಲಿದೆ. ಈ ಎಲ್ಲ ಬಸ್ಸುಗಳು ಧಾರವಾಡ ಹಾಗೂ ಲಕ್ನೋದಲ್ಲಿ ಸ್ಥಿತಗೊಂಡಿರುವ ಟಾಟಾ ಮಾರ್ಕೊಪೊಲೊ ಮೋಟಾರ್ಸ್ ಲಿಮಿಟೆಡ್ (ಟಿಎಂಎಂಎಲ್) ಘಟಕದಲ್ಲಿ ನಿರ್ಮಾಣವಾಗಲಿದೆ.

More from DriveSpark

Article Published On: Friday, October 17, 2014, 8:28 [IST]
English summary
Tata Motors receives Fresh Bus Orders From State Transport Authorities under the JnNURM - II scheme. 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+