ಟೆಸ್ಲಾ ಮಾಡೆಲ್ ಎಸ್ ಫೋರ್ ವೀಲ್ ಡ್ರೈವ್ ಲಾಂಚ್

By Nagaraja

ಅಮೆರಿಕ ಮೂಲದ ಪ್ರಖ್ಯಾತ ಕಾರು ತಯಾರಿಕ ಸಂಸ್ಥೆಯಾಗಿರುವ ಟೆಸ್ಲಾ ಮೋಟಾರ್ಸ್, ಜನಪ್ರಿಯ ಮಾಡೆಲ್ ಎಸ್ ಫೋರ್ ವೀಲ್ ಡ್ರೈವ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಈ ಪೈಕಿ ಫ್ಲ್ಯಾಗ್‌ಶಿಪ್ ಟೆಸ್ಲಾ ಪಿ85ಡಿ ಮಾದರಿ ಹೆಚ್ಚು ಗಮನ ಸೆಳೆದಿದ್ದು, ಬರೋಬ್ಬರಿ 691 ಅಶ್ವಶಕ್ತಿ (95 ಕೆಜಿಎಂ) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಇದರೊಂದಿಗೆ ಟೆಸ್ಲಾ ಸಾಲಿಗೆ ಮಗದೊಂದು ಮಾಡೆಲ್ ಎಸ್ ಫೋರ್ ವೀಲ್ ಡ್ರೈವ್ ಸಿಸ್ಟಂ ಎಂಟ್ರಿ ಪಡೆದುಕೊಂಡಿದೆ. ಅದೇ ಹೊತ್ತಿಗೆ ಡಿ ವರ್ಷನ್ ಎಲೆಕ್ಟ್ರಿಕ್ ಮೋಟಾರುನೊಂದಿಗೆ ಎರಡು ಬದಿಗಳಲ್ಲೂ ಎಕ್ಸೆಲ್ ವ್ಯವಸ್ಥೆ ಪಡೆದುಕೊಂಡಿರಲಿದೆ.

Tesla Model S 4WD

ಒಟ್ಟು ಮೂರು ವೆರಿಯಂಟ್‌ಗಳಲ್ಲಿ ಟೆಸ್ಲಾ ಮಾಡೆಲ್ ಎಸ್ ಲಭ್ಯವಾಗಲಿದೆ. ಅವುಗಳೆಂದರೆ 60ಡಿ, 85ಡಿ ಮತ್ತು ಪಿ85ಡಿ. ಇವೆಲ್ಲವೂ ಹಿಂದೆಂದಿಗಿಂತಲೂ ಅತ್ಯುತ್ತಮ ಚಾಲನಾ ಅನುಭವದ ಜೊತೆಗೆ ಸ್ಥಿರತೆ ಕಾಪಾಡಿಕೊಳ್ಳಲಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಟೆಸ್ಲಾ 60ಡಿ ಮತ್ತು 85ಡಿ ಮಾದರಿಗಳು 188 ಅಶ್ವಶಕ್ತಿ ಉತ್ಪಾದಿಸಲಿದೆ. ಈ ಪೈಕಿ 60ಡಿ ವೆರಿಯಂಟ್ ಕೇವಲ 5.7 ಸೆಕೆಂಡುಗಳಲ್ಲೇ ಗಂಟೆಗೆ 0-97 ಕೀ.ಮೀ. ಅಂತೆಯೇ ಗರಿಷ್ಠ ಗಂಟೆಗೆ 201 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ. ಅದೇ ಹೊತ್ತಿಗೆ ಗರಿಷ್ಠ ನಿರ್ವಹಣೆಯ 85ಡಿ 5.2 ಸೆಕೆಂಡುಗಳಲ್ಲಿ ಗಂಟೆಗೆ 0-97 ಕೀ.ಮೀ. ಮತ್ತು ಗರಿಷ್ಠ ಗಂಟೆಗೆ 250 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ. ಇವೆರಡು ಅನುಕ್ರಮವಾಗಿ 362 ಕೀ.ಮೀ. ಮತ್ತು 475 ಕೀ.ಮೀ. ವ್ಯಾಪಿಯ ವರೆಗೆ ಚಲಿಸಲಿದೆ.

ಆದರೆ ಇಲ್ಲಿ ಗಮನಾರ್ಹ ನಿರ್ವಹಣೆಯೊಂದಿಗೆ ಮುಂದೆ ಬಂದಿರುವ ಪಿ85ಡಿ ಮಾದರಿಯ ಮುಂದಿನ ಎಲೆಕ್ಟ್ರಿಕ್ ಮೋಟಾರು 221 ಅಶ್ವಶಕ್ತಿ ಮತ್ತು ಹಿಂದುಗಡೆ 470 ಅಶ್ವಶಕ್ತಿ ಉತ್ಪಾದಿಸಲಿದೆ. ಇವೆರಡು ಜೊತೆಗೆ ಬರೋಬ್ಬರಿ 691 ಬಿಎಚ್‌ಪಿ ಉತ್ಪಾದಿಸಲಿದೆ. ಅಲ್ಲದೆ 3.2 ಸೆಕೆಂಡುಗಳಲ್ಲೇ ಗಂಟೆಗೆ 0-97 ಕೀ.ಮೀ. ವೇಗ, 443 ಕೀ.ಮೀ. ವ್ಯಾಪ್ತಿಯನ್ನು ಹೊಂದಿರುತ್ತದೆ.

Article Published On: Monday, October 13, 2014, 17:44 [IST]
English summary
Tesla has launched new four-wheel-drive models, including a flagship P85D.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+