ಕಳೆಗುಂದಿದ ಸ್ವಿಫ್ಟ್; ಟಾಪ್ 10 ಪಟ್ಟಿಗೆ ಸಿಯಾಝ್ ಲಗ್ಗೆ

By Nagaraja

ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಮಾರುತಿ ಸುಜುಕಿ ಭರ್ಜರಿ ಮಾರಾಟ ಯಶಸ್ಸನ್ನು ಮಗದೊಮ್ಮೆ ಮುಂದುವರಿಸಿಕೊಂಡು ಹೋಗುವಲ್ಲಿ ಯಶ ಕಂಡಿದೆ. ಅಷ್ಟೇ ಯಾಕೆ 2014 ಅಕ್ಟೋಬರ್ ತಿಂಗಳ ಮಾರಾಟದ ಟಾಪ್ 10 ಪಟ್ಟಿಯ ಪೈಕಿ ಆರು ಕಾರುಗಳು ಮಾರುತಿಗೆ ಸೇರಿದ್ದಾಗಿವೆ.

ಮಾರುತಿಯ ಸರ್ವಕಾಲಿಕ ಶ್ರೇಷ್ಠ ಕಾರುಗಳಲ್ಲಿ ಒಂದಾಗಿರುವ ಸ್ವಿಫ್ಟ್ ಹ್ಯಾಚ್‌ಬ್ಯಾಕ್ ಸ್ವಲ್ಪ ಹಿನ್ನೆಡೆ ಅನುಭವಿಸಿದ್ದರೂ ಇತ್ತೀಚೆಗಷ್ಟೇ ಬಿಡುಗಡೆಗೊಂಡಿರುವ ಮಾರುತಿ ಸಿಯಾಝ್ ಸೆಡಾನ್ ಮತ್ತು ಸೆಲೆರಿಯೊ ಮಾದರಿ ಅಗ್ರ 10ರ ಪಟ್ಟಿಗೆ ಲಗ್ಗೆಯಿಡಲು ಯಶಸ್ವಿಯಾಗಿದೆ.

top maruti cars

ಪ್ರಯಾಣಿಕ ಕಾರು ಮಾರಾಟ - 2014 ಅಕ್ಟೋಬರ್ (ಯುನಿಟ್‌ಗಳಲ್ಲಿ)
  • 1.ಮಾರುತಿ ಆಲ್ಟೊ - 21,443
  • 2. ಸ್ವಿಫ್ಟ್ ಡಿಜೈರ್ - 16,542
  • 3. ವ್ಯಾಗನಾರ್ - 14,310
  • 4. ಸ್ವಿಫ್ಟ್ - 11,965
  • 5. ಹ್ಯುಂಡೈ ಎಲೈಟ್ ಐ20 - 8,895
  • 6. ಗ್ರಾಂಡ್ ಐ10 - 8,400
  • 7. ಹ್ಯುಂಡೈ ಇಯಾನ್ - 6,986
  • 8. ಮಾರುತಿ ಸಿಯಾಝ್ - 6,345
  • 9. ಮಾರುತಿ ಸೆಲೆರಿಯೊ - 5,723
  • 10. ಹೋಂಡಾ ಸಿಟಿ - 5,120

ಕಳೆಗುಂದಿದ ಸ್ವಿಫ್ಟ್
ಸಹಜವಾಗಿಯೇ ಹಬ್ಬದ ಆವೃತ್ತಿಯ ಹಿನ್ನೆಲೆಯಲ್ಲಿ ವರ್ಷಂಪ್ರತಿ ಅಕ್ಟೋಬರ್ ತಿಂಗಳಲ್ಲಿ ವಾಹನ ಸಂಸ್ಥೆಗಳು ಉತ್ತಮ ಮಾರಾಟ ಕಾಯ್ದುಕೊಳ್ಳುತ್ತದೆ. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಮಾರಾಟದಲ್ಲಿ ಭಾರಿ ಕುಸಿತ ಕಂಡಿರುವ ಸ್ವಿಫ್ಟ್, ಎರಡು ಸ್ಥಾನಗಳ ಹಿಂಬಡ್ತಿ ಪಡೆದುಕೊಂಡು ನಾಲ್ಕನೇ ಸ್ಥಾನಕ್ಕೆ ಇಳಿದಿದೆ. ಕಳೆದ ವರ್ಷ 19,047 ಯುನಿಟ್‌ಗಳ ಮಾರಾಟ ಕಂಡಿದ್ದರೆ ಈ ಬಾರಿಯದು 11,965 ಯುನಿಟ್‌ಗಳಿಗೆ ಇಳಿಕೆ ಕಂಡಿದೆ.

ಮಾರುತಿ ಸುಜುಕಿ ಫೇಸ್‌ಲಿಫ್ಟ್ ಮಾದರಿಯು ಅಕ್ಟೋಬರ್ 28ರಂದು ಬಿಡುಗಡೆಯಾಗಿತ್ತು. ಈ ಹಿನ್ನೆಲೆಯಲ್ಲಿ ಗ್ರಾಹಕರು ಕಾಯುವಿಕೆ ಅನುಸರಿಸಿರುವುದೇ ಸ್ವಿಫ್ಟ್ ಮಾರಾಟ ಇಳಿಕೆಗೆ ಕಾರಣವಾಗಿದೆ ಎನ್ನಲಾಗುತ್ತಿದೆ.

ಟಾಪ್ 10 ಪಟ್ಟಿಗೆ ಸಿಯಾಝ್ ಎಂಟ್ರಿ
ಈ ನಡುವೆ ಮಧ್ಯಮ ಗಾತ್ರದ ಸೆಡಾನ್ ಕಾರಾಗಿರುವ ಮಾರುತಿ ಸುಜುಕಿ ಸಿಯಾಝ್ ಟಾಪ್ 10 ಪಟ್ಟಿಗೆ ಎಂಟ್ರಿ ಕೊಟ್ಟಿದೆ. ಅಷ್ಟೇ ಯಾಕೆ 6,345 ಯುನಿಟ್‌ಗಳೊಂದಿಗೆ ಎಂಟನೇ ಸ್ಥಾನಕ್ಕೆ ಲಗ್ಗೆಯಿಟ್ಟಿರುವ ಸಿಯಾಝ್ ತನ್ನ ಪ್ರತಿಸ್ಪರ್ಧಿ ಹೋಂಡಾ ಸಿಟಿಯನ್ನು 10ನೇ ಸ್ಥಾನಕ್ಕೆ ತಳ್ಳಿ ಹಾಕಿದೆ.

ಫ್ರೈಡೇ ಸೇಲ್: ಕಾರು ಆಕ್ಸೆಸರಿ ಹೊಸ ಆಗಮನ - ಶೇ. 20ರಷ್ಟು ರಿಯಾಯಿತಿ ತ್ವರೆ ಮಾಡಿ!

More from DriveSpark

Article Published On: Friday, November 21, 2014, 10:14 [IST]
English summary
Car makers suffered post-festive season pangs in October with major companies reporting decline in domestic sales. Here is the top 10 cars sold in October 2014.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+