ಹೊಸ ಸ್ಕೋಡಾ ರಾಪಿಡ್ 'ಸಿಂಪ್ಲಿ ಕ್ಲೆವರ್' ಜಾಹೀರಾತು
ಯುರೋಪ್‌ನ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆ ಫೋಕ್ಸ್‌ವ್ಯಾಗನ್ ಅಧೀನತೆಯಲ್ಲಿರುವ ಜೆಕ್ ಗಣರಾಜ್ಯದ ಪ್ರತಿಷ್ಠಿತ ಸ್ಕೋಡಾ ಸಂಸ್ಥೆಯು ಇತ್ತೀಚೆಗಷ್ಟೇ ನೂತರ ರಾಪಿಡ್ ಆವೃತ್ತಿಯನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿತ್ತು. ಇದರ ಬೆನ್ನಲ್ಲೇ ಸಂಸ್ಥೆಯು ಹೊಸತಾದ ಟಿ.ವಿ ಜಾಹೀರಾತನ್ನು ಹೊರಬಿಟ್ಟಿದೆ.
'ಸಿಂಪ್ಲಿ ಕ್ಲೆವರ್' ಎಂದು ಹೆಸರಿಸಿಕೊಂಡಿರುವ ಈ ಟಿ.ವಿ ಜಾಹೀರಾತಿನಲ್ಲಿ ನೂತನ ಸ್ಕೋಡಾ ರಾಪಿಡ್ ಕಾರಿನ ನೋಟ, ಚಾಲನೆ ಮತ್ತು ಚೈತನ್ಯವನ್ನು ಬಿಂಬಿಸಲಾಗುತ್ತದೆ. ಅಲ್ಲದೆ ವಾಹನ ಪ್ರೇಮಿಗಳ ಗಮನ ಸೆಳೆಯುವಲ್ಲಿಯೂ ಸಂಸ್ಥೆ ಯಶಸ್ವಿಯಾಗಿದೆ.
ಹೊಸ ಸ್ಕೋಡಾ ರಾಪಿಡ್ 1.5 ಲೀಟರ್ ಟಿಡಿಐ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದ್ದು, 7 ಸ್ಪೀಡ್ ಆಟೋಮ್ಯಾಟಿಕ್ ಡಿಎಸ್‌ಜಿ ಗೇರ್ ಬಾಕ್ಸ್ ಹೊಂದಿರುತ್ತದೆ. ಇದು ಚಾಲಕರಿಗೆ ರೋಚಕ ಚಾಲನಾ ಅನುಭವ ನೀಡಲಿದೆ.
ಇಲ್ಲಿದೆ ನೋಡಿ ಹೊಸ ಸ್ಕೋಡಾ ರಾಪಿಡ್ ವೀಡಿಯೋ


Click it and Unblock the Notifications








